ತಿಪಟೂರು: ತಾಲೂಕಿನ ನೊಣವಿನಕೆರೆಯಲ್ಲಿ ಹುಚ್ಚು ನಾಯಿ ಮತ್ತು ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, 20-25 ಜನರಿಗೆ ಈಗಾಗಲೇ ಹುಚ್ಚುನಾಯಿ ಕಡಿ ದಿದ್ದು, ಜನರು ಓಡಾಡಲು ಭಯಬೀತರಾಗುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದ ಗ್ರಾಪಂ ಕಣ್ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೊಣವಿನಕೆರೆ ಹೋಬಳಿಯ ಯಾವ ಬಡಾವಣೆ ಗಳನ್ನು ನೋಡಿದರೂ ಬೀದಿ ನಾಯಿಗಳದ್ದೇ ಕಾರುಬಾರಾ ಗಿದ್ದು, ದೊಡ್ಡವರಿಂದ ಮಕ್ಕಳಾದಿಯಾಗಿ ಭಯದಿಂದ ಓಡಾಡುವಂತಾಗಿದೆ. ವಾಹನಗಳಲ್ಲಿ ಹೋಗುತ್ತಿದ್ದರೂಬೀದಿನಾಯಿಗಳು ಅಟ್ಟಿಸಿಕೊಂಡು ಬರುತ್ತವೆ. ಹಾದಿಬೀದಿಯಲ್ಲಿ ಹಾಕುವ ಕಸದ ರಾಶಿ ಹಾಗೂ ಮಾಂಸದಂಗಡಿಗಳವರು ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯವನ್ನೆ ನಾಯಿಗಳು ತಮ್ಮ ಆವಾಸ ಸ್ಥಾನವಾಗಿಸಿ ಕೊಂಡಿವೆ ಎಂದು ದೂರಿದರು.
ಮನೆಗಳಿಂದ ಹೊರ ಬರಬೇಕಾದರೆ ಬೀದಿನಾಯಿಗಳು ಎಲ್ಲಿ ಓಡಿಸಿಕೊಂಡು ಬರುತ್ತವೋ ಎಂದು ನೋಡಿ ಕೊಂಡು ಹೊರಗೆ ಬರಬೇಕಾದ ಪರಿಸ್ಥಿತಿ ಬಂದಿದೆ. ಮಕ್ಕಳು ಮನೆಗಳಿಗೆ ತೆರಳಬೇಕಾದರೆ ಎಲ್ಲಿ ನಾಯಿ ಬಂದು ನಮ್ಮನ್ನು ಕಚ್ಚಿಬಿಡುತ್ತದೆಯೋ ಎಂಬ ಭಯ ದಿಂದ ಓಡಾಡುವಂತಾಗಿದೆ. ಪೋಷಕರಂತೂ ಮಕ್ಕಳ ಮೇಲೆ ಹದ್ದಿನ ಕಣ್ಣಿಟ್ಟು ಕಾಯುವಂತಾಗಿದೆ.
ಗ್ರಾಪಂ ನಿರ್ಲಕ್ಷ: ಹುಚ್ಚುನಾಯಿ ಮತ್ತು ಬೀದಿನಾಯಿ ಗಳ ಹಾವಳಿ ವಿಪರೀತವಾಗಿದ್ದು, ಈ ಬಗ್ಗೆ ಗ್ರಾಪಂಗೆ ಹತ್ತು ಹಲವು ಬಾರಿ ಮನವಿ ಮಾಡಿದರೂ ಕ್ಯಾರೆ ಎನ್ನದೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ನಾಯಿ ಗಳನ್ನು ಹಿಡಿಯಲು ಜಿಲ್ಲಾಧಿಕಾರಿಗಳ ಆದೇಶಬೇಕಿದ್ದು ಆದೇಶ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎನ್ನು ತ್ತಾರೆ. ಆದರೆ ಜನರು ಪ್ರಾಣಭಯದಿಂದ ಓಡಾಡು ತ್ತಿದ್ದು ಆದೇಶ ಬರುವತ್ತಿಗೆ ಎಷ್ಟು ಜನರ ಜೀವವನ್ನು ಬಲಿ ಪಡೆದಿರುತ್ತವೆಯೋ ಗೊತ್ತಿಲ್ಲ.
ಅಧಿಕಾರಿಗಳ ನಿರ್ಲಕ್ಷಕ್ಕೆ ಅಮಾಯಕ ಜೀವಗಳು ಬಲಿಯಾಗಲಿದ್ದು ಇದೇ ರೀತಿ ಮುಂದುವರಿದರೆ ರೇಬಿಸ್ ರೋಗ ಹರಡುವ ಸಾಧ್ಯತೆ ಹೆಚ್ಚುವ ಸಾಧ್ಯತೆ ಇದೆ ಎಂಬುದು ಗ್ರಾಮಸ್ಥರ ಆತಂಕವಾಗಿದೆ. ಕೂಡಲೇ ಅಧಿಕಾರಿಗಳು ನಾಯಿಗಳ ಸಮಸ್ಯೆ ಬಗೆಹರಿಸದಿದ್ದರೆ ಗ್ರಾಪಂ ಮುಂದೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.