Advertisement

ಲಸಿಕೆ ನೀಡುವ ಕೆಲಸಕ್ಕೆ ಆದ್ಯತೆ ನೀಡಲು ಆಗ್ರಹ

12:38 PM May 12, 2021 | Team Udayavani |

ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರಎಲ್ಲ ಅರ್ಹರಿಗೂ ಲಸಿಕೆ ನೀಡುವ ಕೆಲಸ ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿಯಡಿಯೂರಪ್ಪ ಅವರಿಗೆ ಪತ್ರ ಬರೆದು,ಎರಡು ತಿಂಗಳಲ್ಲಿ ಲಸಿಕೆ ಅಭಿಯಾನಮುಗಿಸಬೇಕಿದೆ. ಲಸಿಕೆ ಕೇಂದ್ರದಿಂದಾದರೂ ತರಿಸಿಕೊಳ್ಳಬೇಕು, ಇಲ್ಲವೇರಾಜ್ಯದಲ್ಲೇ ಉತ್ಪಾದಿಸಿ ಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ರಾಜ್ಯದಲ್ಲಿ 18 ವರ್ಷ ತುಂಬಿದವರು4,37,80,330 ಜನರಿದ್ದಾರೆ.

ಇದುವರೆಗೂಎರಡನೇ ಡೋಸ್‌ಲಸಿಕೆ ನೀಡಿರುವುದು17,77,751 ಅಂದರೆ ಕೇವಲ ಶೇ.4.06ಜನರಿಗೆ ಮಾತ್ರ. ರಾಜ್ಯದಲ್ಲಿ 6,85,27ಆರೋಗ್ಯ ಕಾರ್ಯಕರ್ತರಿಗೆ ಮೊದಲಡೋಸ್‌ ನೀಡಲಾಗಿದೆ. ಇವರಲ್ಲಿ ಎರಡನೇನೀಡಿರುವುದು 1,67,581ಜನರಿಗೆ ಮಾತ್ರ ಎಂದು ಹೇಳಿದ್ದಾರೆ.60 ವರ್ಷ ತುಂಬಿದವರಲ್ಲಿ 8,41,056ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ.

44 ರಿಂದ 59 ವರ್ಷದ ಒಳಗಿರುವವರಿಗೆ3,29,952 ಜನರಿಗೆ ಮಾತ್ರ ಎರಡನೇಡೋಸ್‌ ನೀಡಲಾಗಿದೆ. 18 ರಿಂದ 45ವಯೋಮಾನದವರಿಗೆ ಇದುವರೆಗೂ5,759 ಜನರಿಗೆ ಮಾತ್ರ ಮೊದಲ ಡೋಸ್‌ನೀಡಲಾಗಿದೆ. ಮೊದಲನೇ ಡೋಸ್‌ ಎಷ್ಟೇಜನಕ್ಕೆ ಕೊಟ್ಟರೂ ಎರಡನೇ ಡೋಸ್‌ನೀಡದಿದ್ದರೆ ಉಪಯೋಗಕ ಬ ೆRರದು.ಹೀಗಾಗಿ, ಅವಧಿ ಮೀರುವ ಮುನ್ನ ಎಲ್ಲಅರ್ಹರಿಗೆ ಮೊದಲ ಹಾಗೂ ಎರಡನೇಡೋಸ್‌ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next