Advertisement

ಕೃಷ್ಣೆ ನೀರು ಸದ್ಬಳಕೆಯಾಗಲಿ

11:24 AM Mar 09, 2019 | |

ಮುದ್ದೇಬಿಹಾಳ: ಕೃಷ್ಣಾ ನದಿಯ ಹೊಳೆದಂಡೆ ರೈತರು ನೀರಾವರಿ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರಾಗಿದ್ದು, ಅವರ ತ್ಯಾಗಕ್ಕೆ ಪ್ರತಿಫಲ ದೊರಕಿಸಿಕೊಡಲು ಸಾಕಷ್ಟು ಪ್ರಯತ್ನ ನಡೆಸಿದ್ದೇನೆ. ಆ ರೈತರ ಜಮೀನಿಗೆ ನೀರಾವರಿ ಸೌಲಭ್ಯ ತಲುಪಿಸಲು ಈಗಾಗಲೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ತಂಗಡಗಿ ಗ್ರಾಮದಲ್ಲಿ ರಸ್ತೆ ಕಾಮಗಾರಿ, ಸರ್ಕಾರಿ ಪ್ರೌಢಶಾಲೆ ಕೊಠಡಿ ಕಟ್ಟಡ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕೃಷ್ಣೆ ನೀರು ಬಳಕೆಗೆ ಎ, ಬಿ ಸ್ಕೀಂ ನೆಪದಲ್ಲಿ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಯುಕೆಪಿಯ ಎ ಸ್ಕೀಂನಲ್ಲಿ ಇನ್ನೂ 55 ಟಿಎಂಸಿ ನೀರು ಬಳಸಿಕೊಂಡಿಲ್ಲ. ಈ ನೀರು ಬಳಸಿಕೊಳ್ಳಲು ಕಾನೂನಾತ್ಮಕ ತೊಂದರೆ ಇಲ್ಲ ಅನ್ನೋದನ್ನು ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.

ನೀರಾವರಿಗೆ 110 ಕೋಟಿ, ನೀರಾವರಿ ಡಿಸ್ಟ್ರೀಬ್ಯೂಟರ್‌, ಲ್ಯಾಟರಲ್‌ ದುರಸ್ತಿಗೆ 44.5 ಕೋಟಿ, ಗ್ರಾಮೀಣ ರಸ್ತೆಗಳಿಗೆ 63 ಕೋಟಿ, ಪ್ರೌಢಶಾಲೆ ಕೊಠಡಿಗಳಿಗೆ 2.36 ಕೋಟಿ, ಪ್ರಾಥಮಿಕ ಶಾಲೆ ಕೊಠಡಿಗಳಿಗೆ 2.83 ಕೋಟಿ ಹಾಗೂ ತಂಗಡಗಿಯಲ್ಲಿನ ರಸ್ತೆಗಳಿಗೆ 50 ಲಕ್ಷ ಅನುದಾನ ಸರ್ಕಾರದಿಂದ ತಂದಿದ್ದೇನೆ. ಚರಲಿಂಗೇಶ್ವರ ದೇವಸ್ಥಾನಕ್ಕೆ ಶಾಸಕರ ನಿಧಿ ಅಡಿ 5 ಲಕ್ಷ ರೂ. ಕೊಟ್ಟಿದ್ದೇನೆ. 22 ಕೆರೆಗಳಲ್ಲಿ 18 ಕೆರೆ ತುಂಬಿಸಿದ್ದೇನೆ. ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ. ಆದರೆ ನಮ್ಮ ಸರ್ಕಾರ ಇಲ್ಲದ್ದರಿಂದ ಸುಮ್ಮನಿದ್ದೇನೆ ಎಂದರು.

ಇದೇ ಸಂದರ್ಭ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಮಗೆ ಶಾಲೆಗೆ ಹೋಗಲು ರಸ್ತೆ ಮತ್ತು ಶಾಲೆಗೆ ಕಂಪ್ಯೂಟರ್‌ ಸೌಲಭ್ಯ ದೊರಕಿಸಿಕೊಡುವಂತೆ ಶಾಸಕರನ್ನು ಒತ್ತಾಯಿಸಿದರು. ಧುರೀಣರಾದ ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ ಸಾನ್ನಿಧ್ಯ ವಹಿಸಿದ್ದ ಹಡಪದ ಅಪ್ಪಣ್ಣ ಸಂಸ್ಥಾನಮಠದ ಅನ್ನದಾನಭಾರತಿ ಮಾತನಾಡಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ, ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ಎಚ್‌.ಎಲ್‌. ಕರಡ್ಡಿ, ಪುರಸಭೆ ಮಾಜಿ ಸದಸ್ಯ ಮನೋಹರ ತುಪ್ಪದ, ಲಕ್ಷ್ಮಣ ಬಿಜ್ಜೂರ, ಸಂಗಮೇಶ ಹುಂಡೇಕಾರ, ಶಿವಾನಂದ ಮಂಕಣಿ, ಶಿವಾನಂದ ನಿಡಗುಂದಿ, ಬಸವರಾಜ ಡೊಂಗರಗಾಂವಿ, ರಾಜು ಹೊಳಿ, ಸಿದ್ದು ಹೊಳಿ, ಮಹಾಂತೇಶ ಪಡಶೆಟ್ಟಿ, ನಿಂಗಪ್ಪ ಕಮಲಾಪುರ, ಮುದಕಪ್ಪಗೌಡ ಪಾಟೀಲ, ಪರಶುರಾಮ ಢವಳಗಿ, ಪಿಡಿಒ ಅಯ್ಯಪ್ಪ ತಂಗಡಗಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next