Advertisement
ಗುರುವಾರ ಬನಶಂಕರಿ 3ನೇ ಹಂತದಲ್ಲಿ ರುವ ಕಾಮಾಕ್ಯ ಚಿತ್ರಮಂದಿರ ಸಮೀಪದ ಕಲಾವಿದ ಜಗದೀಶ್ ನಿರ್ಮಿಸುತ್ತಿರುವ ಕೆಂಪೇಗೌಡರ ಸೊಸೆ ಲಕ್ಷ್ಮಿ ದೇವಮ್ಮ ಅವರ ಪ್ರತಿಮೆಯನ್ನು ವೀಕ್ಷಿಸಿದ ಅವರು, ನಾಡಿಗಾಗಿ ತಮ್ಮ ಪ್ರಾಣ ಮುಡಿಪಾಗಿಟ್ಟ ಮಹಾತ್ಯಾಗಿ ಲಕ್ಷ್ಮಿದೇವಮ್ಮ ಪ್ರತಿಮೆಯ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ನನ್ನ ಅವಧಿಯಲ್ಲಿಯೇ ಪಾಲಿಕೆ ಮುಂಭಾಗ ಪ್ರತಿಮೆ ಅನಾವರಣಗೊಳಿಸಲಾಗುವುದು ಎಂದು ಹೇಳಿದರು.
Related Articles
Advertisement
ಕೆರೆ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕೆರೆಗೆ ಕೊಳಚೆ ನೀರು ಸೇರಿದಂತೆ ಕ್ರಮಕೊಳ್ಳಲು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅಳವಡಿಕೆ ಮಾಡುವಂತೆ ಅಧಿಕಾರಿಗಳಿಗ ಸೂಚಿಸಲಾ ಗಿದೆ. ಜತೆಗೆ ಗಣಪತಿ ವಿಸರ್ಜನೆಗೆ ಕೆರೆಯಲ್ಲಿ ಪ್ರತ್ಯೇಕ ಕಲ್ಯಾಣಿ ನಿರ್ಮಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಕೆರೆಯ ಸುತ್ತ ವಾಕಿಂಗ್ ಟ್ರ್ಯಾಕ್ ನಿರ್ಮಿಸಿ ತಂತಿಬೇಲಿ ಅಳವಡಿಸುವ ಮೂಲಕ ಕೆರೆ ಜಾಗ ಒತ್ತುವರಿಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ಪಾಲಿಕೆ ಸದಸ್ಯರಿಗೆ ತರಾಟೆ: ಕೆಂಪಾಂಬುದಿ ಕೆರೆ ಪರಿಶೀಲನೆ ವೇಳೆ ಸಾರ್ವಜನಿಕರು ಸ್ಥಳೀಯ ಪಾಲಿಕೆ ಸದಸ್ಯರ ಕಾರ್ಯ ವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೆರೆಯ ಸಮೀಪದಲ್ಲಿ ಹಲವಾರು ವರ್ಷ ಗಳಿಂದ ದೋಬಿಘಾಟ್ ಇದೆ. ಆದರೆ ಅದರ ಅಭಿವೃದ್ಧಿಗಾಗಿ ಯಾವುದೇ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಂಡಿಲ್ಲ.
ಜತೆಗೆ ಆ ಜನಾಂಗದವರಿಗೆ ಯಾವುದೇ ಸವಲತ್ತು ಗಳನ್ನು ದೊರಕಿಸಿಕೊಡಲು ಮುಂದಾಗುತ್ತಿಲ್ಲ ಎಂದು ದೂರಿದರು. ಈ ವೇಳೆ ಸ್ಥಳದಲ್ಲಿದ್ದ ಪಾಲಿಕೆ ಸದಸ್ಯ ರಮೇಶ್ ಅವರನ್ನು ಮೇಯರ್ ತರಾಟೆಗೆ ತೆಗೆದುಕೊಂಡು ಜನರ ಸೇವೆಗಾಗಿ ನಾವು ಆಯ್ಕೆಯಾಗಿದ್ದು, ಎಲ್ಲರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.