ಉಪ್ಪಿನಬೆಟಗೇರಿ: ಗ್ರಾಮದ ಜಗದ್ಗುರು ಮೂರುಸಾವಿರ ವಿರಕ್ತ ಮಠದಲ್ಲಿ ಗ್ರಾಮದ ಎಲ್ಲ ಸ್ತ್ರೀಶಕ್ತಿ ಸಂಘಗಳು, ಸಹಕಾರಿ ಸಂಘ, ಎಸ್‌ಡಿಎಂ ಆಸ್ಪತ್ರೆ ಸತ್ತೂರ ಆಶ್ರಯದಲ್ಲಿ ಸೋಮವಾರ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣ ಸಮಾವೇಶ, ಮಹಿಳಾ ಸಾಧನಾ ಪ್ರಶಸ್ತಿ ಪ್ರದಾನ ಮತ್ತು ಮಹಿಳೆಯರ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.
ವೈಶೂದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪುರುಷರಿಗಿಂತ ಮಹಿಳೆಯರ ಮೇಲೆ ಕುಟುಂಬದ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಗಮನ ನೀಡುತ್ತಿಲ್ಲ. ಮಹಿಳೆಯರು ಕುಟುಂಬದ ಜವಾಬ್ದಾರಿ ಹೊರುವುದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು.
ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಅಂಕ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ. ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಬಾರಿ 25ನೇ ಸ್ಥಾನದಲ್ಲಿದ್ದ ಧಾರವಾಡ ಜಿಲ್ಲೆ ಈ ಬಾರಿ 10ನೇ ಸ್ಥಾನ ಪಡೆದಿದೆ. ಅದರಲ್ಲೂ ಮಹಿಳೆಯರೇ ಹೆಚ್ಚು ಅಂಕ ಪಡೆದಿದ್ದಾರೆ ಎಂದರು. ಉಪನ್ಯಾಸಕಿ ಪ್ರೇಮಾ ಅಂಗಡಿ ಮಾತನಾಡಿ, ಮಹಿಳೆಯು ಕುಟುಂಬದ ಕೇಂದ್ರ ಬಿಂದು.
ಅವಳಿಲ್ಲದೆ ಕುಟುಂಬ ಮುನ್ನಡೆಸುವುದು ಅಸಾಧ್ಯ. ಆದ್ದರಿಂದ ಮಹಿಳೆಯರು ಮಾನಸಿಕ ಖನ್ನತೆಗೆ ಒಳಗಾಗಿ ಆರೋಗ್ಯದ ಕಡೆಗೆ ಗಮನ ನೀಡುತ್ತಿಲ್ಲ ಎಂದರು. ರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರಂತೆ ಸಾಮಾಜಿಕ, ಧಾರ್ಮಿಕ, ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದರು.
ಗ್ರಾಪಂ ಮಾಜಿ ಸದಸ್ಯೆ ಸುನಂದಾ ಮಡಿವಾಳರ ಮಾತನಾಡಿದರು. ಎಸ್‌ಡಿಎಂ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ| ಅಶ್ವಿನಿ, ಮಾಜಿ ಶಾಸಕಿ ಸೀಮಾ ಮಸೂತಿ, ಜಿಪಂ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ, ಸಿಡಿಪಿಒ ಎಸ್.ಬಿ. ಮಾಸಮಡ್ಡಿ ಮಾತನಾಡಿದರು. ತಾಪಂ ಸದಸ್ಯೆ ಶಾಂತವ್ವ ಸಂಕಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಉಪಾಧ್ಯಕ್ಷೆ ರತ್ನವ್ವ ವಿಜಾಪುರ, ರಾಮಲಿಂಗಪ್ಪ ನವಲಗುಂದ, ಡಾ| ಪ್ರೀತಿ ಪಾಟೀಲ, ಡಾ| ಡಿ.ಐ.ನದಾಫ್, ಲಕ್ಷಿ ಲೋಕೂರ, ಗುರು ತಿಗಡಿ, ಅಕ್ಕಮಹಾದೇವಿ ನವಲಗುಂದ, ಛಾಯಾ ಪದಕಿ, ದಾûಾಯಿಣಿ ತೊಗ್ಗಿ ಇದ್ದರು. ಮಹಿಳೆಯರ ಉಚಿತ ಆರೋಗ್ಯ ತಪಾಸಣೆಯಲ್ಲಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಸುಮಾರು 80ಕ್ಕೂ ಅಧಿಕ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾಯಕ ಯೋಗಿಗಳಾದ ಚನ್ನವ್ವ ಕುಂಬಾರ, ಲಕ್ಷಿ ಲೋಕೂರ, ಕಲಾವತಿ ಸಿದ್ದಾಪುರ, ಲಲಿತಾ ಕುಬುಸದ, ಅಕ್ಕಮ್ಮ ಯಲಿಗಾರ ಅವರನ್ನು ಸನ್ಮಾನಿಸಲಾಯಿತು.