Advertisement
ಪ್ರಚಾರ ಯಾವ ರೀತಿ?ಈಗಾಗಲೇ ಬೂತ್ ಸಮಿತಿ ಸಭೆಗಳು ಶೇ. 90ರಷ್ಟು ಮುಗಿದಿವೆ. ಬೂತ್ ಮಟ್ಟದಲ್ಲಿ ವಿವಿಧ ಘಟಕಗಳನ್ನು ರಚಿಸಲಾಗಿದ್ದು ಅವರೆಲ್ಲರೂ ಕೂಡ ಪಕ್ಷ ಸಂಘಟನೆ ಮತ್ತು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವಾಟ್ಸಪ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸೂಕ್ತ ರೀತಿಯ ಪ್ರಚಾರ ಮಾಡುತ್ತಿದ್ದೇವೆ.
24 ಗಂಟೆ ವಿದ್ಯುತ್ ದೊರೆಯುತ್ತಿದೆ. ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ವಾರಾಹಿಯಿಂದ ನೀರು ತರುವ ಯೋಜನೆಗೆ ಚಾಲನೆ ಸಿಕ್ಕಿದೆ. 18,000 ಕುಟುಂಬಗಳಿಗೆ ಬಿಪಿಎಲ್ ನೀಡಲಾಗಿದೆ. ಪಡುಕರೆ ಸೇತುವೆ, ಬೀಡಿನಗುಡ್ಡೆ ಬಯಲು ರಂಗಮಂಟಪ, ಕ್ರೀಡಾಂಗಣ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ಹಕ್ಕುಪತ್ರ ವಿತರಣೆ ಇತ್ಯಾದಿ ಜನಪರ ಕೆಲಸಗಳು ಆಗಿವೆ. ಬಿ.ಆರ್.ಶೆಟ್ಟಿ ಅವರೊಂದಿಗಿನ ಒಪ್ಪಂದದಿಂದಾಗಿ ಉತ್ತಮ ಆಸ್ಪತ್ರೆ ದೊರೆಯುವಂತಾಗಿದೆ. ರಾಜ್ಯ ಸರಕಾರದ ಇತರ ಯೋಜನೆಗಳು ಕೂಡ ಉಡುಪಿಯಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನವಾಗಿವೆ. ಸಚಿವರು ಉಡುಪಿಗೆ ಸೀಮಿತರಾಗಿದ್ದಾರಾ?
ಹಾಗೇನಿಲ್ಲ. ಉಡುಪಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಆದರೆ ಅಭಿವೃದ್ಧಿ ಕೆಲಸಗಳಲ್ಲಿ ಎಲ್ಲ ಕಡೆ ಗಮನ ಹರಿಸಿದ್ದಾರೆ. ಜನಬೆಂಬಲ ದೊರೆಯುತ್ತಿದೆ.ನೀವೂ ಕೂಡ ಹಿಂದೆ ಆಕಾಂಕ್ಷಿ ಎಂಬ ಮಾತುಗಳಿದ್ದವು…ನಾನಾಗಿ ಸ್ಥಾನಮಾನ, ಪಕ್ಷದ ಟಿಕೆಟ್ ಕೇಳಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನನಗೆ ಅವಕಾಶ ನೀಡಬೇಕೆಂಬ ಬೇಡಿಕೆ ನನ್ನ ಬೆಂಬಲಿಗರದ್ದು. ನನಗೆ ಇಷ್ಟರ ವರೆಗೆ ಕೇಳದೆಯೇ ದೇವರು ಕೊಡುತ್ತಾ ಬಂದಿದ್ದಾನೆ.
Related Articles
ಹೆಚ್ಚಿನ ಕೆಲಸಗಳು ಪ್ರಮೋದ್ ಅವರಿಂದ ನಡೆದಿವೆ. ಕುಡಿಯುವ ನೀರಿನ ಯೋಜನೆಯಂಥ ಕೆಲವು ಕಾಮಗಾರಿಗಳು ಆರಂಭಗೊಂಡಿವೆ ಮಾತ್ರ. ಅವು ಪೂರ್ಣಗೊಳ್ಳಬೇಕಿದೆ. ಉಳಿದಂತೆ ಸಮರ್ಪಕ ಒಳಚರಂಡಿ ಮತ್ತಿತರ ಕೆಲಸಗಳು ನಡೆಯಬೇಕಿವೆ.
Advertisement
– ಸಂತೋಷ್ ಬೊಳ್ಳೆಟ್ಟು