Advertisement

ನಿಯಮ ಬಾಹಿರ ಹೆಡ್‌ಲೈಟ್‌ಗಳ ಬಳಕೆ ವ್ಯಾಪಕ

12:40 AM May 28, 2023 | Team Udayavani |

ಬಂಟ್ವಾಳ: ವಾಹನಗಳಲ್ಲಿ ನಿರ್ದಿಷ್ಟ ಪ್ರಮಾಣದ ಪ್ರಖರತೆಯ ಹೆಡ್‌ಲೈಟ್‌ಗಳನ್ನೇ ಬಳಸಬೇಕು ಎಂದು ಸಾರಿಗೆ ಇಲಾಖೆಯ ನಿಯಮವಿದ್ದರೂ ಇಂದಿನ ದಿನಗಳಲ್ಲಿ ಮಿತಿಮೀರಿದ ಬೆಳಕು ಚೆಲ್ಲುವ ಹೆಡ್‌ಲೈಟ್‌ಗಳನ್ನು ಬಳಸಲಾಗುತ್ತಿದೆ. ಇದು ಬಹಳಷ್ಟು ಅಪಘಾತಗಳಿಗೆ ಕಾರಣವಾಗುತ್ತಿದ್ದು, ಕ್ರಮ ಕೈಗೊಳ್ಳಬೇಕಾದ ಪೊಲೀಸ್‌, ಪ್ರಾದೇಶಿಕ ಸಾರಿಗೆ ಸುಮ್ಮನಿರುವುದು ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಬಹುತೇಕ ಹೈಎಂಡ್‌ ಕಾರುಗಳಲ್ಲಿ ವ್ಯಾಪಕವಾಗಿ ನಿಯಮ ಮೀರಿದ ಹೆಡ್‌ಲೈಟ್‌ಗಳ ಬಳಕೆಯಾಗುತ್ತಿದ್ದು, ಅಂತಹ ಕಾರುಗಳು ಸಿಕ್ಕರೆ ಎದುರಿನಿಂದ ಬರುವ ವಾಹನಗಳ ಚಾಲಕರನ್ನು ದೇವರೇ ಕಾಪಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಅದರ ಪ್ರಖರ ಬೆಳಕು ಕಣ್ಣಿಗೆ ಬಿದ್ದರೆ ಸಂಪೂರ್ಣ ಕತ್ತಲೆ ಆವರಿಸಿ ಕ್ಷಣಕಾಲ ಎತ್ತ ಹೋಗಬೇಕು ಎಂದೂ ತಿಳಿಯದಾಗುತ್ತದೆ.

ಕಾರುಗಳನ್ನು ಖರೀದಿಸಿದ ಮಂದಿ ಅದನ್ನು ಮಾರ್ಪಾಡು (ಆಲೆóàಶನ್‌) ಮಾಡುವ ಸಂದರ್ಭದಲ್ಲಿ ಹೆಡ್‌ಲೈಟ್‌ ಸೇರಿದಂತೆ ಎಲ್ಲವನ್ನೂ ಬದಲಿಸುತ್ತಾರೆ. ಈ ವೇಳೆ ನಿಯಮ ಮೀರಿದ ವ್ಯಾಟ್ಸ್‌ ಗಳ ಹೆಡ್‌ಲೈಟ್‌ಗಳನ್ನು ಅಳವಡಿಸುತ್ತಾರೆ. ಇದರ ವಿರುದ್ಧ ಸಂಬಂಧಪಟ್ಟವರು ಕಾರ್ಯಾಚರಣೆಗೆ ಇಳಿಯದಿರುವ ಪರಿಣಾಮ ಅವುಗಳ ಬಳಕೆ ಹೆಚ್ಚುತ್ತಲೇ ಇದೆ.

ರಾತ್ರಿ ಪ್ರಯಾಣದ ಸಂದರ್ಭ ಪ್ರಖರ ಬೆಳಕಿನ ಹೆಡ್‌ಲೈಟ್‌ನ ವಾಹನ ಎದುರಾದರೆ ಸಂಪೂರ್ಣ ಕತ್ತಲ ಸ್ಥಿತಿ (ಬ್ಲೆ$çಂಡ್‌ನೆಸ್‌) ಸೃಷ್ಟಿಯಾಗಿ ನಮ್ಮ ಮುಂದೆ ಯಾರಾದರೂ ಹೋಗುತ್ತಿದ್ದಾರೆಯೇ, ಬೇರೆ ವಾಹನಗಳು ಇವೆಯೇ, ಮುಂದೆ ರಸ್ತೆ ಸರಿ ಇದೆಯೇ ಎಂಬಿತ್ಯಾದಿ ಯಾವ ವಿಚಾರಗಳೂ ಗಮನಕ್ಕೆ ಬಾರದೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ವಾಹನ ವೇಗವಾಗಿದ್ದರೆ ಚಾಲಕನ ನಿಯಂತ್ರಣ ಕಳೆದುಕೊಳ್ಳುವ ಅಪಾಯವೂ ಇರುತ್ತದೆ.

ದ್ವಿಚಕ್ರ ವಾಹನಗಳು, ಕಾರುಗಳು, ರಾತ್ರಿ ವೇಳೆ ಘಟ್ಟದ ಮೇಲಿನಿಂದ ಕರಾವಳಿಗೆ ತರಕಾರಿ ಇತ್ಯಾದಿ ಸರಕು ಸಾಗಿಸುವ ವಾಹನಗಳಲ್ಲಿ ಇಂತಹ ನಿಯಮ ಬಾಹಿರ ಹೆಡ್‌ಲೈಟ್‌ಗಳ ಬಳಕೆ ಹೆಚ್ಚಾಗಿ ಕಂಡುಬರುತ್ತಿದೆ. ಹೈಎಂಡ್‌ ಕಾರುಗಳು ಪ್ರಭಾವಿಗಳ ಕೈಯಲ್ಲೇ ಇರುವುದರಿಂದ ಇಲಾಖೆ ಸುಮ್ಮನಿದೆಯೇ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ದ್ವಿಚಕ್ರ ವಾಹನ, ಇತರ ವಾಹನಗಳಲ್ಲಿ ಹೋಗುವ ಸಾಮಾನ್ಯರು ತಪ್ಪು ಮಾಡಿದಾಗ ಗಲ್ಲಿ ಗಲ್ಲಿಗಳಲ್ಲಿ ನಿಂತು ತಪಾಸಣೆ ಮಾಡುವ ಪೊಲೀಸ್‌ ಇಲಾಖೆ ಇಂತಹ ವಾಹನಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸುವಂತಾಗಿದೆ.

Advertisement

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next