Advertisement
ಹೌದು. ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮ 1990ರ ದಶಕದಲ್ಲಿ ನಡೆದ ರಾಮ ಜನ್ಮಭೂಮಿ ಹೋರಾಟದ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿತ್ತು. ಹೀಗಾಗಿ ಇಲ್ಲಿ ಶ್ರೀರಾಮ, ಸೀತಾ, ಹನು ಮಾನ ಮತ್ತು ಭಾರತ ಮಾತೆಯ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಭಾರತ ಮಾತಾ ಮಂದಿರವು ಕಳೆದ 35 ವರ್ಷಗಳಿಂದ ಈ ಭಾಗದ ಜನರಲ್ಲಿ ರಾಷ್ಟ್ರೀಯತೆ ಮತ್ತು ದೇಶಾಭಿಮಾನ ಬೆಳೆಸುವ ಜತೆಗೆ ಯುವಕರಿಗೆ ಉತ್ತಮ ಸಂಸ್ಕಾರ ನೀಡುವ ಕೇಂದ್ರವಾಗಿ ರೂಪುಗೊಂಡಿದೆ.
Related Articles
ಭಾರತ ಮಾತೆಗೆ ಮಂದಿರ ಕಟ್ಟಿ, ದಿನವೂ ಅವಳನ್ನು ಪೂಜಿ ಸುವ ಸಂಸ್ಕೃತಿಗೆ ನಾಂದಿ ಹಾಡಿದ ಸ್ಥಳ ದೇವರ ಹುಬ್ಬಳ್ಳಿ. 1989ರಲ್ಲಿ ಈ ಮೂರ್ತಿಗಳು ಇಲ್ಲಿ ಪ್ರತಿಷ್ಠಾಪನೆಯಾದಾಗಿನಿಂದ ಈವರೆಗೂ ಗ್ರಾಮದ ಯುವಕರು ಹಬ್ಬ ಹರಿದಿನ ಆಚರಣೆ ಮಾಡುತ್ತಾರೆ. ಉಳಿದ ದಿನಗಳಲ್ಲಿ ತರುಣರು ಇಲ್ಲಿ ಸೇರಿ ದೇಶದ ಆಗು ಹೋಗುಗಳ ಬಗ್ಗೆ ಚಿಂತನೆ ನಡೆಸುತ್ತಾರೆ. ಮಹಾನವಮಿಯಲ್ಲಿ ದೇವಿ ಪಾರಾಯಣ ನಡೆದರೆ, ಗ್ರಾಮದ ಯುವತಿಯರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಇಲ್ಲಿ ಪಾಠಗಳು ನಡೆಯುತ್ತವೆ. ಅಷ್ಟೇಯಲ್ಲ, ಹಳ್ಳಿಗರ ಆರೋಗ್ಯ ಶಿಬಿರಗಳಿಗೂ, ತಾಯಂದಿರಿಗೆ ಶಿಶುಪಾಲನೆಯ ಪಾಠ, ನವವಧುವರರಿಗೆ ಬದುಕಿನ ಪಾಠಕ್ಕೂ ಈ ಮಂದಿರವೇ ವೇದಿಕೆಯಾಗಿದೆ.
Advertisement
ಶ್ರೀ ಸಿದ್ದಶಿವ ಯೋಗಿಗಳ ನೇತೃತ್ವಗ್ರಾಮದ ಯುವಕರಲ್ಲಿ ರಾಷ್ಟ್ರಾಭಿಮಾನ ಮತ್ತು ಬದುಕಿನ ಸಂಸ್ಕಾರ ನೀಡಿದ್ದು ದೇವರ ಹುಬ್ಬಳ್ಳಿಯ ಸಿದ್ದಾಶ್ರಮದ ಶ್ರೀ ಸಿದ್ದಶಿವಯೋಗಿ ಸ್ವಾಮೀಜಿ ಅವರು. ಪ್ರತೀ ವರ್ಷ ರಾಮನವಮಿಯಲ್ಲಿ ರಾಮಾಯಣ ಹೇಳುವುದಷ್ಟೇ ಅಲ್ಲ, ವರ್ಷ ಪೂರ್ತಿಯಾಗಿ ಸುತ್ತಮುತ್ತಲಿನ ಗ್ರಾಮ ಗಳಿಂದ ಬರುವ ಆಧ್ಯಾತ್ಮಿಕ ಮನಸ್ಸುಗಳಿಗೆ ರಾಮಚರಿತ ಮಾನಸದಂತಹ ಚರಿತ್ರೆಯನ್ನು ಹೇಳುತ್ತ ಬಂದಿದ್ದಾರೆ. ನಮ್ಮ ಭಾಗ್ಯ
ತರುಣರಲ್ಲಿ ದೇಶಪ್ರೇಮ ಮೂಡಿಸಲು ಗ್ರಾಮಸ್ಥರೇ ಒಗ್ಗಟ್ಟಾಗಿ ಕಲ್ಲುಮಣ್ಣು, ಕಟ್ಟಿಗೆ ತಂದು ತಾವೇ ಇಟ್ಟಿಗೆ ಇಟ್ಟು ಕಟ್ಟಿದ ಮಂದಿರವಿದು. ನಾವೆಲ್ಲ ಅದರ ಸಂಸ್ಕಾರದಲ್ಲೇ ಬೆಳೆದು ಬಂದಿದ್ದೇವೆ. ಊರಿಗೊಂದು ಭಾರತ ಮಾತಾ ಮಂದಿರ ಅಗತ್ಯ.
ಶ್ರೀ ಮುಕ್ತಾನಂದ ಸ್ವಾಮೀಜಿ, ಸಿಂಧೋಗಿ ಮಠ. ಬಸವರಾಜ್ ಹೊಂಗಲ್