ಟೋಕಿಯೊ: ಕೋವಿಡ್ -19 ಹೊಸ ಪ್ರಕರಣಗಳು ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿವೆ. ಯು.ಎಸ್. ಸ್ಟಾಕ್ ಫ್ಯೂಚರ್ಸ್ ಸೋಮವಾರ ಚೇತರಿಕೆ ಕಂಡಿವೆ ಮತ್ತು ಏಷ್ಯನ್ ಷೇರುಗಳು ಸ್ಥಿರವಾಗಿವೆ. ಯುಎಸ್‌ನಲ್ಲಿ ಹೆಚ್ಚುತ್ತಿರುವ ಕೋವಿಡ್ ವೈರಸ್ ಪ್ರಕರಣಗಳಿಂದಾಗಿ ಉಂಟಾದ ಭಾರೀ ಆರ್ಥಿಕ ಕುಸಿತವು ತ್ವರಿತ ಪ್ರಗತಿಗೆ ಹಿನ್ನಡೆಯಾಗಿದೆ. ಪರಿಣಾಮ ಏಷ್ಯಾದ ಷೇರು ಮಾರುಕಟ್ಟೆಗಳು ನಡುಗಲಾರಂಭಿಸಿವೆ.
ಜರ್ಮನಿಯಲ್ಲಿನ ಕೋವಿಡ್ -19 ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಮವಾರ ಯುರೋಪಿಯನ್ ಷೇರುಗಳು ಕುಸಿದಿವೆ. ಯು.ಎಸ್. ಎಸ್ – ಪಿ 500 ಫ್ಯೂಚರ್ಸ್‌ಗಳು ಶೇ. 0.4ರಷ್ಟು ಏರಿಕೆಯಾಗಿದ್ದು, ಆರಂಭಿಕವಾಗಿ ಉಂಟಾದ ಶೇ. 1.05ರಷ್ಟು ನಷ್ಟದಿಂದ ಚೇತರಿಸಿದೆ. ಜಪಾನ್‌ನ ನಿಕ್ಕಿ ಕೂಡ ಶೇ. 0.1ರಷ್ಟು ಲಾಭವನ್ನು ಗಳಿಸಿದ್ದು, ಆರಂಭಿಕ ನಷ್ಟಗಳಿಂದ ಚೇತರಿಸಿಕೊಂಡಿದೆ. ಜಪಾನ್‌ನ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳ ಸೂಚ್ಯಂಕ ಬಹುತೇಕ ಸ್ಥಿರವಾಗಿವೆ. ಆದರೆ ಚೀನಾದ ಮುಖ್ಯ ಷೇರು ಶೇ. 0.3ರಿಂದ 3.5 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ.
ಈ ವರ್ಷದ ಆರಂಭದಲ್ಲಿ ವಿಶ್ವಾದ್ಯಂತ ಸಾಂಕ್ರಾಮಿಕ ರೋಗ ಹರಡಲಾರಂಭಿಸಿರುವುದು ಬಹಳಷ್ಟು ಷೇರು ಮಾರಾಟಕ್ಕೆ ಕಾರಣವಾಗಿದೆ. ಪರಿಣಾಮ ಕಳೆದ ಮೂರು ತಿಂಗಳುಗಳಲ್ಲಿ ಷೇರುಗಳ ಬೆಲೆ ಜಾಗತಿಕವಾಗಿ ಏರಿಕೆಯಾಗಿದೆ. ಇದರೆ ಇದು ಕೆಟ್ಟ ಬೆಳವಣಿಗೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾಮಾಜಿಕ ನಿರ್ಬಂಧಗಳ ಪ್ರಭಾವದಿಂದ ಆರ್ಥಿಕ ಸವಾಲುಗಳು ಸೃಷ್ಟಿಯಾಗಿವೆ. ಆ್ಯಪಲ್ ಇಂಕ್ ಶುಕ್ರವಾರ ಯುಎಸ್‌ಎಯಲ್ಲಿರುವ ತನ್ನ 11 ಷೇರು ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಹೇಳಿದೆ, ಏಕೆಂದರೆ ಅಲ್ಲಿನ ಕೆಲವು ರಾಜ್ಯಗಳಲ್ಲಿ ಕೋವಿಡ್ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ ಮತ್ತು ಇದು ಷೇರುಗಳ ಮಾರಾಟಕ್ಕೆ ಪ್ರಚೋದಿಸುತ್ತವೆ.
ಮಾರುಕಟ್ಟೆಯು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದೆ, ಆದ್ದರಿಂದ ಈ ವ್ಯವಸ್ಥೆಯಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ ಎನ್ನುವ ಬಗ್ಗೆ ನನಗೆ ಅನುಮಾನವಿದೆ. ಗಳಿಕೆಯ ದೃಷ್ಟಿಕೋನವು ನಿರೀಕ್ಷೆಗಳನ್ನು ಪೂರೈಸುತ್ತದೆಯೇ ಎಂದು ನಾವು ಈಗ ನೋಡಬೇಕಾಗಿದೆ ಎಂದು ಮಿತ್ಸುಬಿಷಿ ಯುಎಫ್‌ಜೆ ಮೋರ್ಗಾನ್ ಸ್ಟಾನ್ಲಿ ಸೆಕ್ಯೂರಿಟಿಸ್‌ನ ಹೂಡಿಕೆ ತಂತ್ರಜ್ಞ ಟಕುಯಾ ಹೊಜುಮಿ ಹೇಳಿದ್ದಾರೆ.