Advertisement

ಜಾಲತಾಣ ತುಂಬಾ ಬಸವಣ್ಣನ ಧ್ಯಾನ, ಕನ್ನಡ ವಚನಗಳದ್ದೇ ಜಪ

06:30 AM Apr 19, 2018 | Team Udayavani |

ಬೆಂಗಳೂರು: ಇವ ನಮ್ಮವ.. ಇವ ನಮ್ಮವ… ಅಂದು ಬಸವಣ್ಣ ಹೇಳಿದ ಮಾತನ್ನು ಇಂದು ರಾಜಕೀಯ ಪಕ್ಷಗಳು ಜಪಿಸುತ್ತಿವೆ. ಸಿದಾಟಛಿಂತ ಎಡವೇ ಇರಲಿ, ಬಲವೇ ಇರಲಿ ಪ್ರತಿಯೊಬ್ಬರಿಗೂ ಬಸವಣ್ಣ ಬೇಕು.

Advertisement

ರಾಜ್ಯ ಚುನಾವಣೆಯ ಹೊಸ್ತಿಲಲ್ಲೇ ಬಸವಣ್ಣನ ಹೆಸರಲ್ಲಿ ಧರ್ಮಯುದಟಛಿವೇ ನಡೆದು ಹೋಯ್ತು.ಇದೀಗ ಚುನಾವಣೆಯೂ ಅದೇ ಧರ್ಮ ಜಿಜ್ಞಾಸೆಯ ನೆರಳಲ್ಲೇ ನಡೆಯುತ್ತಿದೆ.

ಚುನಾವಣೆ ಪ್ರಚಾರ ತಾರಕಕ್ಕೇರಿರುವ ಮಧ್ಯೆಯೇ ಬಸವ ಜಯಂತಿಯೂ ಬಂದಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ನಾಯಕರು ಇದನ್ನು ತಮ್ಮ ಮೈಲೇಜ್‌ಗೆ ಬಳಸಿಕೊಂಡಿವೆ. ಟ್ವಿಟರ್‌ನಲ್ಲಿ ಬಸವ ಜಯಂತಿ ಹ್ಯಾಶ್‌ಟ್ಯಾಗ್‌ ದಿನದ ಟ್ರೆಂಡ್‌ ಆಗಿದ್ದು, 15.5 ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳು ಹರಿದಾಡಿವೆ. ಬಸವೇಶ್ವರರ ಆದರ್ಶ ವಿಶ್ವಾದ್ಯಂತ ಮನುಕುಲಕ್ಕೆ ಪ್ರೇರೇಪಣೆ ಎಂದು ಪ್ರಧಾನಿ ಮೋದಿ ಲಂಡನ್‌ನಿಂದ ಕನ್ನಡದಲ್ಲಿ ಟ್ವೀಟ್‌ ಮಾಡಿದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಹಾ ಕಾಯಕಯೋಗಿಗೆ ನನ್ನ ನಮನಗಳು ಎಂದು ಕನ್ನಡದಲ್ಲಿ ಹೇಳಿದ್ದಾರೆ.


ಬಸವಣ್ಣನ ಕಾಯಕವೇ ಕೈಲಾಸ ಎಂಬ ಮಾತನ್ನು ಉಪಯೋಗಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ,
ತಮ್ಮ ಸರ್ಕಾರದ ಸಾಧನೆಯನ್ನು ಇಂಗ್ಲಿಷ್‌ನಲ್ಲಿ 5 ಟ್ವೀಟ್‌ಗಳಲ್ಲಿ ಸುದೀರ್ಘ‌ವಾಗಿ ವಿವರಿಸಿದ್ದಾರೆ. ನನಗೆ ವಿಶ್ವಮಾನವರಾಗಿ ಬಸವಣ್ಣ ಕಂಡಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಂಡು ಅವರ ಹಾದಿಯಲ್ಲಿ ನಡೆಯೋಣ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಮಿತ್‌ ಶಾ ಬೆಂಗಳೂರು ಪ್ರವಾಸ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಸರ್ಕಾರ ಬಂದ ಮೇಲಿಂದ ಕರ್ನಾಟಕದಲ್ಲಿ ಅಭಿವೃದಿಟಛಿ ಮತ್ತು ಉತ್ತಮ ಆಡಳಿತ ದೂರವಾಗಿದೆ ಎಂದು ಯಡಿಯೂರಪ್ಪ ಟ್ವೀಟಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಪ್ರತಿ ಟ್ವೀಟ್‌ ಮಾಡಿ, ಕನಿಷ್ಠಪಕ್ಷ ಬಸವ ಜಯಂತಿಯಂದಾದರೂ ಹುಸಿಯ ನುಡಿಯಲು ಬೇಡ ಎಂದು ಕಾಲೆಳೆದರು.


ಕಾಂಗ್ರೆಸ್‌ ಸರ್ಕಾರದ ಪ್ರತ್ಯೇಕ ಧರ್ಮ ಸ್ಥಾಪನೆಯ ನಿಲುವನ್ನು ಟೀಕಿಸಿ ಬಿಜೆಪಿ ಸರಣಿ ಕಾಟೂìನ್‌ಗಳನ್ನು ಹರಿಬಿಟ್ಟಿದೆ. ಅಮಿತ್‌ ಶಾ ಹಾಕಿದ ಹಾರ ಬಸವೇಶ್ವರರ ಪ್ರತಿಮೆಯಿಂದ ಜಾರಿ ಕೆಳಕ್ಕೆ ಬಿದ್ದುದನ್ನೇ ಗುರಿಯಾಗಿಸಿ ಕಾಂಗ್ರೆಸ್‌, ಗುರು ಬಸವಣ್ಣ ಅವರು ಅಮಿತ್‌ ಶಾರನ್ನು ತಿರಸ್ಕರಿಸಿದ್ದಾರೆ ಎಂದು ಟ್ವೀಟ್‌ ಮಾಡಿದೆ.

ಮತದಾನ- ಬಸವ ತತ್ವ
ಇದೆಲ್ಲದರ ಮಧ್ಯೆ,ಬಸವ ಜಯಂತಿಯಂದು ರಾಜ್ಯದ ಹಿತದೃಷ್ಟಿಯಿಂದ ನಾವು ಮತದಾನ ಮಾಡುತ್ತೇವೆ ಎಂಬ ನಿರ್ಣಯ ಮಾಡೋಣ, ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ಬಸವಣ್ಣನವರ ಸಾಮಾಜಿಕ ನ್ಯಾಯದ ಚಿಂತನೆಯನ್ನು ವಾಸ್ತವವಾಗಿ ಸೋಣ ಎಂಬುದಾಗಿ ಬೆಂಗಳೂರಿನ ಮತದಾನ ಜಾಗೃತಿ ವೇದಿಕೆ ವೋಟ್‌ಮಾಡಿ2018 ಮಾಡಿರುವ ಮತಜಾಗೃತಿ ಟ್ವೀಟ್‌ ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next