Advertisement
ವಲಯ ಅರಣ್ಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆಗಳನ್ನು ಪಡೆದು ಕೊಂಡಿದ್ದಾರೆ. ಸರಕಾರದ ಸೂಕ್ತ ಪರಿಹಾರದ ಮೊತ್ತವನ್ನು ರವಿ ಆಚಾರ್ಯ ಅವರಿಗೆ ದೊರಕಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಕಾಪು ವಲಯ ಉಪ ಅರಣ್ಯ ಅಧಿಕಾರಿ ಜೀವನ್‌ದಾಸ್ ಶೆಟ್ಟಿ ಅವರು ಹೇಳಿದ್ದಾರೆ.
ಪಿಲಾರು ಅರಣ್ಯ ಪ್ರದೇಶದಲ್ಲಿ ಕಾಡುಕೋಣಗಳ ದಿಂಡುಗಳ ವಾಸ್ತವ್ಯವಿದೆ. ಬೆರಳೆಣಿಕೆಯಲ್ಲಿದ್ದ ಈ ಪ್ರಾಣಿಗಳ ಹೆಣ್ಣು, ಗಂಡು ಸಂತತಿಯಿಂದಾಗಿ ವಂಶಾಭಿವೃದ್ಧಿಯಾಗಿದ್ದು ಇಲ್ಲಿಂದ ಹೊರಬಂದಿರುವ ಕೆಲವೊಂದು ಕಾಡುಕೋಣಗಳು ಯುಪಿಸಿಎಲ್‌ಗಾಗಿ ಸಾಂತೂರಿನಲ್ಲಿ ಈ ಹಿಂದೆ ಕೆಐಎಡಿಬಿ ಸ್ವಾಧೀನಪಡಿಕೊಂಡಿರುವ ಭೂಭಾಗದಲ್ಲಿ ಹುಲುಸಾಗಿ ಹುಲ್ಲು ಬೆಳೆದಿರುವ ಎಕ್ರೆಗಟ್ಟಲೆ ಜಾಗದಲ್ಲಿ ಅವು ವಿಹರಿಸಿಕೊಂಡಿವೆ. ಇಲ್ಲೇ ಅವುಗಳ ಸಂಖ್ಯಾಭಿವೃದ್ಧಿಯೂ ಆಗಿದ್ದು ಅ. 16ರಂದು ಇಲಾಖಾ ಸಹಕಾರ ಹಾಗೂ ಸ್ಥಳೀಯರ ಜತೆಗೂಡಿ ಇವುಗಳನ್ನು ಮತ್ತೆ ಕಾಡಿಗಟ್ಟುವ ನಿಟ್ಟಿನಲ್ಲಿ ಪಟಾಕಿ ಸಿಡಿಸಿ ಓಡಿಸುವ ಕಾರ್ಯಾಚರಣೆಯನ್ನೂ ಕೈಗೊಳ್ಳಲಾಗುವುದೆಂದೂ ಅರಣ ಅಧಿಕಾರಿ ಜೀವನ್‌ದಾಸ್ ಶೆಟ್ಟಿ ಮಾಹಿತಿ ಇತ್ತಿದ್ದಾರೆ.