Advertisement
ಪ್ರವಾದಿ ಮುಹಮ್ಮದ್ (ಸ.ಅ.) ಅವರ ಆಗಮನಕ್ಕಿಂತ ಮುಂಚಿತವಾಗಿ ಅರೇಬಿಯಾ ಅಜ್ಞಾನ, ಅಂಧಕಾರ, ಕ್ಷುಲ್ಲಕ ವಿಷಯಗಳಿಗಾಗಿ ಯುದ್ಧ, ಮೌಡ್ಯ ಮತ್ತು ಮಹಿಳೆಯ ಬಗ್ಗೆ ಅತ್ಯಂತ ತುಚ# ಭಾವನೆಯನ್ನು ಹೊಂದಿದ್ದ ಕಾಲಘಟ್ಟದಲ್ಲಿತ್ತು. ನ್ಯಾಯ, ನೀತಿ, ಲಜ್ಜೆಯಂಥ ವಿಷಯಗಳನ್ನು ಗಾಳಿಗೆ ತೂರಲಾಗಿತ್ತು. ಇಂತಹ ವಿಷಮ ಘಟ್ಟದಲ್ಲಿ ಅವರು ಅರೇಬಿಯಾದ ಸಾಮಾಜಿಕ ಸಂರಚನೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದರು. ಅವಿರತವಾದ ಪರಿಶ್ರಮ, ಸರಳತೆ, ಸಚ್ಚಾರಿತ್ರÂ ಮತ್ತು ತ್ಯಾಗಭರಿತ ಬದುಕಿನ ಮೂಲಕ ನನ್ನ ಜೀವನವೇ ನನ್ನ ಸಂದೇಶ ಎಂಬುದನ್ನು ಸಾಥìಕಗೊಳಿಸಿ ಮನುಕುಲದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಧರ್ಮವನ್ನು ಕಠಿಣಗೊಳಿಸದೆ ಸುಲಲಿತವಾಗಿಸುವುದು ಉತ್ತಮವೆಂದು ಪ್ರವಾದಿಯವರು ಜನಸಮೂಹಕ್ಕೆ ಹೇಳಿರುವುದು ಉಲ್ಲೇಖನಿಯ. ಧರ್ಮವು ತುಂಬಾ ಸುಲಭ, ಧರ್ಮವನ್ನು ಅತಿ ಹೊರೆಯನ್ನಾಗಿಸುವುದರಿಂದ ಅದನ್ನು ಯಥಾವತ್ತಾಗಿ ಕಾರ್ಯಗತಗೊಳಿಸುವುದು ಕಷ್ಟಕರವಾಗುತ್ತದೆ. ಆದುದರಿಂದ ಅತಿರೇಕಗೊಳಿಸದೆ ಆರಾಧನೆ ಪ್ರಾರ್ಥನೆಗಳನ್ನು ಸರಳ ಮತ್ತು ಸುಲಲಿತವಾಗಿಸಿ ಅದರಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದು ಹೆಚ್ಚು ಪುಣ್ಯದಾಯಕವೆಂದಿದ್ದಾರೆ.
Related Articles
Advertisement
ಹೊರೆಯೆನಿಸುವ ಮಟ್ಟದಲ್ಲಿ ಧರ್ಮದ ವಿಷಯದಲ್ಲಿ ಅತಿಯೆನಿಸುವುದನ್ನು ಮಾಡುವುದರಿಂದ ಕ್ರಮೇಣ ಬಳಲಿಕೆ, ಆಲಸ್ಯವುಂಟಾಗಿ ಧರ್ಮದಿಂದ ವಿಮುಖರಾಗುವ ಸಾಧ್ಯತೆಗಳಿವೆಯೆಂದು ಪ್ರವಾದಿಯವರು ಎಚ್ಚರಿಸಿದ್ದಾರೆ. ಅಲ್ಲಾಹನು ನಿಮ್ಮ ಹೆಚ್ಚಿನ ಆರಾಧನೆಗಳಿಗೆ ಪ್ರತಿಫಲವನ್ನು ನೀಡುವುದರಲ್ಲಿ ಆಯಾಸಗೊಳ್ಳುವುದಿಲ್ಲ. ಆದರೆ ದುರ್ಬಲರಾದ ಮನುಷ್ಯರು ಆಯಾಸಗೊಳ್ಳುತ್ತಾರೆ. ನಿತ್ಯ ನಿರಂತರವಾಗಿ ಮಾಡುವ ಸುಲಭ ಕರ್ಮಗಳು ಅಲ್ಲಾಹನ ಬಳಿ ಅತ್ಯುತ್ತಮವೆನಿಸಿದ್ದು, ಧರ್ಮವು ಮನುಷ್ಯನ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯಕ್ಕೆ ಮೀರಿದ ಕಠಿಣ ಕರ್ಮಗಳನ್ನು ಕಡ್ಡಾಯಗೊಳಿಸಿ ಕಷ್ಟಕ್ಕೀಡುಮಾಡುವ ಉದ್ದೇಶವನ್ನು ಹೊಂದಿಲ್ಲವೆಂದು ಪವಿತ್ರ ಕುರಾನ್ ಮತ್ತು ಪ್ರವಾದಿ ಚರ್ಯೆಗಳಿಂದ ಸ್ಪಷ್ಟಗೊಂಡಿದೆ.
ನೆರೆಹೊರೆಯುವರೊಂದಿಗೆ ಸಂಬಂಧನೆರೆಹೊರೆಯವರೊಂದಿಗೆ ಉತ್ತಮ ಬಾಂಧ್ಯವನ್ನು ಬೆಳೆಸುವುದನ್ನು ಪೈಗಂಬರರು ಉತ್ಕೃಷ್ಟ ಮೌಲ್ಯವಾಗಿ ಪರಿಗಣಿಸಿದ್ದರು. ನೈಜ ಮುಸ್ಲಿಂ ಯಾರೆಂದರೆ ಆತನಿಂದ ನೆರೆಯವರ ಜೀವ, ಸೊತ್ತು, ವಿತ್ತಗಳು ಸುರಕ್ಷಿತವಾಗಿರುವುದು ಎಂಬುದು ಪ್ರವಾದಿಯವರ ನಿರ್ವಚನವಾಗಿತ್ತು. ಓರ್ವ ಮಹಿಳೆ ಧರ್ಮಭಕ್ತೆಯಾಗಿದ್ದು ಹೆಚ್ಚಿನ ರೀತಿಯಲ್ಲಿ ಪ್ರಾರ್ಥನೆ ಉಪವಾಸ ಮತ್ತು ದಾನಧರ್ಮಗಳನ್ನು ಮಾಡುತ್ತಿದ್ದರು. ಆದರೆ ಆಕೆ ನೆರೆಯವರ ಜೊತೆಗೆ ಬಹಳ ಕಠಿಣವಾಗಿ ವರ್ತಿಸುತ್ತಿದ್ದರು. ಇದರಿಂದ ಆ ಮಹಿಳೆ ನರಕವಾಸಿಯಾಗಿದ್ದಾರೆಂದು ಪೈಗಂಬರರು ಹೇಳಿದರು. ನೆರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನಮ್ಮವನಲ್ಲ ಎಂದು ಪೈಗಂಬರರು ಹೇಳಿರುವುದು ಉಲ್ಲೇಖನೀಯ. ಪ್ರವಾದಿಯವರ ಕಾಲದಲ್ಲಿ ತಾವು ಉಣ್ಣುವುದಕ್ಕೆ ಮುಂಚಿತವಾಗಿ ತಮ್ಮ ನೆರೆಹೊರೆಯವರಿಗೆ ಸಾಕಷ್ಟು ಆಹಾರವಿದೆಯೇ ಎಂಬುದನ್ನು ನೋಡಿ ತಿಳಿಯುವ ಪರಿಪಾಠವನ್ನು ಅವರ ಅನುಚರರು ಹೊಂದಿದ್ದರು. ಅಬೂದರ್ರ ಎಂಬ ತನ್ನ ನಿಕಟವರ್ತಿಗೆ ಪೈಗಂಬರರು ಒಮ್ಮೆ ಹೇಳುತ್ತಾರೆ ನೀವು ಸಾರು ಮಾಡುವುದಾದರೆ ಅದರ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸಿ ನಿಮ್ಮ ನೆರೆಯವರಿಗೆ ನೀಡಿ. ನೆರೆಹೊರೆಯ ಯಹೂದಿಗಳಿಗೂ ವಿಶೇಷ ಸಂದರ್ಭಗಳಲ್ಲಿ ಮಾಂಸವನ್ನು ಹಂಚುತ್ತಿದ್ದರು. ಕೇವಲ ದೇವನಿಗೆ ಸಂಬಂಧಿಸಿದ ಕರ್ತವ್ಯಗಳಲ್ಲದೆ ಸಹಜೀವಿಗಳೊಂದಿಗೆ ಹೇಗೆ ವರ್ತಿಸಬೇಕೆಂಬುದಕ್ಕೆ ಇದೊಂದು ಪಾಠದಂತಿದೆ. ನಿಸರ್ಗ ಮತ್ತು ನೀರಿನ ಮಹತ್ವ
ಮಾನವ ಜೀವನದ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುವ ಮಾನವೀಯ ಸಂದೇಶವನ್ನು ನೀಡಿರುವ ಪೈಗಂಬರರು, ಪರಿಸರ ಮತ್ತು ನೀರಿನ ಮಹತ್ವವನ್ನು ಸಾರಿ ಹೇಳಿದ್ದರು. ಜಾಗತಿಕ ತಾಪಮಾನ, ಪರಿಸರಕ್ಕೆ ಸಂಬಂಧಿಸಿದ ಬಿಕ್ಕಟ್ಟುಗಳು ಈ ಕಾಲದ ಬಹುದೊಡ್ಡ ಸವಾಲಾಗಿದೆ. ಈ ಪ್ರಕೃತಿಯಲ್ಲಿ ದೇವನು ಸಮತೋಲನವನ್ನಿರಿಸಿದ್ದು ಅದನ್ನು ಭಂಗಗೊಳಿಸಿದರೆ ವಿನಾಶಕಾರಿ ಪರಿಣಾಮಗಳು ಎದುರಾಗಬಹುದೆಂದು ಕುರಾನ್ ಎಚ್ಚರಿಸಿದೆ. ಮುಸ್ಲಿಮರು ಇಡೀ ಮಾನವಕುಲವನ್ನು ವಿಶ್ವದ ಸ್ವರಮೇಳದ ಭಾಗವೆಂದು ಪರಿಗಣಿಸಬೇಕಾಗುತ್ತದೆ. ಮಾನವರನ್ನು ಈ ಭೂಮಿಯಲ್ಲಿ ದೇವನ ಪ್ರತಿನಿಧಿಗಳೆಂದು ಕರೆಯಲಾಗಿದೆ. ಪ್ರಕೃತಿಯಲ್ಲಿರುವ ಎಲ್ಲವನ್ನೂ ಅವರಿಗೆ ಕೊಡುಗೆಯಾಗಿ ನೀಡಲಾಗಿದೆ. ಇದನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಜ್ಞಾನ ವಿವೇಕವನ್ನು ನೀಡಲಾಗಿದೆ. ಮಾನವರು ಈ ಅಗಾಧ ಸಂಪತ್ತಿನ ಧರ್ಮದರ್ಶಿಗಳಾಗಿ ಎಲ್ಲಾ ರೀತಿಯ ದುರಾಸೆಗಳಿಂದ ಮುಕ್ತರಾಗಿ ಸಕಲ ಜೀವಾತ್ಮರಿಗೂ ಈ ಭೂಮಿಯನ್ನು ಸುಭಿಕ್ಷವಾಗಿರಿಸುವ ಹೊಣೆಯನ್ನು ಹೊಂದಿದ್ದಾರೆ. ಪವಿತ್ರ ಕುರಾನಿನಲ್ಲಿರುವ 6,666 ಸೂಕ್ತಿಗಳ ಪೈಕಿ ಸುಮಾರು 500 ರಷ್ಟು ಸೂಕ್ತಿಗಳು ನೈಸರ್ಗಿಕ ವಿಷಯಗಳ ಬಗ್ಗೆ ವಿವರಿಸುತ್ತದೆ. ಅಲ್ಲಾಹನು ಆಕಾಶ, ಭೂಮಿಯಲ್ಲಿರುವ ತನ್ನ ದೃಷ್ಟಾಂತಗಳ ಬಗ್ಗೆ ಗಹನವಾಗಿ ಚಿಂತಿಸಲು ಆಗಾಗ ನೆನಪಿಸುತ್ತಾನೆ. ಪರ್ವತಗಳು, ಸಮುದ್ರ, ಪ್ರಾಣಿ-ಪಕ್ಷಿ ಸಂಕುಲ, ಸೂರ್ಯ-ಚಂದ್ರ ನಕ್ಷತ್ರಗಳು ಹೀಗೆ ಅನೇಕ ಕುರುಹುಗಳು ನಮ್ಮ ಕಣ್ಣ ಮುಂದಿದೆ. ಮದೀನದ ಗಡಿಯುದ್ದಕ್ಕೂ ಮರಗಳನ್ನು ಸಂರಕ್ಷಿಸಲಾಗಿದ್ದು ಮರು ಭೂಮಿಯಲ್ಲಿ ಪ್ರಾಣಿಗಳಿಗೆ ಆಶ್ರಯ ಮತ್ತು ನೆರಳು ನೀಡುತ್ತಿದ್ದ ದೇವದಾರು ಮರಗಳನ್ನು ಕಡಿಯುವುದನ್ನು ಪೈಗಂಬರರು ಕಟ್ಟುನಿಟ್ಟಾಗಿ ನಿಷೇಧಿಸಿದ್ದರು. ಇಡೀ ಭೂಮಿಯನ್ನು ಪವಿತ್ರ ದೃಷ್ಟಿಯಿಂದ ನೋಡಬೇಕೆಂಬ ಆಶಯ ಪ್ರವಾದಿಯವರ ವಚನಗಳಲ್ಲಿದೆ. ಐದು ಹೊತ್ತಿನ ನಮಾಝ್ ಮನುಷ್ಯನಿಗೆ ಭೂಮಿಯೊಂದಿಗಿನ ಪವಿತ್ರ ಸಂಬಂಧವನ್ನು ಸಂಕೇತಿಸುತ್ತದೆ. ನಮಾಝ್ ನೇರವಾಗಿ ನಿಲ್ಲುವುದರಿಂದ ಆರಂಭಗೊಂಡು ನಾವು ಜನಿಸಿ ಬಂದಿರುವ ಭೂಮಿಗೆ ಹಣೆಯನ್ನು ಇಟ್ಟು ಸಾಷ್ಟಾಂಗವೆರಗಿ ದೇವನನ್ನು ಸುತ್ತಿಸುವ ವಿಶಿಷ್ಠ ಪ್ರಾರ್ಥನೆಯಾಗಿದೆ. ಈ ಭೂಮಿಯ ಅಂತ್ಯ ಸಮಿಪಿಸುತ್ತಿರುವುದೆಂದು ತಿಳಿದರೂ ನಿನ್ನ ಕೈಯಲ್ಲಿರುವ ಪುಟ್ಟ ಸಸಿಯೊಂದನ್ನು ಭೂಮಿಯಲ್ಲಿ ನೆಟ್ಟು ಬಿಡಿ ಎಂದು ಪ್ರವಾದಿಯವರು ಹೇಳಿದ್ದಾರೆ. ಅದೇ ರೀತಿ ಇಸ್ಲಾಮಿಕ್ ನ್ಯಾಯಶಾಸ್ತ್ರ ಮಿತವಾಗಿ ಲಭ್ಯವಿರುವ ನೀರನ್ನು ಹೇಗೆ ಸಂರಕ್ಷಿಸಿ ವಿತರಿಸಬೇಕೆಂದು ನಿಯಮಾವಳಿಗಳನ್ನು ಹಾಕಿಕೊಟ್ಟದೆ. ಮಳೆ, ಸಮುದ್ರ, ಸಾಗರಗಳು, ನದಿಗಳು ಕಾರಂಜಿಗಳ ಬಗ್ಗೆ ಕುರಾನಿನಲ್ಲಿ ತಿಳಿಸಿದ್ದು, ಅವುಗಳು ಮಾನವ ಕುಲಕ್ಕೆ ದೇವನ ಕರುಣೆ ಮತ್ತು ಔದಾರ್ಯಗಳಾಗಿವೆ. ಬಾಯಾರಿಕೆಯಿಂದ ಬಳಲಿದ ವ್ಯಕ್ತಿಗೆ ನೀರುಣಿಸುವುದು ಒಂದು ಸತ್ಕರ್ಮವಾಗಿದೆ. ಮನುಷ್ಯರಂತೆ, ಪ್ರಾಣಿಗಳು ಮತ್ತು ಬೆಳೆಗಳಿಗೂ ನೀರಿನ ಹಕ್ಕಿದೆಯೆಂದು ಪ್ರತಿಪಾದಿಸಿದ ಪೈಗಂಬರರು ಯಥೇಚ#ವಾಗಿ ನೀರಿನ ಲಭ್ಯತೆಯಿದ್ದರೂ ಅದನ್ನು ಅನಗತ್ಯವಾಗಿ ಪೋಲು ಮಾಡುವುದು ನಿಷಿದ್ಧ ಮತ್ತು ಪಾಪಕಾರ್ಯವೆಂದು ಎಚ್ಚರಿಸಿದ್ದಾರೆ. ನೀರಿನಿಂದ ಆವೃತವಾದ ಪ್ರದೇಶಗಳನ್ನು ತಟಸ್ಥ ವಲಯಗಳೆಂದು ಘೋಷಿಸುವಂತೆೆ ಸಲಹೆ ನೀಡಿದ ಪೈಗಂಬರರು ಯುದ್ಧದ ಸಂದರ್ಭಗಳಲ್ಲಿಯೂ ನೀರನ್ನು ಕಲುಷಿತಗೊಳಿಸಬಾ ರದೆಂದು ತಾಕೀತು ನೀಡಿದ್ದಾರೆ. ಅದಿಪಿತ ಆದಂ(ಅ.ಸ)ರಿಂದ ಆರಂಭಗೊಂಡ ಪ್ರವಾದಿ ಶೃಂಖಲೆಯನ್ನು ದೇವನು ಅಂತ್ಯಪ್ರವಾದಿ ಲೋಕಾನುಗ್ರಹಿ ಮುಹಮ್ಮದ್(ಸ.ಅ)ರ ಮೂಲಕ ಪರಿಸಮಾಪ್ತಿಗೊಳಿಸಿದ್ದಾನೆ. ಮಾನವ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅನುಕರಣೀಯ ವಾದ ಮಾದರಿಗಳನ್ನು ಹಾಕಿಕೊಟ್ಟ ಪೈಗಂಬರರನ್ನು ಕುರಾನಿನಲ್ಲಿ ಉಸುವತುನ್ ಹಸನ ಅದರ್ಶ ಅನುಕರಣೀಯ ಮಾದರಿ ವ್ಯಕ್ತಿತ್ವವೆಂದು ಬಣ್ಣಸಲಾಗಿದೆ. ಆ ಮಹಾನ್ ಪ್ರವಾದಿಯವರು ಜಗತ್ತಿನಿಂದ ಕಣ್ಮರೆಯಾಗಿ 1400 ವರ್ಷಗಳೇ ಸಂದರೂ ಅವರು ತಮ್ಮ ಸಂದೇಶಗಳ ಮೂಲಕ ಜಗತ್ತಿನ ಮಾರ್ಗದರ್ಶಿಯಾಗಿ ಜನಮಾನಸದಲ್ಲಿ ವಿರಾಜಮಾನರಾಗಿದ್ದಾರೆ. – ಡಾ| ಮೊಹಮ್ಮದ್ ಮುಸ್ತಫಾ ಆತೂರು