ವಿಶ್ವದಾದ್ಯಂತ ಶರವೇಗದಲ್ಲಿ ಹಬ್ಬಿ ಮನುಷ್ಯನ ಜೀವ, ಜೀವನದ ಜತೆಗೆ ಚೆಲ್ಲಾಟವಾಡುತ್ತಿರುವ ಕೋವಿಡ್ ವೈರಸ್ ಅನ್ನು ಬಹಳ ವರ್ಷಗಳ ಹಿಂದೆಯೇ ಪತ್ತೆ ಹಚ್ಚಲಾಗಿತ್ತು.
ಸಾಂಕ್ರಾಮಿಕ ರೋಗವನ್ನು ಮೊದಲು ಪತ್ತೆ ಮಾಡಿದ್ದು ಸ್ಕಾಟ್ಲೆಂಡ್‌ನ ವಿಜ್ಞಾನಿ ಜೂನ್ ಅಲ್ಮೇಡಾ ಎಂಬ ಮಹಿಳೆ. ಬಸ್ ಚಾಲಕರೊಬ್ಬರ ಮಗಳಾದ ಅಲ್ಮೇಡಾ ಅವರು ಇಮ್ಯುನೊ ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯಲ್ಲಿ ಪರಿಣಿತಿ ಹೊಂದಿದ್ದರು.
16 ವರ್ಷದಲ್ಲೇ ಶಿಕ್ಷಣಕ್ಕೆ ತಿಲಾಂಜಲಿ ಹಾಡಿದ್ದ ಅವರು ಲ್ಯಾಬ್ ಟೆಕ್ನಿಷಿಯನ್ ಆಗಿ ಗ್ಲಾಸ್ಗೋ ರಾಯಲ್ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದ್ದರು. ಅಲ್ಲಿ ಸೂಕ್ಷ್ಮದರ್ಶಕದ ಮೂಲಕ ಮಾದರಿಗಳನ್ನು ವಿಶ್ಲೇಷಿಸಿ ವಿವಿಧ ಪ್ರಯೋಗ ನಡೆಸಿದ್ದರು. ಬಳಿಕ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದ ಅವರು ಕೋವಿಡ್ ರೀತಿಯಲ್ಲಿನ ವೈರಾಣು ಬಗ್ಗೆ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.
1964ರಲ್ಲೇ ಕೋವಿಡ್ ಪತ್ತೆ ಹಚ್ಚಿದ್ದರು, ಸರ್ರೆಯ ಶಾಲಾ ಬಾಲಕನಲ್ಲಿ ವೈರಸ್ ಕಾಣಿಸಿಕೊಂಡಿತ್ತು. ಇದಕ್ಕೆ ಬಿ814 ಎಂದು ಅಲ್ಮೇಡಾ ಹೆಸರಿಟ್ಟಿದ್ದರು. ಮೈಕೈ ನೋವು, ನೆಗಡಿ, ಜ್ವರಗಳಿಂದ ಕೂಡಿದ ಸಾಂಕ್ರಾಮಿಕ ವೈರಸ್ ರೋಗ ಎಂದು ವ್ಯಾಖ್ಯಾನಿಸಿದ್ದರು.
2007 ತಮ್ಮ 77 ವಯಸ್ಸಿನಲ್ಲಿ ಅಲ್ಮೇಡಾ ನಿಧನರಾಗಿದ್ದರು. ಕೋವಿಡ್ ಕುರಿತ ಸಂಶೋಧನೆಯಲ್ಲಿ ಚೀನ ಸಂಶೋಧಕರಿಗೆ ಅಲ್ಮೇಡಾ ಸಿದ್ಧಪಡಿಸಿದ್ದ ವರದಿ ನೆರವಾಗಿದೆ ಎಂದು ಸ್ಕಾಟ್ಲೆಂಡ್‌ನ ಮಾಧ್ಯಮಗಳು ವರದಿ ಮಾಡಿವೆ.