Advertisement

ಪಾಕ್‌ಗೆ ಬಂದ ವಿಂಡೀಸ್‌ ವನಿತಾ ತಂಡ

12:35 AM Jan 31, 2019 | |

ಕರಾಚಿ: ಪಾಕಿಸ್ಥಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲು ವೆಸ್ಟ್‌ ಇಂಡೀಸ್‌ ವನಿತಾ ತಂಡ ಬುಧವಾರ ಕರಾಚಿಗೆ ಬಂದಿಳಿದಿದೆ. 15 ವರ್ಷಗಳ ಬಳಿಕ ಏಶ್ಯದ ಹೊರಗಿನ ವನಿತಾ ಕ್ರಿಕೆಟ್‌ ತಂಡವೊಂದು ಪಾಕಿಸ್ಥಾನಕ್ಕೆ ಕಾಲಿಡುತ್ತಿರುವುದರಿಂದ ತಂಡಕ್ಕೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ.

Advertisement

ಮೆರಿಸ್ಸಾ ಅಗ್ಯುಲೆರಾ ನಾಯಕತ್ವದಲ್ಲಿ ವೆಸ್ಟ್‌ ಇಂಡೀಸ್‌ ತಂಡ ಪ್ರವಾಸ ಕೈಗೊಂಡಿದೆ. ಪಾಕಿಸ್ಥಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಯೋಜನೆಗೆ ಸಹಕರಿಸುವ ಸಲುವಾಗಿ ಕೆರಿಬಿಯನ್‌ ಕ್ರಿಕೆಟ್‌ ಮಂಡಳಿ ವನಿತಾ ತಂಡವನ್ನು ಕಳುಹಿಸಿದೆ.ಪ್ರವಾಸಿ ವಿಂಡೀಸ್‌ ತಂಡಕ್ಕೆ ವಿಶೇಷ ಭದ್ರತಾ ಪಡೆಯನ್ನು ನೇಮಿಸಲಾಗಿದ್ದು, ವಿಮಾನ ನಿಲ್ದಾಣದಿಂದ ಹೊಟೇಲ್‌ ವರೆಗೂ 500ಕ್ಕೂ ಹೆಚ್ಚಿನ ಪೊಲೀಸರ ಸರ್ಪಗಾವಲು ಒದಗಿಸಲಾಗಿತ್ತು. ತಂಡವನ್ನು ಬುಲೆಟ್‌ ನಿರೋಧಕ ಬಸ್ಸುಗಳಲ್ಲಿ ಹೊಟೇಲ್‌ಗ‌ಳಿಗೆ ಕಳುಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next