Advertisement

ಕರಾವಳಿಯಲ್ಲಿ ಮೂರನೇ ಪಕ್ಷಕ್ಕೆ ಗೆಲುವು ಕಷ್ಟ

06:45 AM Apr 10, 2018 | Team Udayavani |

1967ರಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಸಾಕಷ್ಟು ಅನುಭವ ಹೊಂದಿರುವರು ಬಲ್‌ರಾಜ್‌ ರೈ. 1994ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಜಿತರಾಗಿದ್ದರು. ಪ್ರಸ್ತುತ ಕಾಂಗ್ರೆಸ್‌ ಪಕ್ಷದ ದ.ಕ. ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ.

Advertisement

ನಿಮ್ಮ ಸೋಲಿಗೆ ಕಾರಣ?
       ಅಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಹೆಸರು ದೇಶದಲ್ಲಿ ಜೋರಾಗಿತ್ತು. ಆಗ ಕಾರ್ಕಳದಲ್ಲಿ ಎಂ. ವೀರಪ್ಪ ಮೊಲಿ ಪ್ರಭಾವವೂ ಹೆಚ್ಚಿತ್ತು. ಜತೆಗೆ ಕರಾವಳಿ ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ಮೂರನೇ ಪಕ್ಷ ಮತ ಪಡೆಯುವುದು ಕಷ್ಟ. ಕೆಲವೇ ಜನ ಮಾತ್ರ ಮೂರನೇ ಪಕ್ಷದಲ್ಲಿ ಗೆದ್ದಿದ್ದಾರೆ. ಅದೂ ಅವರ ವೈಯಕ್ತಿಕ ವರ್ಚಸ್ಸಿನಿಂದ.

ರಾಜಕೀಯ ವ್ಯವಸ್ಥೆ ಬದಲಾಗಿರುವ ಬಗ್ಗೆ?
       ಅಂದಿನ ರಾಜಕೀಯಕ್ಕೂ ಇಂದಿನ ರಾಜಕೀಯಕ್ಕೂ ಅಜಗಜಾಂತರವಿದೆ. ಅಂದು ವ್ಯಕ್ತಿಗೆ ಮೌಲ್ಯವಿತ್ತು. ಇಂದು ರಾಜಕೀಯ ಮೌಲ್ಯ ಕೂಡ ಕಡಿಮೆಯಾಗಿದೆ. ಈಗ ಏನಿದ್ದರೂ ಹಣದ ಪ್ರಭಾವ ಮತ್ತು ಪಕ್ಷದ ಆಶ್ರಯವೂ ಬೇಕು. ಪ್ರಸ್ತುತ ಒಮ್ಮೆ ರಾಜಕೀಯಕ್ಕಿಳಿದವರು ಜೀವನ ಪರ್ಯಂತ ರಾಜಕೀಯದಲ್ಲೇ ತೊಡಗಿರುತ್ತಾರೆ. ಸಂಘ – ಸಂಸ್ಥೆಗಳಿಗೆ ಹಣ ನೀಡಿ, ಬ್ಯಾನರ್‌ ಹಾಕಿಸಿಕೊಂಡು ಪ್ರಚಾರ ಗಿಟ್ಟಿಸಿಕೊಂಡರೆ ಅವರೇ ನಾಯಕರೆನಿಸಿಕೊಳ್ಳುತ್ತಾರೆ.

ಮುಂದೆ ನೀವು ಸ್ಪರ್ಧಿಸುವ ಸಾಧ್ಯತೆ?
      ಕಾರ್ಕಳದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವಂತೆ ಸ್ವತಃ ಸಿದ್ದರಾಮಯ್ಯನವರೇ ಕಳೆದ ಮೂರು ತಿಂಗಳ ಹಿಂದೆ ಹೇಳಿದ್ದರು. ಆದರೆ ಅಲ್ಲಿನ ನಾಯಕರು ಕರೆದರೆ ಮಾತ್ರ ನಾನು ಹೋಗಬಹುದು ಎಂದಿದ್ದೆ. ನಾನೇ ಹೋಗಿ ಸ್ಪರ್ಧಿಸುತ್ತೇನೆ ಎನ್ನುವುದು ಸರಿಯಾಗುವುದಿಲ್ಲ.

ಈ ಬಾರಿಯ ಚುನಾವಣೆ ಬಗ್ಗೆ ?
      ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತದಿಂದ ಗೆಲುವು ಸಾಧಿಸಲಿದೆ. ಸಿದ್ದರಾಮಯ್ಯನವರ ಆಡಳಿತ ಅವಧಿಯಲ್ಲಿ ಜನರಿಗೆ ಬೇಕಾಗುವ ಯೋಜನೆಗಳು ಜಾರಿಯಾಗಿವೆ. ಜನತೆ ಅದನ್ನು ಮೆಚ್ಚಿಕೊಂಡಿದ್ದಾರೆ. ಹಿಂದಿನಿಂದಲೂ ಜನಸಾಮಾನ್ಯರ ಬಗ್ಗೆ ಕಾಳಜಿ ಇಟ್ಟುಕೊಂಡೇ ಬೆಳೆದು ಬಂದವರು ಅವರು. ಅದೇರೀತಿಯಾ ಆಡಳಿತವನ್ನೂ ನೀಡಿದ್ದಾರೆ. ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ. ದೇವರಾಜ ಅರಸು ಅವರ ಅನಂತರ ಉತ್ತಮ ನಾಯಕತ್ವ ನೀಡಿದವರು ಸಿದ್ದರಾಮಯ್ಯ. ಹೀಗಾಗಿ ಮತ್ತೂಮ್ಮೆ ಕಾಂಗ್ರೆಸ್‌ ಬರಲಿದೆ.

Advertisement

ಕಾರ್ಕಳದಲ್ಲಿ  ಪಕ್ಷದ ಗೆಲುವಿನ ಭರವಸೆ ಇದೆಯೇ?
     ಕಾರ್ಕಳದಲ್ಲಿ ಕಾಂಗ್ರೆಸ್‌ ಒಮ್ಮತದಿಂದ ಚುನಾವಣೆ ಎದುರಿಸಿದರೆ ಗೆಲುವು ಸಾಧಿಸುವುದು ಖಚಿತ. ಆಂತರಿಕ ಗೊಂದಲಗಳು ಇದ್ದರೆ ಚುನಾವಣೆ ಎದುರಿಸುವುದು ಸುಲಭವಲ್ಲ. ಎಲ್ಲರೂ ಒಟ್ಟಾಗಿ ಕಾರ್ಯಾಚರಿಸುವ ಅನಿವಾರ್ಯತೆ ಇದೆ.

– ಜಿವೇಂದ್ರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next