Advertisement

Sirsi: ಹಿಂದೂ ರಾಷ್ಟ್ರದ ಗೆಲುವೇ ನಮ್ಮ ಮೂಲ‌ ಉದ್ದೇಶವಾಗಬೇಕು: ಸಂಸದ ಅನಂತಕುಮಾರ ಹೆಗಡೆ

03:37 PM Jan 20, 2024 | Team Udayavani |

ಶಿರಸಿ: ನಮ್ಮ ಗೆಲುವು ಕೇವಲ ಬಿಜೆಪಿ ಆಗಬಾರದು. ಹಿಂದೂ ರಾಷ್ಟ್ರದ ಗೆಲುವೇ ನಮ್ಮ ಮೂಲ‌ ಉದ್ದೇಶವಾಗಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಪ್ರತಿಪಾದಿಸಿದರು.

Advertisement

ಅವರು ಜ.20ರ ಶನಿವಾರ ಕಾನಸೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿ,  ಡಿಬೇಟ್ ಮಾಡುವವರು ಮಾಡುತ್ತಾರೆ. ನಮ್ಮ ಗುರಿ ಹಿಂದೂ ರಾಷ್ಟ್ರ. ಇದಾದರೆ ಜಗತ್ತಿನಲ್ಲಿ ಎಲ್ಲವೂ ಸರಿ ಹೋಗುತ್ತದೆ. ವ್ಯವಸ್ಥೆಯೂ ‌ಸರಿ ಆಗುತ್ತದೆ ಎಂದರು.

ಕಳೆದ 10 ವರ್ಷದಲ್ಲಿ ಬಂದ ಬಿಜೆಪಿ ದೇಶದ ಆರ್ಥಿಕತೆ ಸುಧಾರಿಸಿದೆ. ಇದು‌ ಮುಂಚೆ ಯಾಕೆ ಇರಲಿಲ್ಲ? ಅದಕ್ಕೊಂದು ಯೋಚನೆ, ಯೋಜನೆ ಬೇಕು ಎಂದರು.

ರಾಮ‌ಂದಿರ ಕಟ್ಟುವುದು ದೊಡ್ಡ ಸಮಸ್ಯೆ ಆಗಿರಲ್ಲ. ರಾಷ್ಟ್ರೀಯ ಜಾಗರಣದ ಮೂಲಕ ಮಂದಿರ ಕಟ್ಟಬೇಕಿತ್ತು. ಅದಕ್ಕೆ 500 ವರ್ಷ ತೆಗೆದುಕೊಂಡಿತು. ರಾಮ ಸೀತೆ ಎಲ್ಲಡೆ ಇದಾರೆ ಎನ್ನುವರು. ಅಯೋಧ್ಯೆ ನಮ್ಮ ಶ್ರದ್ಧಾ ಕೇಂದ್ರ. ಅಪಮಾನಕ್ಕೆ ಒಳಗಾದ ಶ್ರದ್ದಾ ಕೇಂದ್ರಕ್ಕೆ ಮುಕ್ತಿ ಸಿಗಬೇಕು ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಗೆ ಆದ ಸಂಘಟನಾ‌ ಹಿನ್ನಡೆ ಸರಿಯಾಗಬೇಕು. ದುರಹಂಕಾರಿ ಆಡಳಿತ ಬಂದ ಬಳಿಕ ರಾಜ್ಯದಲ್ಲಿ ಅನ್ಯಾಯ ಹೆಚ್ಚಾಗಿದೆ. ಅದನ್ನು ನಾವು ನಿಲ್ಲಿಸ್ತೇವೆ. ಯಾರೇ ಕೂಗಾಡಿದರೂ ಸರಿ ಅದನ್ನು ಸರಿ ಮಾಡುತ್ತೇವೆ. ತಳ ಹಂತದಲ್ಲಿ ಸಹಕಾರ‌ ಬೇಕು. ಅಮಿತ್ ಷಾ ಅವರೂ ಕಳೆದ ಭಾರಿಯ ಲೋಕಸಭಾ ಚುನಾವಣೆಯ ಮತಗಳ ದಾಖಲೆ ಮುರಿಯಬೇಕು.‌ ಅದಕ್ಕೆ ಎಲ್ಲರ ಸಹಕಾರ ಬೇಕು ಎಂದರು.

Advertisement

ಚುನಾವಣೆಯಲ್ಲಿ ಎದರುಗಡೆ ಇರುವವರು ನೆಲ‌ಕಚ್ಚಬೇಕು. ಯಾರೇ ಇದ್ದರೂ ಒಳ್ಳೆಯ ವಿರೋಧ‌ ಪಕ್ಷ ಆಗಿರಬೇಕು. ದೇಶದ್ರೋಹಿ ವಿರೋಧ ಪಕ್ಷವಾಗಿರಬಾರದು ಎಂದೂ ಹೇಳಿದರು.

ಲಾಲ್ ಬಹದ್ದೂರು, ಜಹಂಗಿರಬಾಬ, ಸಾರಾಬಾಯಿ ಅವರ ಸಾವು ಸರಣಿಯಾಗಿ ಆಯಿತು. ಇದಕ್ಕೆಲ್ಲ ತಡೆ ಆಗಿದ್ದು 2014ರಲ್ಲಿ.  ಅಲ್ಲಿ ತನಕ ನಮ್ಮ ದೇಶದಲ್ಲಿ ಪ್ರಧಾನಿ ಆಗಿದ್ದರೂ  ಕಂಟ್ರೋಲ್ ನಲ್ಲಿ ಇರಲಿಲ್ಲ. ಬಹಳ ಜನರಿಗೆ ಇದರ ಅಂತರಾಳ ಗೊತ್ತಿರಲ್ಲಿಲ್ಲ. ನಮ್ಮನ್ನು ಹೊರಗಿನ ಶಕ್ತಿ ಆಳುತ್ತಿತ್ತು. ರಾಷ್ಟ್ರೀಯತೆಯ ಸರಕಾರ ಬಂದ ಬಳಿಕ ಇದಕ್ಕೆ ತಡೆ ಬಿತ್ತು ಎಂದರು.

ಈ ವೇಳೆ ಕೆ.ಜಿ.ನಾಯ್ಕ, ಚಂದ್ರು ಎಸಳೆ, ಬಲರಾಮ ನಾಮಧಾರಿ, ಪ್ರಸನ್ನ ಹೆಗಡೆ, ಸುರೇಶ ಮೇಸ್ತ, ನಾರಾಯಣ ಹೆಗಡೆ ಚಾರೆ ಇತರರು ಇದ್ದರು.

ತುಂಬಾ ನಾಯಕರು ನಮ್ಮಲ್ಲೂ ಕನಸು‌ ಕಾಣುತ್ತ ಭ್ರಮೆಯಲ್ಲಿ ಇರುವವರು ಇದ್ದಾರೆ. ಆದರೆ, ಭಗವಂತನೊಬ್ಬನಿದ್ದಾನೆ. ಯು ಟರ್ನ್ ತಗಂಡು ಗಾಡಿ ಹೊರಟಿದೆ. ನಾವು‌ ಇದು ನಿರೀಕ್ಷೆ ಮಾಡಿದ್ದಲ್ಲ. – ಅನಂತಕುಮಾರ ಹೆಗಡೆ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next