Advertisement
ನಂದಿನಿ ಲೇಔಟ್‌ನ ಸಂಜಯ ಗಾಂಧಿ ನಗರ ನಿವಾಸಿ ಅನಿತಾ (31) ಮತ್ತು ಉತ್ತರಹಳ್ಳಿಯ ರಾಕೇಶ್ (26) ಬಂಧಿತರು. ಆರೋಪಿಗಳು 2022ರ ಜೂನ್ 18ರಂದು ಆಂಜನೇಯ (37) ಎಂಬಾತನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.
ತ್ತಿದ್ದು, ಮದ್ಯ ವ್ಯಸನಿಯಾಗಿದ್ದ. ಅನಿತಾ ಗಾರ್ಮೆಂಟ್ಸ್ ಉದ್ಯೋಗಿಯಾಗಿ ದ್ದಳು. ರಾಕೇಶ್ ಕ್ಯಾಂಟೀನ್ ಕಾರ್ಮಿಕನಾಗಿದ್ದ. ಸಹೋದರಿಯ ಮನೆಗೆ ಹೋಗಿದ್ದಾಗ ಅನಿತಾಳಿಗೆ ರಾಕೇಶ್ ಪರಿಚಯವಾಗಿದ್ದು, ನಾಲ್ಕೈದು ವರ್ಷಗಳಿಂದ ಅವರ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ತಿಳಿದ ಬಳಿಕ ಆಂಜನೇಯನು ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು. ಜೂನ್ 18ರಂದು ಅನಿತಾ ಮತ್ತು ರಾಕೇಶ್ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಆಂಜನೇಯನನ್ನು ಕೊಂದಿದ್ದರು. ಮರುದಿನ ಬೆಳಗ್ಗೆ ಸಂಬಂಧಿಕರಿಗೆ ಕರೆ ಮಾಡಿ ಆಂಜನೇಯ ಕುಡಿದು ಮೃತಪಟ್ಟಿ ದ್ದಾನೆ ಎಂದು ವಿಚಾರ ತಿಳಿಸಿದ್ದಳು. ಆತ ಕೂಡ ಅದೇ ರೀತಿ ವರ್ತಿಸುತ್ತಿದ್ದ ಎಂದು ನಂಬಿದ ಸಂಬಂಧಿಕರು ಅಂತ್ಯಕ್ರಿಯೆ ಮುಗಿಸಿದ್ದರು.
Related Articles
ಕೊಲೆ ಕೃತ್ಯವನ್ನು ಮಕ್ಕಳು ನೋಡಿದ್ದರು. ಆದರೆ ಯಾರಿಗೂ ಹೇಳದಂತೆ ಅನಿತಾ ಬೆದರಿಸಿದ್ದಳು. ಕೆಲವೊಮ್ಮೆ ಮಕ್ಕಳು ಈ ವಿಚಾರ ಪ್ರಸ್ತಾವಿಸಿದರೆ ಚಾಕು ತೋರಿಸಿ ಕೊಲೆಗೈಯ್ಯುವುದಾಗಿ ಬೆದರಿಕೆ ಹಾಕುತ್ತಿದ್ದಳು. ಮೂರು ತಿಂಗಳ ಹಿಂದೆ ತನ್ನ ಮಕ್ಕಳನ್ನು ಬಿಟ್ಟು ಹೆಗ್ಗನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಈ ಮಧ್ಯೆ ಅಜ್ಜಿ ಬಳಿ ತಂದೆಯನ್ನು ತಾಯಿಯೇ ಕೊಲೆಗೈದಿದ್ದಾಳೆ ಎಂದು ಹೇಳಿದ್ದರು.
Advertisement
ಈ ಸಂಬಂಧ ಜ.4 ನಂದಿನಿ ಲೇಔಟ್ ಠಾಣೆಯಲ್ಲಿ ತಾಯಿ ವಿರುದ್ಧ ಮಕ್ಕಳು ಕೊಲೆ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ಬಂಧಿಸಲಾಗಿದೆ.