Advertisement

ಅಹ್ಮದಾಬಾದ್‌ಗೆ ಆಗಮಿಸಿದ ವೆಸ್ಟ್‌ ಇಂಡೀಸ್‌ ತಂಡ

10:36 PM Feb 02, 2022 | Team Udayavani |

ಅಹ್ಮದಾಬಾದ್‌: ಪ್ರವಾಸಿ ಇಂಗ್ಲೆಂಡ್‌ ಎದುರಿನ ಟಿ20 ಸರಣಿಯನ್ನು 3-2 ಅಂತರದಿಂದ ಗೆದ್ದ ಅಮಿತೋತ್ಸಾಹಲ್ಲಿ “ಮೆನ್‌ ಇನ್‌ ಮರೂನ್‌’ ಖ್ಯಾತಿಯ ವೆಸ್ಟ್‌ ಇಂಡೀಸ್‌ ತಂಡ 6 ಪಂದ್ಯಗಳ ಸೀಮಿತ ಓವರ್‌ ಸರಣಿಗಾಗಿ ಬುಧವಾರ ಬೆಳಗ್ಗೆ ಅಹ್ಮಾದ್‌ಬಾದ್‌ಗೆ ಆಗಮಿಸಿತು.

Advertisement

“ಎರಡು ದಿನಗಳ ಸುದೀರ್ಘ‌ ಪ್ರಯಾಣದ ಬಳಿಕ ಮೆನ್‌ ಇನ್‌ ಮರೂನ್‌ ಪಡೆ ಬಾರ್ಬಡಾಸ್‌ನಿಂದ ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ’ ಎಂಬುದಾಗಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಟ್ವೀಟ್‌ ಮಾಡಿದೆ.

ಕ್ರಿಕೆಟಿಗರು ಅಹ್ಮದಾಬಾದ್‌ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಚಿತ್ರವನ್ನೂ ಪೋಸ್ಟ್‌ ಮಾಡಿದೆ. ಕೈರನ್‌ ಪೊಲಾರ್ಡ್‌ ವಿಂಡೀಸ್‌ ತಂಡದ ನಾಯಕರಾಗಿದ್ದಾರೆ.

ಇದನ್ನೂ ಓದಿ:ವಿಂಟರ್‌ ಒಲಿಂಪಿಕ್ಸ್‌: ಭಾರತದ ಪಾಳೆಯದಲ್ಲಿ ಕೋವಿಡ್ ಪಾಸಿಟಿವ್‌ ಕೇಸ್‌ ಪತ್ತೆ

ಇಲ್ಲಿನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ 3 ಪಂದ್ಯಗಳ ಏಕದಿ ಸರಣಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next