Advertisement

ಹಕ್ಕಿ ನೀಡಿದ ಮೂರು ಉಪದೇಶಗಳು

01:30 AM Feb 05, 2021 | Team Udayavani |

ಕಥೆಯ ಮೂಲಕ ಹೇಳುವುದು ಬಹಳ ಬೇಗನೆ ಮನದಟ್ಟಾಗುತ್ತದೆ. ಇದೂ ಅಂಥ ಒಂದು ಕಥೆ.
ಒಂದೂರಿನಲ್ಲಿ ಒಬ್ಬರು ಪಂಡಿತರಿ ದ್ದರು. ಬಹಳ ಮೇಧಾವಿ. ಒಂದು ದಿನ ಎಲ್ಲೋ ಹೋಗಿದ್ದವರು ಮನೆಗೆ ಹಿಂದಿ ರುಗುತ್ತಿದ್ದಾಗ ಒಬ್ಬ ಹಕ್ಕಿ ಮಾರಾಟ ಗಾರನನ್ನು ಕಂಡರು. ಅವನಲ್ಲೊಂದು ಚೆಂದದ ಪುಟ್ಟ ಹಕ್ಕಿಯಿತ್ತು. ಪಂಡಿತರಿಗೆ ಅದನ್ನು ಕಂಡು ಬಹಳ ಖುಷಿಯಾಗಿ ಖರೀದಿಸಿದರು.

Advertisement

ಹಕ್ಕಿಯನ್ನು ಹಿಡಿದುಕೊಂಡು ಮನೆ ಯತ್ತ ಸಾಗುತ್ತಿರುವಾಗ ಈ ಹಕ್ಕಿಗೊಂದು ಸುಂದರ ಗೂಡು ಮಾಡಿಸಬೇಕು ಎಂದು ಕೊಂಡರು. ಅಷ್ಟರಲ್ಲಿ, “ಸ್ವತಂತ್ರವಾಗಿ ಹಾರಾಡು ತ್ತಿರಬೇಕಾದ ಹಕ್ಕಿಯನ್ನು ಪಂಜರದಲ್ಲಿ ಇರಿಸು ವುದು ಪಾಪವಲ್ಲವೇ’ ಎಂಬ ಮಾತು ಕೇಳಿಸಿತು.

ನಿಜ, ಮಾತಾಡಿದ್ದು ಹಕ್ಕಿಯೇ. ಪಂಡಿತರಿಗೂ ಅಚ್ಚರಿಯಾಯಿತು. ಆಗಲೇ, “ನೀವಂದುಕೊಂಡದ್ದು ಸರಿ. ನಾನು ಸಾಮಾನ್ಯ ಹಕ್ಕಿಯಲ್ಲ. ನಿಮಗೆ ಮೂರು ವಿಶೇಷ ಉಪದೇಶಗಳನ್ನು ಕೊಡಬಲ್ಲೆ. ಅದಕ್ಕೆ ಪ್ರತಿಯಾಗಿ ನೀವು ನನ್ನನ್ನು ಬಂಧಮುಕ್ತಗೊಳಿಸಬೇಕು’ ಎಂಬ ನುಡಿ ಕೇಳಿಸಿತು. ಪಂಡಿತರಿಗೆ ಖುಷಿಯಾಗಿ “ಹೇಳು’ ಎಂದರು.

ಹಕ್ಕಿ ಆರಂಭಿಸಿತು, “ಅಸಂಬದ್ಧ, ಅವಾಸ್ತವಗಳನ್ನು ಎಂದಿಗೂ ನಂಬ ಬಾರದು. ಅದನ್ನು ಎಷ್ಟೇ ದೊಡ್ಡವರು, ಮೇಧಾವಿಗಳು ಹೇಳಲಿ, ನಂಬಲೇ ಬಾರದು. ಇದು ನನ್ನ ಒಂದನೆಯ ಉಪದೇಶ. ಎರಡನೆಯದು; ಎಂಥದ್ದೇ ಸಂದರ್ಭ ಇರಲಿ, ಯಾವುದು ನಿಮ್ಮಿಂದ ಅಸಾಧ್ಯವೋ ಅದನ್ನು ಮಾಡಲು ಹೊರಡಬಾರದು. ತನ್ನ ಸಾಮರ್ಥ್ಯದ ಮಿತಿಗಳನ್ನು ಅರಿತುಕೊಂಡಾತ ಬುದ್ಧಿ ವಂತ, ತಿಳಿದುಕೊಳ್ಳದವನು ಮೂರ್ಖ. ಇನ್ನು ಮೂರನೆಯ ಉಪದೇಶ; ನೀವು ಒಳ್ಳೆಯದನ್ನು ಮಾಡಿದ್ದರೆ ಅದಕ್ಕಾಗಿ ಪಶ್ಚಾತ್ತಾಪ ಪಡಕೂಡದು. ಕೆಟ್ಟದು ಮಾಡಿದ್ದರೆ ಮಾತ್ರ ಪಶ್ಚಾತ್ತಾಪ ಪಡಿ’.

ಭಲೇ, ಎಂಥ ಒಳ್ಳೊಳ್ಳೆಯ ಉಪದೇಶ ಗಳು ಎಂದುಕೊಂಡ ಪಂಡಿತರು ಹಕ್ಕಿ ಯನ್ನು ಬಂಧಮುಕ್ತಗೊಳಿಸಿದರು. ಮುಂದಿನ ವಾರದ ಪ್ರವಚನಕ್ಕೆ ಸರಕು ಸಿಕ್ಕಿತು ಎಂದು ಲೊಚಗುಟ್ಟುತ್ತ ಮನೆಯ ಕಡೆಗೆ ಹೆಜ್ಜೆ ಹಾಕಿದರು.

Advertisement

ಅಷ್ಟರಲ್ಲಿ ಅದೇ ಹಕ್ಕಿ ಎತ್ತರದ ಮರದ ಕೊಂಬೆಯಲ್ಲಿ ಕುಳಿತು ಕೂಗಿ ಕರೆಯಿತು, “ಪಂಡಿತರೇ ನೀವು ನನ್ನ ಮಾತನ್ನು ನಂಬಿ ಬಂಧಮುಕ್ತಗೊಳಿಸಿದಿರಿ. ಆದರೆ ನಿಜಕ್ಕೂ ನಾನು ಚಿನ್ನದ ಮೊಟ್ಟೆಯಿಡುವ ಹಕ್ಕಿ. ಮನೆಗೆ ಒಯ್ದು ಪಂಜರದಲ್ಲಿ ಇರಿಸಿದ್ದರೆ ಸಿರಿವಂತರಾಗುತ್ತಿದ್ದಿರಿ’ ಎಂದು ಅಣಕಿಸಿತು.

ಈಗ ಪಂಡಿತರದು ಬೆಚ್ಚಿಬೀಳುವ ಸ್ಥಿತಿ. ಆದರೆ ಅವರು ಸುಮ್ಮನೆ ಸೋಲು ಒಪ್ಪಿಕೊಳ್ಳುವ ಆಸಾಮಿ ಅಲ್ಲ. ಹೆಗಲಲ್ಲಿದ್ದ ಜೋಳಿಗೆ ಯನ್ನು ಕೆಳಗಿಳಿಸಿ ಹಕ್ಕಿಯನ್ನು ಹಿಡಿಯು ವುದಕ್ಕಾಗಿ ಮರವನ್ನೇರಿ ದರು. ಪಾಪ, ಅವರಿಗೆ ಇದುವರೆಗೆ ಮರ ಹತ್ತಿ ಗೊತ್ತಿಲ್ಲ. ಮೈಕೈ ಪರಚಿತು. ಆದರೂ ಬಿಡಲಿಲ್ಲ. ಅವರು ಹಕ್ಕಿಯ ಹತ್ತಿರಕ್ಕೆ ಏರುತ್ತಿದ್ದಂತೆ ಅದು ಮತ್ತಷ್ಟು ಎತ್ತರದ ಟೊಂಗೆಗೆ ಹಾರಿತು. ಪಂಡಿತರು ಅಷ್ಟೆತ್ತರಕ್ಕೆ ಏರಿದಾಗ ಅದು ಇನ್ನೂ ಎತ್ತರಕ್ಕೆ… ಹೀಗೆ ಸಾಗಿ ಕೊನೆಗೆ ತುತ್ತ ತುದಿಯ ಟೊಂಗೆಯಲ್ಲಿ ಇನ್ನೇನು ಕೈಗೆ ಸಿಕ್ಕಿತು ಎನ್ನುವಷ್ಟರಲ್ಲಿ ಹಕ್ಕಿ ಹಾರಿತು, ಪಂಡಿತರು ನೆಲಕ್ಕೆ ಬಿದ್ದರು.

ಕೈಕಾಲು ಮುರಿದಿತ್ತು, ರಕ್ತ ಹರಿಯು ತ್ತಿತ್ತು. ಆಗ ಹಕ್ಕಿ ಕೆಳಗಿನ ಟೊಂಗೆಯಲ್ಲಿ ಕುಳಿತು ಉಲಿಯಿತು, “ಪಂಡಿತರೇ, ನಾನು ಉಪದೇಶಿಸಿದ್ದನ್ನು ಕೆಲವೇ ಕ್ಷಣ ಗಳಲ್ಲಿ ಮರೆತಿರಲ್ಲ. ಹಕ್ಕಿ ಚಿನ್ನದ ಮೊಟ್ಟೆ ಇರಿಸುತ್ತದೆ ಎಂಬುದು ಅಸಂಬದ್ಧ ವಲ್ಲವೆ? ಮರ ಹತ್ತುವುದು ನಿಮ್ಮ ಸಾಮರ್ಥ್ಯವನ್ನು ಮೀರಿದ್ದು ಎಂಬುದು ತಿಳಿಯಲಿಲ್ಲವೇ? ಹಕ್ಕಿಯನ್ನು ಬಿಡುಗಡೆ ಗೊಳಿಸಿದಂತಹ ಒಳ್ಳೆಯ ಕೆಲಸ ಮಾಡಿ ದ್ದಕ್ಕಾಗಿ ಪಶ್ಚಾತ್ತಾಪಪಟ್ಟಿರಾ! ಈಗ ಎದ್ದು ಮನೆಗೆ ಹೋಗಿ. ನಾನು ಹೇಳಿದ್ದನ್ನು ಮೊದಲು ನೀವು ಅನುಷ್ಠಾನ ಮಾಡಿ. ಆಮೇಲೆ ಮುಂದಿನ ವಾರದ ಪ್ರವಚನ ದಲ್ಲಿ ಉಪದೇಶಿಸುವಿರಂತೆ…’

ನಿಯಮಗಳು, ಕಾನೂನು ಕಟ್ಟಲೆ ಗಳು, ಸಂಪ್ರದಾಯಗಳು ಇರುವುದು ಅರ್ಥ ಮಾಡಿಕೊಂಡು ಅನುಸರಿಸುವು ದಕ್ಕೆ. ಸುಮ್ಮನೆ ಹೇರಿಕೊಂಡರೆ ಪ್ರಯೋ ಜನ ಇಲ್ಲ.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next