Advertisement

ಪರಿಶಿಷ್ಟ ಸಮುದಾಯದ ಮತಗಳೇ ನಿರ್ಣಾಯಕ

11:43 AM Mar 27, 2019 | Lakshmi GovindaRaju |

ಕ್ಷೇತ್ರದ ವಸ್ತುಸ್ಥಿತಿ: 2008ರಲ್ಲಿ ವಿಧಾನಸಭಾ ಕ್ಷೇತ್ರ ವಿಂಗಡಣೆ ನಂತರ ನಡೆದ ಈ ಕ್ಷೇತ್ರದ ಮತದಾರರು ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನೇ ಹೆಚ್ಚು ಬೆಂಬಲಿಸಿದ್ದಾರೆ ಎಂದು ಈ ಹಿಂದಿನ ಅಂಕಿ ಅಂಶಗಳು ಹೇಳುತ್ತವೆ. ಪ್ರಮುಖವಾಗಿ ಈ ಕ್ಷೇತ್ರದಿಂದ ಕಳೆದ ಮೂರೂ ವಿಧಾನಸಭಾ ಚುನಾವಣೆಯಲ್ಲಿ (2008,2013,2018) ಬಿಜೆಪಿ ಶಾಸಕ ಎಸ್‌.ರಘು ಅವರೇ ಜಯ ಸಾಧಿಸಿ ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿದ್ದಾರೆ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರಿಗೆ ಈ ಕ್ಷೇತ್ರದಿಂದ 44 ಸಾವಿರ ಮತಗಳ ಮುನ್ನಡೆ ಸಿಕ್ಕಿದೆ. 2014 ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಒಟ್ಟು 1,28,323 (ಶೇ.55.72) ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಹರ್ಷದ್‌ ಪರ 34,380 (ಶೇ.27.1) ಮತಗಳು, ಸದ್ಯ ಲೋಕಸಭಾ ಸದಸ್ಯರಾಗಿರುವ ಪಿ.ಸಿ.ಮೋಹನ್‌ ಪರ 78,905 (ಶೇ. 62.2) ಮತಗಳು ಚಲಾವಣೆಯಾಗಿದ್ದವು.

ಈ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 7 ಬಿಬಿಎಂಪಿ ವಾರ್ಡ್‌ಗಳಿದ್ದು, ಈ ಪೈಕಿ 3ರಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳು, 2ರಲ್ಲಿ ಕಾಂಗ್ರೆಸ್‌ ಕಾರ್ಪೊರೇಟರ್‌, 2 ಪಕ್ಷೇತರರಿದ್ದಾರೆ. ಆದರೆ, 2014ರ ಲೊಕಸಭಾ ಚುನಾವಣೆ ವೇಳೆ ಕ್ಷೇತ್ರದ ಎಲ್ಲಾ ವಾರ್ಡ್‌ನಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳೇ ಇದ್ದರು. ಹೀಗಾಗಿಯೇ, ಇದರ ಪರಿಣಾಮವೇ ಬಿಜೆಪಿಗೆ 2014ರ ಲೋಕಸಭಾ ಚುನಾವಣೆಯಲ್ಲಿ ಪಿ.ಸಿ.ಮೋಹನ್‌ ಅವರಿಗೆ ಮುನ್ನಡೆ ತಂದುಕೊಟ್ಟಿತ್ತು.

ಈ ಬಾರಿ ವಾರ್ಡ್‌ಗಳಲ್ಲಿ ಸ್ಥಿತಿಗತಿ ಬದಲಾಗಿದೆ. ಜತೆಗೆ ಬೇರೆ ಭಾಗಗಳಿಗೆ ಹೋಲಿಸಿದರೆ ಸಿ.ವಿ.ರಾಮನ್‌ ನಗರಕ್ಕೆ ಸಂಸದರ ಕೊಡುಗೆ ಕಡಿಮೆ ಎನ್ನುತ್ತಾರೆ ಸ್ಥಳೀಯರು.  ಜಾತಿವಾರು ಲೆಕ್ಕಾಚಾರದಲ್ಲಿ ಪರಿಶಿಷ್ಟ ಸಮುದಾಯದವರೇ ಶೇ.63ರಷ್ಟಿದ್ದಾರೆ. ಉಳಿದಂತೆ ಹಿಂದುಳಿದ ವರ್ಗದವರು ಶೇ.18 ಸಾಮಾನ್ಯ ವರ್ಗ ಶೇ.19ರಷ್ಟಿದೆ. ಹೀಗಾಗಿ ಪರಿಶಿಷ್ಟ ಸಮುದಾಯವೇ ನಿರ್ಣಾಯಕ ಪಾತ್ರವಹಿಸಬಹುದು.

ಸಂಸದರ ಕೊಡುಗೆ
-27.6 ಲಕ್ಷ ಅನುದಾನದಲ್ಲಿ ಹೊಯ್ಸಳನಗರ ವಾರ್ಡ್‌ನಲ್ಲಿ ಸಿಸಿಟಿವಿ ಅಳವಡಿಕೆ ಕಾಮಗಾರಿ ಚಾಲನೆ.
-5 ಲಕ್ಷ ಅನುದಾನದಲ್ಲಿ ಬಿಎಂ ಕಾವಲ್‌ ವೆಲ್ಫೆàರ್‌ ಅಸೋಸಿಯೇಷನ್‌ನಲ್ಲಿ ಜಿಮ್‌ ಸಾಧನಗಳ ಅಳವಡಿಕೆ.

Advertisement

ನಿರೀಕ್ಷೆಗಳು
-ಕ್ಷೇತ್ರದಲ್ಲಿರುವ ಕೊಳಚೆ ಪ್ರದೇಶಗಳನ್ನು ಸಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ.
-ಕ್ಷೇತ್ರದಲ್ಲಿ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ.

-ವಾರ್ಡ್‌ಗಳು- 7
-ಬಿಜೆಪಿ – 3
-ಕಾಂಗ್ರೆಸ್‌ – 2
-ಇತರೆ – 2

-ಜನಸಂಖ್ಯೆ – 424630
-ಮತದಾರರ ಸಂಖ್ಯೆ- 264960
-ಪುರುಷರು – 139622
-ಮಹಿಳೆಯರು – 125338

2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು- 1,28,323 (ಶೇ.55.72)
-ಬಿಜೆಪಿ ಪಡೆದ ಮತಗಳು – 78,905 (ಶೇ. 62.2)
-ಕಾಂಗ್ರೆಸ್‌ ಪಡೆದ ಮತಗಳು – 34,380 (ಶೇ.27.1)
-ಆಮ್‌ ಆದ್ಮಿ ಪಡೆದ ಮತಗಳು – 8,457 (ಶೇ.6.7)

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಬಿಜೆಪಿ ಶಾಸಕ (ಎನ್‌.ರಘು)
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು – 7
-ಕಾಂಗ್ರೆಸ್‌ ಸದಸ್ಯರು -0

ಮಾಹಿತಿ: ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next