Advertisement
ಇಲ್ಲಿನ ತಾಪಂನಲ್ಲಿ ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ, ನೂತನ ಎಂಎಲ್ಸಿ ಶರಣಗೌಡ ಬಯ್ನಾಪುರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂತಹ ವಿಪರ್ಯಾಸ ಬಯಲಾಗಿದೆ.
Related Articles
Advertisement
ವಿವಿಧ ಇಲಾಖೆಯವರು ಒಂದೇ ಒಂದು ಪ್ರತಿಯ ಮಾಹಿತಿ ಕೊಟ್ಟು ಆಟ ಆಡಿಸಿದರೆ, ಕೆಆರ್‌ಐಡಿಎಲ್‌ನವರು ನೂರಾರು ಕಾಮಗಾರಿಗಳ ವಿವರ ಕೊಟ್ಟು ಒಂದಕ್ಕೂ ಉತ್ತರಿಸದಾದರು. 2018-19ನೇ ಆರ್ಥಿಕ ವರ್ಷ ಸೇರಿದಂತೆ ಯಾವುದೇ ನೂರಾರು ಕೋಟಿ ರೂ.ಗಳ ವೆಚ್ಚದ ಕಾಮಗಾರಿ ವಿವರವನ್ನು ಗೌಪತ್ಯವಾಗಿಟ್ಟು, ಮೂರ್‍ನಾಲ್ಕು ವರ್ಷಗಳ ಬಳಿಕ ಅದರ ವಿವರವನ್ನು ಸಭೆಗೆ ಕಳುಹಿಸುವ ಹಿರಿಯ ಅಧಿಕಾರಿಗಳ ಚಾಳಿ ಮುಂದುವರಿಯಿತು. 25 ಕೋಟಿ ರೂ.ಗೂ ಹೆಚ್ಚು ಮೊತ್ತದ ಕೆಲಸ ಕೊಟ್ಟಿದ್ದರೆ, 18 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆಯೂ ವಿವರ ನೀಡಿರಲಿಲ್ಲ. ಆದರೆ, ಒಟ್ಟುಗೂಡಿಸಿ ನೋಡಿದಾಗ ಯಾವುದರ ಸುಳಿವು ನೀಡದೇ ದಿಕ್ಕು ತಪ್ಪಿಸುವ ಪ್ರಯತ್ನಕ್ಕೆ ಕೈ ಹಾಕಿದ್ದು, ರಟ್ಟಾಯಿತು. ಏನೋ ಗೊತ್ತಿಲ್ಲದ ಸಿಬ್ಬಂದಿ ಛೀಮಾರಿಗೆ ಗುರಿಯಾದರೆ, ಹಿರಿಯ ಅಧಿಕಾರಿಗಳು ಪೋನಿನಲ್ಲೇ ವಿವರ ಕೇಳುತ್ತಿರುವ ಸಂಗತಿಯೂ ಹೊರಬಿತ್ತು.
ಮೂರು ಕಾಮಗಾರಿ ಬದಲಾವಣೆಯಾಗಿದ್ದರೆ, ಎಲ್ಲಿಗೆ ಹೋಗಿವೆ. ನಾನೇ ಮಾಹಿತಿ ಕೊಡಬೇಕಾ? ಕೆಆರ್‌ಐಡಿಎಲ್‌ನಿಂದ ಬಂದಿರುವ ನಿನಗೆ ಏನು ಗೊತ್ತಿಲ್ಲ ಅಂದ್ರೆ, ಯಾಕ್ ಬರ್ತೀಯಾ? ನಮ್ಮ ಪ್ರಾಣ ತಿನ್ನಲಿಕ್ಕೆ ಬರ್ತೀರಿ ಅಷ್ಟೇ. -ವೆಂಕಟರಾವ್ ನಾಡಗೌಡ, ಶಾಸಕ, ಸಿಂಧನೂರು
-ಯಮನಪ್ಪ ಪವಾರ