Advertisement

ಉಗ್ರರಿಗೆ ಬಿರಿಯಾನಿ ಕೊಡುವ ಕಾಲ ಹೋಗಿದೆ;ದೇಶದ್ರೋಹಿಗಳನ್ನು ಮಟ್ಟ ಹಾಕುವುದು ಖಂಡಿತಾ: CT ರವಿ

05:19 PM Nov 29, 2020 | Mithun PG |

ಚಿಕ್ಕಮಗಳೂರು: ಉಗ್ರವಾದಿಗಳು ಹೋಗಬೇಕಿರುವುದು ಮಸಣಕ್ಕೆ. ಅವರನ್ನ ಅಲ್ಲಿಗೆ ಕಳಿಸುವ ಕೆಲಸವನ್ನು  ಪೊಲೀಸ್ ಮತ್ತು ಸೇನೆ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಗೋಡೆ ಮೇಲೆ ದೇಶದ್ರೋಹ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಉಗ್ರರಿಗೆ ಬಿರಿಯಾನಿ ಕೊಡುವ ಕಾಲ ಹೋಗಿದೆ, ಆ ವ್ಯವಸ್ಥೆ ಈಗಿಲ್ಲ. ಉಗ್ರರಿಗೆ ಮಣೆ ಹಾಕಿ ಅವರ ಪರ ನಿಲ್ಲುವ ರಾಜಕೀಯ ವ್ಯವಸ್ಥೆಯೂ ನಿಂತಿದೆ. ಕಾಶ್ಮೀರದಲ್ಲೇ ಉಗ್ರರ ತಲೆ-ಬಾಲ ಕತ್ತರಿಸಿದ್ದೇವೆ. ಇಲ್ಲಿ ಬಾಲ ಬಿಚ್ಚಿದ್ರೆ ಬಾಲ ಮಾತ್ರವಲ್ಲ ಉಳಿದದ್ದೂ ಕಟ್ ಆಗುವುದು ಎಂದು ಕಿಡಿಕಾರಿದ್ದಾರೆ.

ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತಾಗಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ಸಿ.ಟಿ. ರವಿ, ತಮ್ಮ ಪಕ್ಷದ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿರುವವರ ಪರ ರಕ್ಷಣೆ ಮಾತನಾಡುತ್ತೀರಾ. ಸಂತ್ರಸ್ತ ಶಾಸಕರು ದೂರು ನೀಡಿದರೂ ಏನೂ ಕ್ರಮ ಕೈಗೊಂಡಿಲ್ಲ ಏಕೆ ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಅಣ್ಣನನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಾರ್ದಿಕ್‌ ಪಾಂಡ್ಯ ಪರೋಕ್ಷ ಸಂದೇಶ

ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಅದಕ್ಕೂ ಮುಂಚೆಯೇ ಆರೋಪ ಮಾಡೋಕೆ ಸರಿಯಲ್ಲ ಎಂದರು.

Advertisement

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಸ್ವಯಂ ಪ್ರೇರಿತರಾಗಿ ರಾಜ್ಯದ ವಿದ್ಯಾಮಾನದ ಬಗ್ಗೆ ತಲೆಹಾಕಲ್ಲ. ಪಕ್ಷದ ಸೂಚನೆಯಿಲ್ಲದೆ ಯಾವುದೇ ಮಾತನಾಡುವುದಿಲ್ಲ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮರ್ಥರಿದ್ದಾರೆ. ಅವರೇ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರ ಜೊತೆ ಸಮಲೋಚನೆ ನಡೆಸುತ್ತಾರೆ. ಮಾತ್ರವಲ್ಲದೆ ಅಗತ್ಯವಿರುವ ಸಲಹೆ ಸೂಚನೆ ನೀಡ್ತಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು ಎಂದರು.

ಇದನ್ನೂ ಓದಿ:  ಅಫ್ಘಾನಿಸ್ಥಾನ ಸೇನಾ ನೆಲೆ ಗುರಿಯಾಗಿಸಿ ಕಾರ್ ಬಾಂಬ್ ಸ್ಪೋಟ; 31 ಸೈನಿಕರ ಸಾವು

Advertisement

Udayavani is now on Telegram. Click here to join our channel and stay updated with the latest news.

Next