Advertisement

ಹಳಿಯಾಳ ಹಬ್ಬಕ್ಕೆ ವಿಆರ್‌ಡಿಎಂ ಟ್ರಸ್ಟ್‌ ನೇತೃತ್ವ

02:06 PM Dec 19, 2017 | |

ಹಳಿಯಾಳ: ಸ್ಥಳೀಯ ಉದಯೋನ್ಮುಖ ಪ್ರತಿಭೆಗಳಿಗೆ, ಕಲಾವಿದರಿಗೆ ವಿಶೇಷ ಅವಕಾಶಗಳ ವೇದಿಕೆಗಳನ್ನು ನಿರ್ಮಿಸಿಕೊಡಲು ಮತ್ತು ಈ ಭಾಗದ ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಆರ್‌ಡಿಎಂ ಟ್ರಸ್ಟ್‌ ವತಿಯಿಂದ ಹಳಿಯಾಳ
ಹಬ್ಬ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

Advertisement

ವಿಆರ್‌ಡಿಎಂ ಟ್ರಸ್ಟ್‌ ವತಿಯಿಂದ ಛತ್ರಪತಿ ಶಿವಾಜಿ ಕಾಲೇಜ್‌ ಮೈದಾನದಲ್ಲಿ ನಡೆದ ಹಳಿಯಾಳ ಹಬ್ಬದಲ್ಲಿ ಮಾತನಾಡಿದ ಅವರು, ಟ್ರಸ್ಟ್‌ನಿಂದ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳು ಕ್ಷೇತ್ರಾದ್ಯಂತ ನಡೆಸಲಾಗುತ್ತಿದೆ. ಸದಾ ಒತ್ತಡದ ಜೀವನ ನಡೆಸುವ 
ಮನುಷ್ಯನಿಗೆ ಮನೋರಂಜನೆಯ ಅವಶ್ಯಕತೆಯನ್ನು ಅರಿತು ವರ್ಷದಲ್ಲೊಮ್ಮೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡುವ ಟ್ರಸ್ಟ್‌ನ ಚಿಂತನೆಗೆ ಇಂದು ಕ್ಷೇತ್ರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದರು. 

ಉದ್ಘಾಟಿಸಿದ ಕರ್ನಾಟಕದ ಮೊದಲ ಮಹಿಳಾ ದಿವ್ಯಾಂಗ ಚಿನ್ನದ ಪದಕ ವಿಜೇತೆ ಜ್ಯೋತಿ ಸಣ್ಣಕ್ಕಿ ಮಾತನಾಡಿ ದಿವ್ಯಾಂಗರಿಗೆ, ವಿಕಲಚೇತನರಿಗೆ, ಶ್ರವಣ, ದೃಷ್ಟಿದೋಷ ಇರುವವರಿಗೆ ಹಳಿಯಾಳದ ವಿ.ಆರ್‌. ಡಿಎಂ ಟ್ರಸ್ಟ್‌ನಿಂದ ಸಾಕಷ್ಟು ಸಹಾಯ-ಸಹಕಾರ
ದೊರೆಯುತ್ತಿರುವುದು ಶ್ಲಾಘನೀಯ ಎಂದರು.  

ಹಳಿಯಾಳದಲ್ಲಿ ಉಚಿತ ವೈಫೈ: ವಿ.ಆರ್‌.ಡಿಎಂ
ಟ್ರಸ್ಟ್‌ನ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ ಹಾಗೂ ರಾಧಾಬಾಯಿ ದೇಶಪಾಂಡೆ ಪಟ್ಟಣದಲ್ಲಿ ಟ್ರಸ್‌ rನಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಹಾಗೂ ಮನೋರಂಜನೆಗಾಗಿ ಬಸ್‌ ನಿಲ್ದಾಣ ಸಮೀಪ, ಶಿವಾಜಿ ವೃತ್ತ ಸೇರಿದಂತೆ 3 ಕಡೆಗಳಲ್ಲಿ ಉಚಿತ ವೈಫೈ
ಸೇವೆಗೆ ಚಾಲನೆ ನೀಡಿದರು. 

ಹಳಿಯಾಳ ಹಬ್ಬದಲ್ಲಿ ಸ್ಥಳೀಯ ಕಲಾವಿದರಿಂದ ಹಾಗೂ ವಿವಿಡಿಎಸ್‌ಇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಮಾರ್ಟ್‌ ಗ್ರೂಪ್‌ ಶಿರಸಿಯವರಿಂದ ನೃತ್ಯ ಸಂಜೆ, ಖ್ಯಾತ ಬಲೂನ್‌ ಡ್ಯಾನ್ಸರ್‌ ಸರವಣ ಧನಪಾಲ ಮತ್ತು ತಂಡದವರಿಂದ ನೃತ್ಯ, ಝಿ ಲಿಟಲ್‌
ಚಾಂಪ ಸಿಸನ್‌ 10ರ ಗಣೇಶ ಬೆಳಗಾಂವಕರರಿಂದ ಗೀತ ಗಾಯನ, ಪ್ರತೀಕ್ಷಾ ಭಟ್‌ರಿಂದ ರಷ್ಯನ್‌ ರಿಂಗ್‌ ನೃತ್ಯ, ಝೀ ಸರಿಗಮಪ ಖ್ಯಾತಿಯ ಮೆಹಬೂಬಸಾಬರಿಂದ ಗಾನಸುಧೆ, ರಾಷ್ಟ್ರೀಯ ಖ್ಯಾತಿಯ ಗಾಯಕಿ ಐಶ್ವರ್ಯ ಮುಜುಮದಾರ ಅವರಿಂದ ಸಂಗೀತ ಸಂಜೆ ನಡೆಯಿತು. ವಿವಿಧ ಸ್ಪರ್ಧೆ ವಿಜೇತರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಪ್ರೋತ್ಸಾದ ಧನ ನೀಡಲಾಯಿತು.

Advertisement

ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಲಕ್ಷ್ಮೀ ಕೊರ್ವೆಕರ, ಕೃಷ್ಣಾ ಪಾಟೀಲ್‌, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೊಕ್ಲೃಕರ, ರುಡಸೆಟ್‌ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಅಕ್ರಮ ಸಕ್ರಮ ಸಮೀತಿ ಅಧ್ಯಕ್ಷ ಸುಭಾಷ ಕೊರ್ವೆಕರ, ಜಿಲ್ಲಾ ವಕ್ಫ್  ಬೋರ್ಡ್‌ ಅಧ್ಯಕ್ಷ ಖಯ್ನಾಮ ಮುಗದ, ಪುರಸಭೆ ಸದಸ್ಯ ಶಂಕರ ಬೆಳಗಾಂವಕರ, ಸತ್ಯಜೀತ ಗಿರಿ,
ತಹಶೀಲ್ದಾರ್‌ ವಿದ್ಯಾಧರ ಗುಳಗುಳಿ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next