Advertisement
ನಾನು ಹುಟ್ಟಿ ಬೆಳೆದಿದ್ದು ಹಳ್ಳಿಯಲ್ಲಿಯೇ ಆದರೂ ನನ್ನ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಬರುವ ಅನಿವಾರ್ಯವಾಗಿತ್ತು.
Related Articles
Advertisement
ಮೊದಲ ದಿವಸ ಕಾಲೇಜಿಗೆ ಹೋಗಿದ್ದಾಗ ಸ್ನೇಹಿತರೆಲ್ಲರೂ ಅವರವರ ಲೋಕದಲ್ಲಿ ಮಗ್ನರಾಗಿದ್ದರು.ಅವರನ್ನು ನೋಡಿದರೆ ಯಾವುದೋ ಅನ್ಯ ಲೋಕದ ಪ್ರಾಣಿಗಳಂತೆ ಕಾಣತೊಡಗಿದ್ದರು. ಅವರನ್ನು ನೋಡುತ್ತಿದ್ದಂತೆ ಮುಂದೆ ಹೇಗೆ ಇವರೊಂದಿಗೆ ಸ್ನೇಹ ಬೆಸೆಯುವುದು ಎಂಬ ಆತಂಕ ಹುಟ್ಟಿತು. ದಿನಗಳು ಉರುಳುತ್ತಿದ್ದಂತೆ ಅವರೊಂದಿಗೆ ಸ್ನೇಹ ಬೆಳೆಯಿತು.
ನಾನು ಅವರ ಜೀವನ ಶೈಲಿಗೆ ಹೊಂದಿಕೊಳ್ಳಲು ಅಭ್ಯಾಸ ಮಾಡಿಕೊಂಡೆ. ಎಲ್ಲವೂ ಹೊಸದಾದರೂ ಮನಸ್ಸಿಗೆ ತಂಬಾ ಖುಷಿ ಯಾಗುತಿತ್ತು. ನಾನು ನನ್ನ ಗೆಳೆಯರು ಸೇರಿ ಸಿನೆಮಾ, ಲಾಂಗ್ ಡ್ರೈವ್ ಎಂದೆಲ್ಲ ಕಾಲಕಳೆಯುತ್ತಿದ್ದೆವು. ಅದರ ಜತೆಗೆ ಓದಿನ ಕಡೆಗೂ ಗಮನ ಹರಿಸುತ್ತಿದ್ದವು. ಜೀವನದ ನನ್ನ ಗುರಿ ತಲುಪಲು ಗುರುಗಳು ಮಾರ್ಗದರ್ಶಕರಾಗಿ ಸಲಹೆ ನೀಡುತ್ತಿದ್ದರು. ಇಂತಹ ಹೊಸ ಹೊಸ ಅನುಭವಗಳು ನನ್ನ ಜೀವನದಲ್ಲಿ ಹಲವಾರು ಬಣ್ಣಗಳ ರೂಪದಲ್ಲಿ ಪ್ರಭಾವ ಬೀರಿವೆ.
ಈ ಮುಗ್ಧ ಮನಸ್ಸಿನಲ್ಲಿ ಪ್ರತಿಯೊಬ್ಬರು ಕಾಮನ ಬಿಲ್ಲಿನ ಬಣ್ಣಗಳಂತೆ ಎಂದಿಗೂ ಮರೆಯಲಾಗದ ನೆನಪುಗಳನ್ನು ಚೆಲ್ಲಿದ್ದಾರೆ. ಇನ್ನೂ ನನ್ನ ಗೆಳೆಯರು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಬಂದು ಚಿರಪರಿಚಿತರಾಗಿ ಕೊನೆಯವರೆಗೂ ನಮ್ಮೊಂದಿಗೆ ಉಳಿಯುವ ಸುಂದರ ಸಂಬಂಧವೇ ಸ್ನೇಹ.