Advertisement

ಸುದೀರ್ಘ‌ ಅವಧಿ ನಂತರ ರೈಲು ಬಂತು

06:16 AM May 23, 2020 | Suhan S |

ದಾವಣಗೆರೆ: ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣ ಹಿನ್ನೆಲೆಯಲ್ಲಿ ದೇಶಾದ್ಯಂತ ಸ್ಥಗಿತಗೊಳಿಸಿದ್ದ ರೈಲು ಸಂಚಾರ ಆರಂಭವಾಗಿದ್ದು, ಶುಕ್ರವಾರ ನಗರದ ರೈಲ್ವೆ ನಿಲ್ದಾಣಕ್ಕೆ ಬೆಂಗಳೂರು-ಬೆಳಗಾವಿ ವಿಶೇಷ ರೈಲು ಆಗಮಿಸಿತು.

Advertisement

ಬೆಂಗಳೂರಿನಿಂದ ಹಲವು ಪ್ರಮಾಣಿಕರು ನಗರಕ್ಕೆ ಆಗಮಿಸಿದರೆ, ಹಲವರು ಹುಬ್ಬಳ್ಳಿ ಹಾಗೂ ಬೆಳಗಾವಿ ಕಡೆಗೆ ಪ್ರಯಾಣ ಬೆಳೆಸಿದರು. ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ನಿನ್ನೆಯಿಂದ (ಮೇ 22)ರಿಸರ್ವೇಷನ್‌ ಟಿಕೆಟ್‌ ಕೌಂಟರ್‌ ಪ್ರಾರಂಭಿಸಲಾಗಿದ್ದು, ಜೂ. 1 ರಿಂದ ಪ್ರಾರಂಭವಾಗುವ 100 ಜೋಡಿ ರೈಲು ಸೇವೆಗಳಿಗೆ ಕಾಯ್ದಿರಿಸಿದ ಟಿಕೆಟ್‌ ಬುಕ್‌ ಮಾಡಲು ಪಿಆರ್‌ಎಸ್‌ ಕೌಂಟರ್‌ ಕಾರ್ಯ ನಿರ್ವಹಿಸಲಿವೆ.

ಲಾಕ್‌ಡೌನ್‌ ಸಂದರ್ಭದಲ್ಲಿ ರದ್ದುಪಡಿಸಲಾಗಿದ್ದ ರೈಲುಗಳ ಟಿಕೆಟ್‌ ಹೊಂದಿರುವ ಪ್ರಯಾಣಿಕರ ಹಣ ಮರುಪಾವತಿಯ ಸೌಲಭ್ಯವನ್ನು ಸಹ ಈ ಕೌಂಟರ್‌ಗಳಲ್ಲಿ ಮೇ 25 ರಿಂದ ಪಡೆಯಬಹುದು. ಬೆಂಗಳೂರಿನಿಂದ ಬೆಳಗಾವಿಗೆ (ವಾರದಲ್ಲಿ ಮೂರು ದಿನ) ವಿಶೇಷ ರೈಲು ಸಂಚಾರ ಪ್ರಾರಂಭಿಸಲಾಗಿದೆ. ಸಾಮಾಜಿಕ ಅಂತರ ಮತ್ತು ಇತರೆ ನಿಗದಿತ ಕೋವಿಡ್‌ -19 ಕ್ರಮ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಬುಕಿಂಗ್‌ ಕಚೇರಿ ಸೇರಿದಂತೆ ರೈಲು ನಿಲ್ದಾಣ ಆವರಣದಲ್ಲಿ ಸ್ವತ್ಛತೆ, ನೈರ್ಮಲ್ಯ ಕಾಪಾಡಿಕೊಳ್ಳಲು ಪ್ರಯಾಣಿಕರು ಸಹಕರಿಸಬೇಕು ಎಂದು ಪ್ರಕಟಣೆ ಮೂಲಕ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next