Advertisement

Dandeli: ಬೀದಿ ನಾಯಿಗಳ ನಿಯಂತ್ರಣಕ್ಕೆ ವಿಳಂಬ

04:44 PM Oct 21, 2024 | Team Udayavani |

ದಾಂಡೇಲಿ: ನಗರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿರುವುದಕ್ಕೆ ಬೀದಿ ನಾಯಿಗಳು ಸಂಭ್ರಮಿಸುವಂತಿದೆ.

Advertisement

ಬೀದಿ ನಾಯಿಗಳು ದಿನದಿಂದ ದಿನಕ್ಕೆ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳತೊಡಗಿದ್ದು, ನಿನ್ನೆ ಭಾನುವಾರವು ನಗರದ ಬಾಂಬೆಚಾಳದಲ್ಲಿ ಬಾಲಕನೋರ್ವನ ಮೇಲೆ ದಾಳಿ ಮಾಡಿತ್ತು. ಬೀದಿನಾಯಿಗಳು ಕೇವಲ ರಸ್ತೆಗಳಲ್ಲಿ ಮಾತ್ರವಲ್ಲದೆ ಇದೀಗ ಶಾಲೆಯ ಆವರಣಗಳಲ್ಲಿಯೂ ತನ್ನ ಅಧಿಪತ್ಯವನ್ನು ಮೆರೆಯುತ್ತಿದೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಕಾನೂನಾತ್ಮಕವಾದ ಕಾರಣದಿಂದಾಗಿ ನಗರಸಭೆಯಿಂದ ವಿಳಂಬವಾಗುತ್ತಿರುವುದಕ್ಕೆ ಬೀದಿನಾಯಿಗಳು ಸಂಭ್ರಮಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next