Advertisement
ಜಿಲ್ಲಾ ಕಾಂಗ್ರೆಸ್ ಸಮಿತಿ, ಮಂಗ ಳೂರು ನಗರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಆಯೋ ಜಿಸಲಾದ ಕಾರ್ಯಕರ್ತರೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.
ಕಾರ್ಯಕರ್ತರ ಧ್ವನಿ ಪಕ್ಷದ ಮುಖಂಡರಿಗೆ ತಲುಪಿಸುವ ಕೆಲಸ ನಡೆಯಲಿದೆ. ಬ್ಲಾಕ್ ಮಟ್ಟಕ್ಕಿಂತ ಕೆಳಗಿ ನವರ ಜತೆಗೆ ಮಾತುಕತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪಕ್ಷದಲ್ಲಿ ಸಿದ್ಧಾಂತ, ಸಂಘಟನೆ ಮತ್ತು ನಾಯಕತ್ವ ಎನ್ನುವ ಮೂರು ವಿಭಾಗವಿದೆ. ಸಂಘಟನೆ ಸಂಬಂಧ ಕಾರ್ಯ ಕರ್ತರು ಮತ್ತು ಮುಖಂಡರಲ್ಲಿ ಇರುವ ಆಂತರವನ್ನು ಸರಿಪಡಿಸಬೇಕು. ಆದ್ದರಿಂದ ನಾನು ಸಂಘಟನೆ ಸಂಬಂಧ ಕೆಲಸ ಮಾಡುವೆ ಎಂದರು.
Related Articles
Advertisement
ಮೋದಿ ಪ್ರಧಾನಿಯಾದಾಗ ಬೆಚ್ಚಿಬಿದ್ದೆ !2002ರಿಂದಲೇ ರಾಜಕೀಯವನ್ನು ಹತ್ತಿರದಿಂದ ನೋಡುತ್ತಿದ್ದೆ. ಗೋದ್ರಾ ಗಲಭೆಗೆ ನೇರ ಕಾರಣರಾದ ವ್ಯಕ್ತಿಯೇ 2014 ರಲ್ಲಿ ಪ್ರಧಾನಿಯಾದಾಗ ಭಯ ಶುರುವಾಯಿತು. 2019ರ ಚುನಾವಣೆಯಲ್ಲಿ ಮತ್ತೆ ಬಹುಮತದಲ್ಲಿ ಆಯ್ಕೆಯಾದಾಗ ಬೆಚ್ಚಿಬಿದ್ದೆ. ಈ ರಾಜಕೀಯವನ್ನು ನಿಲ್ಲಿಸಬೇಕು ಎಂದು ಮನಸ್ಸಿನಲ್ಲಿತ್ತು. ಆದರೆ ಕಚೇರಿಯಲ್ಲಿ ರಾಜಕೀಯ ಮಾಡಿಲ್ಲ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಪಡಿಸಿದಾಗ ನನ್ನೊಳಗಿನ ಆಕ್ರೋಶ ಹೆಚ್ಚಾಯಿತು. ಈ ವೇಳೆ ಪತ್ನಿ ಮಂಗಳೂರಿಗೆ ಬಂದಿದ್ದಳು. ಅವಳಲ್ಲಿ ಈ ಸಂಬಂಧ ಚರ್ಚಿಸಿ ರಾಜೀನಾಮೆ ಕೊಟ್ಟೆ. ಇದನ್ನು ರಾಜಕೀಯವಾಗಿ ಎದುರಿಸಬೇಕೆಂದು ಇಷ್ಟಪಟ್ಟು ಕಾಂಗ್ರೆಸ್ ಸೇರಿದೆ. ಪಕ್ಷವು ಹಲವು ದೊಡ್ಡ ಹೊಣೆಗಳನ್ನು ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚನೆ ಬಂದಾಗ 15 ದಿನ ಮಾತ್ರ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಾನೇನು ಮಾಡಿಲ್ಲ ಜನರೇ ಅತೀ ಹೆಚ್ಚು ಬಹುಮತದಿಂದ ಗೆಲ್ಲಿಸಿದರು ಎಂದರು.