Advertisement
ತಲಪಾಡಿಯಿಂದ ಗುತ್ತು ಕೊರಿಂಗಿಲ ಬೆದ್ರಾಡಿ ಪೊಯ್ಯೆ ಮೂರ್ಕಾಜೆ ಮಜಲುಗುಡ್ಡೆ ಪಾರ ನೀರಾಜೆ ಬಾಳೆಗುಳಿ ಸಂಪರ್ಕ ರಸ್ತೆಯು ಸುಮಾರು 1.5ರಿಂದ 2 ಕಿ.ಮೀ. ಉದ್ದವಿದೆ. ಈ ಕಚ್ಚಾ ರಸ್ತೆ ಕೆಸರುಮಯವಾಗಿದೆ. 50ಕ್ಕಿಂತಲೂ ಹೆಚ್ಚು ಮನೆ ಹಾಗೂ ಕೊರಿಂಗಿಲ ಮಸೀದಿ ಇರುವ ಪ್ರದೇಶಕ್ಕೆ ಹೋಗುವ ರಸ್ತೆ ಇದಾ ಗಿದೆ. ಬಾಳೆಗುಳಿಗೆ ಹೋಗಿ ಸೇರಿದರೆ ಅಲ್ಲಿಂದ ಪೇರಲ್ತಡ್ಕ, ದೂಮಡ್ಕ, ಒಡ್ಯ ಪಾಣಾಜೆ ಸಂಪರ್ಕಿಸಲು ಈ ಭಾಗದ ಜನರಿಗೆ ಬಹಳ ಸಮೀಪವಿರುವ ರಸ್ತೆ ಇದಾಗಿದೆ. ಗುತ್ತು ಎನ್ನುವಲ್ಲಿ 50 ಮೀಟರ್ ರಸ್ತೆ ಮಾತ್ರ ಕಾಂಕ್ರಿಟ್ ಆಗಿದೆ. ಈ ರಸ್ತೆಯ ಸಣ್ಣ ಮಟ್ಟದ ದುರಸ್ತಿಗೆ ಪಂಚಾಯತ್‌ನಿಂದ ಅನುದಾನ ಬಿಡುಗಡೆಯಾಗಿತ್ತು. ಹೊರತು ಶಾಸಕ, ಸಂಸದರ ನಿಧಿಯಿಂದ ಯಾವುದೇ ಹೆಚ್ಚಿನ ಅನುದಾನ ಈವರೆಗೆ ಬಿಡುಗಡೆಯಾಗಿಲ್ಲ ಎಂದು ಈ ಭಾಗದ ಜನರು ಹೇಳುತ್ತಾರೆ.
ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆಯೂ ಇಲ್ಲಿ ಸಮರ್ಪಕವಾಗಿಲ್ಲದ ಕಾರಣ ಮಳೆನೀರು ರಸ್ತೆಯಲ್ಲಿ ನಿಂತು ಕೆಸರುಮಯವಾಗಿದೆ. ರಸ್ತೆಯ 2 ಕಡೆ ಮೋರಿಯ ಅವಶ್ಯಕತೆಯೂ ಇದೆ. ಶಾಲಾ ಮಕ್ಕಳು ಕೂಡ ಈ ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಮನೆ ತಲುಪಬೇಕಾದರೆ ಜನರು ಪರದಾಡಬೇಕಾದ ಸ್ಥಿತಿ ಇದೆ. ಕಾಂಕ್ರೀಟ್ ಅಥವಾ ಡಾಮರು ಹಾಕಿದರೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸ ಬಹುದು. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಎಂದು ಸಾರ್ವಜನಿಕರು ಹೇಳುತ್ತಾರೆ. ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಡಾಮರು ಹಾಕುವಂತೆ ಕಳೆದ ಬಾರಿ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಗ್ರಾ.ಪಂ.ನಿಂದ ದೊಡ್ಡ ಮೊತ್ತದ ಅನುದಾನ ನೀಡಲು ಅಸಾಧ್ಯವಾದ ಕಾರಣ ಈ ಬಾರಿಯೂ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಅಗುವವರೆಗೂ ಪ್ರಯತ್ನ ಮುಂದುವರಿಸಲಾಗುವುದು.
– ದಿವ್ಯಾ ಪಾರ, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯರು
Related Articles
ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ಪಾದಚಾರಿಗಳಿಗೂ ಇಲ್ಲಿ ತೆರಳಲು ಕಷ್ಟವಾಗುತ್ತಿದೆ. ಪ್ರತಿ ಸಲ ಇದಕ್ಕೆ ಕಾಂಕ್ರೀಟ್ ಹಾಕುವಂತೆ ನಾವು ಒತ್ತಾಯಿಸುತ್ತಾ ಬಂದಿದ್ದೇವೆ. ಆದರೆ ಇದುವರೆಗೆ ಯಾರಿಂದಲೂ ಸ್ಪಂದನೆ ದೊರೆತಿಲ್ಲ. ಸಂಚಾರಕ್ಕೆ ಅಯೋಗ್ಯವಾದ ಈ ರಸ್ತೆಗೆ ಡಾಮರು ಭಾಗ್ಯ ಆದಷ್ಟು ಬೇಗ ಸಿಗಲಿ ಎನ್ನುವುದು ನಮ್ಮ ಆಗ್ರಹ.
– ಚಂದ್ರಶೇಖರ ಗೌಡ ಪಾರ,
ಸ್ಥಳೀಯರು
Advertisement