Advertisement

ಹಿಂಗಾರು ಬಿತ್ತನೆಗೆ ಮರಳಿ ಬಂದ ಗ್ರಾಮಸ್ಥರು

10:15 AM Oct 24, 2021 | Team Udayavani |

ಚಿಂಚೋಳಿ: ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪದಿಂದ ಭಯಕ್ಕೊಳಗಾಗಿ ಗ್ರಾಮವನ್ನೇ ತೊರೆದಿದ್ದ ಜನರು ಮತ್ತೆ ಗ್ರಾಮದತ್ತ ಹೆಜ್ಜೆ ಹಾಕುತ್ತಿದ್ದು, ತಮ್ಮ ಹೊಲಗಳಲ್ಲಿ ಹಿಂಗಾರು ಬಿತ್ತನೆ ಕೈಗೊಳ್ಳುವ ಚಿಂತನೆ ಮಾಡುತ್ತಿದ್ದಾರೆ.

Advertisement

ಗಡಿಕೇಶ್ವಾರ ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಮೇಲಿಂದ ಮೇಲೆ ಸಣ್ಣ ಪ್ರಮಾಣದ ಭೂಕಂಪ ಸಂಭವಿಸಿದ್ದರಿಂದ ಆತಂಕಗೊಂಡಿದ್ದ ಗ್ರಾಮಸ್ಥರು ಕಳೆದ ಅಕ್ಟೋಬರ್‌ 12ರಂದು ಗ್ರಾಮವನ್ನೇ ತೊರೆದು ನೆಂಟರ ಮನೆಗೆ ಹೋಗಿದ್ದರು. ಈಗ ಮೊದಲಿನಂತೆ ಪರಿಸ್ಥಿತಿ ಸುಧಾರಿಸಿದ್ದರಿಂದ ಗ್ರಾಮಕ್ಕೆ ಮರಳಿ ಬರಲು ಗ್ರಾಮಸ್ಥರು ಉತ್ಸುಕರಾಗಿದ್ದಾರೆ.

ಇದೀಗ ಮಳೆ ಬಿಡುವು ಕೊಟ್ಟಿದ್ದರಿಂದ ಹಿಂಗಾರು ಬಿತ್ತನೆಗಾಗಿ ಹೊಲವನ್ನು ಹಸನು ಮಾಡುವುದು ಮತ್ತು ಜೋಳ, ಕಡಲೆ ಇನ್ನಿತರ ಬೀಜ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ ಅರುಣಕುಮಾರ ರಂಗನೂರ.

ಕಂದಾಯ ಸಚಿವರು ಗಡಿಕೇಶ್ವಾರಕ್ಕೆ ಭೇಟಿ ನೀಡಿದ ನಂತರ ಗ್ರಾಮದ ಮನೆಗಳ ಎದುರು ಶೆಡ್‌ ನಿರ್ಮಾಣ ಆಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅದಿನ್ನು ಈಡೇರಿಲ್ಲ. ಹೀಗಾಗಿ ಕಾಳಜಿ ಕೇಂದ್ರದ ಊಟವೇ ಗತಿಯಾಗಿದೆ ಎಂದು ಗ್ರಾಮಸ್ಥರಾದ ಸಂತೋಷಕುಮಾರ ಬಳಿ, ನಾಗರಾಜ ಚಕ್ರವರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next