Advertisement

ಮನಸೂರೆಗೊಂಡ “ವೈಷ್ಣವ ಜನತೋ’ಭಜನೆ

12:30 AM Feb 24, 2019 | Team Udayavani |

ಸಿಯೋಲ್‌: ಪ್ರಧಾನಿ ಮೋದಿಯವರ ದಕ್ಷಿಣ ಕೊರಿಯಾ ಭೇಟಿಯ ಕೊನೇ ಹಂತದಲ್ಲಿ ಅವರಿಗೆ ಸಿಯೋಲ್‌ ಶಾಂತಿ ಪ್ರಶಸ್ತಿ ಪ್ರದಾನದ ಬಳಿಕ, ಅಧ್ಯಕ್ಷ ಮೂನ್‌ ಜೇ-ಇನ್‌ ಅವರ ಅಧಿಕೃತ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಕೊರಿಯಾದ ಮಕ್ಕಳ ಪುಟ್ಟ ವೃಂದವೊಂದು ಹಾಡಿದ ವೈಷ್ಣವ ಜನತೋ ಭಜನೆ ಎಲ್ಲರ ಗಮನ ಸೆಳೆದಿದೆ. 

Advertisement

ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದ ಕೊರಿಯಾ ಮಕ್ಕಳ ಗಾಯನ ತಂಡವು, ಸುಶ್ರಾವ್ಯವಾಗಿ ಭಜನೆಯನ್ನು ಹಾಡುವ ಮೂಲಕ ಪ್ರಧಾನಿ ಮೋದಿ ಸೇರಿ ದಂತೆ ಎಲ್ಲರ ಹೃದಯ ಸೂರೆಗೊಂಡಿತು. ಈ ವೀಡಿಯೋ ತುಣುಕನ್ನು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಅಂತರ್ಜಾಲದಲ್ಲಿ ಅಪ್ಲೋಡ್‌ ಮಾಡಿದ್ದು, ಅದಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next