ಲಂಡನ್: ಪ್ರತಿಯೊಬ್ಬರಿಗೂ ಲೈಂಗಿಕ ಚಟುವಟಿಕೆ ಬಗ್ಗೆ ಕಲ್ಪನೆಯನ್ನು ಹೊಂದಿದ್ದಾರೆ. ಕೆಲವರು ನಿರ್ದಿಷ್ಟವಾದ ಕಲ್ಪನೆಯನ್ನು ಹೊಂದಿದ್ದು, ಕೆಲವರು ವಿಭಿನ್ನ ದೃಷ್ಟಿಕೋನ ತಾಳಿರುವುದಾಗಿ ಸಮೀಕ್ಷೆಯೊಂದು ತಿಳಿಸಿದೆ. ಇದರಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಚಟುವಟಿಕೆ ನಡೆಸುವ ಬಗ್ಗೆ ಒಲವು ತೋರಿದ್ದು, ಡಾ.ಎಡ್ ಆನ್ ಲೈನ್ ಡಾಕ್ಟರ್ ನಡೆಸಿದ ಸಮೀಕ್ಷೆ ಇಂತಹ ಟಾಪ್ ಟೆನ್ ಸ್ಥಳಗಳ ಮಾಹಿತಿ ಬಹಿರಂಗಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಕಾರ್ಯನಿರ್ವಹಿಸುವ ಸ್ಥಳದಲ್ಲಿ ಲೈಂಗಿಕ ಚಟುವಟಿಕೆ ನಡೆಸುವುದನ್ನು ಬಗ್ಗೆ ಶೇ.1.4ರಷ್ಟು ಜನರು ಒಪ್ಪಿಕೊಂಡಿದ್ದಾರೆ. ಆದರೆ ಇದು ತುಂಬಾ ಜನಪ್ರಿಯ ಆಯ್ಕೆಯಲ್ಲ..ಯಾಕೆಂದರೆ ಜನರು ಹೆಚ್ಚು ಆತಂಕಕ್ಕೊಳಗಾಗುವ ಸಾಧ್ಯತೆ ಇದ್ದಿರುವುದರಿಂದ ಇಂತಹ ಸ್ಥಳದ ಆಯ್ಕೆ ಕಡಿಮೆ ಎಂದು ಸಮೀಕ್ಷೆ ಹೇಳಿದೆ.
ಅದೇ ರೀತಿ ಬಾಲ್ಕನಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವವರು ಶೇ.1.6ರಷ್ಟು, ಕೆಲವರು ಸ್ವಿಮ್ಮಿಂಗ್ ಫೂಲ್ (ಈಜುಕೊಳ)ದಲ್ಲಿ ಇದು ಶೇ.1.8ರಷ್ಟು ಎಂದು ಸಮೀಕ್ಷೆ ತಿಳಿಸಿದೆ.
ಶೇ.2ರಷ್ಟು ಮಂದಿ ಡ್ರೆಸ್ಸಿಂಗ್ ರೂಮ್ ಆಯ್ಕೆ ಎಂಬುದಾಗಿ ತಿಳಿಸಿದ್ದಾರೆ. ಶೇ.2ರಷ್ಟು ಕ್ಯಾಂಪಸ್ ಪ್ರದೇಶ, ಶೇ.2.6ರಷ್ಟು ಸಿನಿಮಾ ಹಾಲ್, ಶೇ.5.6ರಷ್ಟು ಸಾರ್ವಜನಿಕ ಬಾತ್ ರೂಂ (ಸ್ನಾನಗೃಹ) ಎಂಬುದಾಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರಂತೆ.
ಇದರಲ್ಲಿ ಶೇ.12.7ರಷ್ಟು ಮಂದಿ ಬೀಚ್ ಅಥವಾ ಸಮುದ್ರ ಪ್ರಯಾಣದ ಸಂದರ್ಭ ಎಂಬುದಾಗಿ ತಿಳಿಸಿದ್ದಾರೆ. ಶೇ.16ರಷ್ಟು ಕಾರಿನೊಳಗೆ ಲೈಂಗಿಕ ಕ್ರಿಯೆ ಇಷ್ಟ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.26.1ರಷ್ಟು ಮಂದಿ ಪಬ್ಲಿಕ್ ಪಾರ್ಕ್ ಸೂಕ್ತ ಸ್ಥಳ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಸಮೀಕ್ಷೆ ವಿವರಿಸಿದೆ.