Advertisement

ರಾಜ್ಯದಲ್ಲಿ ಪ್ರಗತಿ ಕಾಣದ “ಉನ್ನತಿ’ಯೋಜನೆ

12:30 AM Nov 11, 2021 | Team Udayavani |

ಬೆಂಗಳೂರು: ಕೇಂದ್ರದ ಮಹತ್ವಾಕಾಂಕ್ಷಿ “ಉನ್ನತಿ ಯೋಜನೆ’ಗೆ ರಾಜ್ಯದಿಂದ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉದ್ದೇಶಿತ ಈ ಯೋಜನೆ ಪ್ರಗತಿಯಲ್ಲಿ 20 ಜಿಲ್ಲೆಗಳು ಶೂನ್ಯ ಸಂಪಾದನೆ ಮಾಡಿವೆ!

Advertisement

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೂರು ದಿನಗಳನ್ನು ಪೂರೈಸಿರುವವರ ಪ್ರತಿ ಕುಟುಂಬದಿಂದ ತಲಾ ಒಬ್ಬರನ್ನು ಆಯ್ಕೆ ಮಾಡಿ, ಅವರಿಗೆ ಕೌಶಲ ಅಭಿವೃದ್ಧಿ ಇಲಾಖೆಯಿಂದ ಕೌಶಲ ತರಬೇತಿ ನೀಡಲಾಗುವುದು. ಆ ಮೂಲಕ ಇದುವರೆಗೆ ಕೂಲಿ ಮಾಡಿಕೊಂಡು ಬಂದ ಕುಟುಂಬಗಳಿಗೆ ನಿರಂತರ ಉದ್ಯೋಗ ಮತ್ತು ಆದಾಯ ಕಲ್ಪಿಸುವ ಅರ್ಥಪೂರ್ಣ ಕಾರ್ಯಕ್ರಮವೇ “ಉನ್ನತಿ’. ಆದರೆ, ಎರಡು ವರ್ಷಗಳಿಂದ ಈ ಯೋಜನೆ ರಾಜ್ಯದಲ್ಲಿ ನೇಪಥ್ಯಕ್ಕೆ ಸರಿದಿದೆ. ಬಹುತೇಕ ಜಿಲ್ಲೆಗಳು ಶೂನ್ಯ ಸಂಪಾದನೆ ಮಾಡಿದ್ದರೆ, ಕೆಲವು ಜಿಲ್ಲೆಗಳು ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ತರಬೇತಿ ನೀಡಿ ಕೈತೊಳೆದುಕೊಂಡಿವೆ.

2021-22ನೇ ಸಾಲಿನಲ್ಲಿ (ನವೆಂಬರ್‌ವರೆಗೆ) ಕನಿಷ್ಠ ಎರಡೂವರೆ ಸಾವಿರ ಜನರಿಗೆ ಕೌಶಲ ತರಬೇತಿ ನೀಡುವ ಗುರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ನೀಡಿತ್ತು. ಈ ಪೈಕಿ ರಾಜ್ಯದಲ್ಲಿ ಒಟ್ಟಾರೆ ಕೇವಲ ಶೇ. 8-10ರಷ್ಟು ಅಂದರೆ ಸುಮಾರು 200 ಜನರಿಗೆ ಮಾತ್ರ ತರಬೇತಿ ನೀಡಲಾಗಿದೆ. 2020-21ರಲ್ಲಿ ಕನಿಷ್ಠ 900 ಜನರಿಗೆ ತರಬೇತಿ ನೀಡಲು ಗುರಿ ವಿಧಿಸ ಲಾಗಿತ್ತು. ಆದರೆ, 355 ಜನರಿಗೆ ಅಂದರೆ ಶೇ.39ರಷ್ಟು ಪ್ರಗತಿ ಸಾಧಿ ಸಲಾಗಿದೆ. ಹೀಗೆ ತರಬೇತಿ ಪಡೆದ ಅನೇಕರಿಗೆ ತಾಂತ್ರಿಕ ಕಾರಣಗಳ ನೆಪದಲ್ಲಿ ಗೌರವಧನ ಕೂಡ ಒದಗಿಸಿಲ್ಲ ಎಂದು ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಶೂನ್ಯ ಸಾಧನೆ
ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ, ಬೆಳಗಾವಿ, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕಲಬುರಗಿ, ಕೊಡಗು, ಕೋಲಾರ, ಮೈಸೂರು, ರಾಮನಗರ. ಉಳಿ ದಂತೆ ಬೆಂಗಳೂರು ಗ್ರಾಮಾಂತ ರ ದಲ್ಲಿ 23, ಬಳ್ಳಾರಿ 32, ಗದಗ 20, ಮಂಡ್ಯ 17, ಕೊಪ್ಪಳ 18, ಹಾವೇರಿ 6, ದಾವಣಗೆರೆ 5, ರಾಯಚೂರು 67, ಶಿವಮೊಗ್ಗದಲ್ಲಿ 22 ಮಂದಿಗೆ ತರ ಬೇತಿ ನೀಡಲಾಗಿದೆ.

ಮುಖ್ಯಾಂಶಗಳು
ಜಾಬ್‌ ಕಾರ್ಡ್‌ ಇರುವವರ ಸಂಖ್ಯೆ – 60 ಲಕ್ಷ
ಸಕ್ರಿಯರಾಗಿರುವ ವರ ಸಂಖ್ಯೆ – 35-40 ಲಕ್ಷ
ನೂರು ದಿನ ಪೂರೈಸಿದವರು – 1-2 ಲಕ್ಷ
ಹಾಲಿ ವರ್ಷದಲ್ಲಿ ನೂರು ದಿನ ಪೂರೈಸಿದವರು – 25-30 ಸಾವಿರ

Advertisement

1. ತರಬೇತಿ ವಿಷಯ
ಹೈನುಗಾರಿಕೆ, ಕುರಿ ಸಾಕಣೆ, ಎರೆಹುಳು ಗೊಬ್ಬರ ತಯಾರಿಕೆ, ಇತರ.
2. ತರಬೇತಿ ಕೇಂದ್ರ
RSETI ಅಥವಾ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)
3. ತರಬೇತಿ ಅವಧಿ
ಸಾಮಾನ್ಯವಾಗಿ 7ರಿಂದ 10ದಿನ
4. ಗೌರವ ಧನ ವಿವರ
ನಿತ್ಯ 200 ರೂ.ಗಳಂತೆ ಗೌರವಧನ
5. ಯೋಜನೆ ಹಿನ್ನಡೆಗೆ ಕಾರಣ
ಜಿ.ಪಂ. ಕಾರ್ಯನಿರ್ವಹಣಾ ಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗುರಿ ಸಾಧ್ಯವಾಗಿಲ್ಲ ಎಂಬುದು ಕೆಲವು ಅಧಿಕಾರಿಗಳ ಮಾತು.

“ಉನ್ನತಿ’ ಯೋಜನೆಯಡಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಈ ಬಗ್ಗೆ ಈಗಾಗಲೇ ಪರಿಶೀಲಿಸಿ, ಎಲ್ಲ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಯಾ ಗ್ರಾಮ ಮಟ್ಟದಲ್ಲೇ ತರಬೇತಿ ನೀಡಲು ಸಾಧ್ಯತೆಗಳ ಕುರಿತು ಗಮನಹರಿಸಿ, ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.
– ಎಲ್‌.ಕೆ. ಅತೀಕ್‌, ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next