Advertisement

“ಚರಿತ್ರೆಯ ಸತ್ಯಾಂಶಗಳು ತಿರುಚಲ್ಪಟ್ಟಿವೆ’

07:20 AM Aug 17, 2017 | Harsha Rao |

ವಿಟ್ಲ : ದೇಶದ ಸ್ವಾತಂತ್ರ್ಯ ಚರಿತ್ರೆಯ ಸತ್ಯಾಂಶಗಳನ್ನು ತಿರುಚಲಾಗಿದೆ. ಕೇವಲ ಅಹಿಂಸೆ, ಅಸಹಕಾರಕ್ಕೆ ಮಣಿದು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿಲ್ಲ. ಅಪ್ಪಟ ದೇಶಪ್ರೇಮಿಗಳ ನಿರಂತರ ಹೋರಾಟ, ತ್ಯಾಗ, ಬಲಿದಾನ ಬ್ರಿಟಿಷ್‌ ಆಡಳಿತವನ್ನು ಅಸ್ಥಿರಗೊಳಿಸಿತು. ಒಡೆದು ಆಳುವ ನೀತಿಯಿಂದ ದೇಶ ಕಬಳಿಸಿದ ಇಂಗ್ಲಿಷರು, ದೇಶ ವಿಭಜಿಸಿ ಸ್ವಾತಂತ್ರ್ಯ ನೀಡಿ ವಿಷಬೀಜ ಬಿತ್ತಿದ ಕಾರಣವೇ ಇಂದಿಗೂ ನೆರೆಹೊರೆಯ ರಾಷ್ಟ್ರಗಳಿಂದ ಹಿಂಸೆ, ಅಶಾಂತಿ ತಲೆದೋರಿದೆ ಎಂದು ರಾಜ್ಯ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮಾಜಿ ಉಪಾಧ್ಯಕ್ಷ ರೋಹಿಣಾಕ್ಷ ಶಿರ್ಲಾಲು ಹೇಳಿದರು.

Advertisement

ಅವರು ವಿಟ್ಲದಲ್ಲಿ ಸೋಮವಾರ ರಾತ್ರಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ರಾಷ್ಟ್ರ ಜಾಗƒತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ದೇಜಪ್ಪ ಪೂಜಾರಿ ನಿಡ್ಯ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಪ್ಪ ಕಲ್ಲಡ್ಕ ಉಪಸ್ಥಿತರಿದ್ದರು. ಚರಣ್‌ ದೇಶಭಕ್ತಿಗೀತೆ ಹಾಡಿದರು. ಪದ್ಮನಾಭ ಕಟ್ಟೆ ಸ್ವಾಗತಿಸಿದರು. ಜಗದೀಶ ಪಾಣೆಮಜಲು ವಂದಿಸಿದರು. ಹರೀಶ್‌ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next