ಉಡುಪಿ: ಜಿಲ್ಲೆಯ ವಿವಿಧೆಡೆ ನಿರಂತರ ಅಪಘಾತವಾಗುತ್ತಿರುವ (ಬ್ಲ್ಯಾಕ್ ಸ್ಪಾಟ್) ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೆದ್ದಾರಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಈ ಹಿಂದೆ ಸುಮಾರು 30 ಬ್ಲ್ಯಾಕ್ ಸ್ಪಾಟ್ಗಳ ಸಂಖ್ಯೆ ಈಗ 20ಕ್ಕೆ ಇಳಿದಿದೆ. ನಿರಂತರ ಅಪಘಾತದ ಜತೆಗೆ ಸಣ್ಣಪುಟ್ಟ ಅಪಘಾತ ನಡೆಯುವ ಜಂಕ್ಷನ್ಗಳನ್ನೂ ಗುರುತಿಸಲಾಗಿದ್ದು, ಅಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಪ್ರಮುಖ ಅಪಘಾತ ವಲಯಗಳು
ಪಡುಬಿದ್ರಿ ಜಂಕ್ಷನ್, ಉಚ್ಚಿಲ, ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಜಂಕ್ಷನ್, ಬ್ರಹ್ಮಾವರ ಪೆಟ್ರೋಲ್ ಪಂಪ್, ಕುಮ್ರಗೋಡು ಕ್ರಾಸ್, ಕೋಟ ಜಂಕ್ಷನ್, ತೆಕ್ಕಟ್ಟೆ ಜಂಕ್ಷನ್, ಕುಂಭಾಶಿ ಸ್ವಾಗತ ಗೋಪುರ, ಮೂಳೂರು, ಕಾಪು ವಿದ್ಯಾನಿಕೇತನ ಜಂಕ್ಷನ್, ಪಾಂಗಳ, ಅಂಬಲಪಾಡಿ ಜಂಕ್ಷನ್, ನಿಟ್ಟೂರು ಜಂಕ್ಷನ್, ಅಂಬಾಗಿಲು ಜಂಕ್ಷನ್ಗಳನ್ನು ಅಪಘಾತ ವಲಯ ಎಂದು ಗುರುತಿಸಲಾಗಿದೆ. ಈ ಜಂಕ್ಷನ್ಗಳಲ್ಲಿ ಸ್ಟಡ್ಗಳ ಅಳವಡಿಕೆ, ಪಾದಚಾರಿ ಕ್ರಾಸಿಂಗ್ ಹಾಗೂ ಜೀಬ್ರಾ ಕ್ರಾಸಿಂಗ್, ಸೂಚನಾ ಫಲಕಗಳು, ಹೈ ಮಾಸ್ಟ್ ದೀಪ, ಬ್ಲಿಂಕರ್ಗಳು, ರಸ್ತೆ ಬದಿಯಲ್ಲಿ ಮೆಟಲ್ ಕ್ರ್ಯಾಶ್ ಬ್ಯಾರಿಯರ್, ಹೆದ್ದಾರಿ ಸಂಪರ್ಕಿಸುವ ರಸ್ತೆಗಳಿಗೆ ಹಂಪ್ಸ್, ಟ್ರಾಫಿಕ್ ಐಸ್ಲ್ಯಾಂಡ್, ಎಂಎಸ್ ರೈಲಿಂಗ್ ಸಹಿತ ಹಲವಾರು ಸೂಚನಾ ಫಲಕಗಳನ್ನು ಅಳವಡಿಸುವ ಅಗತ್ಯವಿದೆ.
ಅಪಘಾತ ವಲಯ ಗುರುತು ಹೇಗೆ?
ಯಾವುದೇ ಒಂದು ಸ್ಥಳದಲ್ಲಿ ಇಂತಿಷ್ಟೇ ಅಪಘಾತಗಳು ನಡೆಯಬೇಕೆಂದಿಲ್ಲ. ಆದರೆ ಪದೇ ಪದೇ ಸಣ್ಣಪುಟ್ಟ ಹಾಗೂ ಗಂಭೀರ ಅಪಘಾತಗಳು ನಡೆಯುತ್ತಿದ್ದರೆ ಪೊಲೀಸ್ ಇಲಾಖೆ, ಹೆದ್ದಾರಿ ಇಲಾಖೆ ಹಾಗೂ ಜಿಲ್ಲಾಡಳಿತದ ರಸ್ತೆ ಸುರಕ್ಷಾ ಸಮಿತಿ ಸೇರಿ ಅದನ್ನು ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸುತ್ತಾರೆ.
ಜಿಲ್ಲಾಡಳಿತದ ಸೂಚನೆಗಳು
– ಉಚ್ಚಿಲ ಮಸೀದಿಯ ಜಂಕ್ಷನ್ ತಿರುವು ಕಿರಿದಾಗಿದ್ದು, ವಿಸ್ತರಣೆ ಮಾಡಬೇಕು.
– ಪಾಂಗಾಳದಲ್ಲಿ ಮಳೆಗಾಲದಲ್ಲಿ ನೀರಿನ ಸರಾಗ ಹರಿವಿಗೆ ಒಳಚರಂಡಿ ವ್ಯವಸ್ಥೆ
– ಉಚ್ಚಿಲ ದೇವಸ್ಥಾನದ ಬಳಿ ಫುಟ್ಓವರ್ ಬ್ರಿಡ್ಜ್ ಕಲ್ಪಿಸುವುದು.
– ಬ್ರಹ್ಮಾವರದ ಪೆಟ್ರೋಲ್ ಪಂಪ್ ಬಳಿ ಇರುವ ಮಿಡಿಯನ್ ಓಪನಿಂಗ್ ಅನ್ನು ಫ್ಲೈಓವರ್ನ ಕೊನೆಗೆ ಸ್ಥಳಾಂತರ
– ಕೋಟದಲ್ಲಿ ಅಮೃತೇಶ್ವರೀ ದೇವಸ್ಥಾನದ ಕಡೆಯಿಂದ ಬರುವ ವಾಹನಗಳು 50 ಮೀ.ದೂರದಲ್ಲಿರುವ ಅಂಡರ್ ಪಾಸ್ನಲ್ಲಿ ಹೋಗಬೇಕು.
– ಅಮೃತೇಶ್ವರಿ ದೇವಸ್ಥಾನದ ತಿರುವಿನಲ್ಲಿರುವ ಓಪನಿಂಗ್ ಅನ್ನು ಮುಚ್ಚಬೇಕು.
– ಕುಂಭಾಶಿ ಸ್ವಾಗತಗೋಪುರದ ಬಳಿ ಇರುವ ಓಪನಿಂಗ್ ಅನ್ನು ಮುಚ್ಚಿ 100 ಮೀ.ಮುಂದೆ ಅಥವಾ ಹಿಂದೆ ತೆರವುಗೊಳಿಸಬೇಕು.
– ಸಂತೆಕಟ್ಟೆ, ಆಶೀರ್ವಾದ್ ಚಿತ್ರಮಂದಿರದ ಬಳಿಯ ಕಾಮಗಾರಿ ಆದಷ್ಟು ಬೇಗನೆ ಮುಗಿಸಬೇಕು.
ಮುಂಜಾಗ್ರತೆ ಕ್ರಮ
ಈಗಾಗಲೇ ರಸ್ತೆ ಸುರಕ್ಷಾ ಸಮಿತಿಯ ಸಭೆ ನಡೆಸಿ ಹೆದ್ದಾರಿ ಇಲಾಖೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಹಿಂದೆ ಇದ್ದ ಕೆಲವು ಪ್ರದೇಶಗಳಲ್ಲಿ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಅವುಗಳು ಅಪಘಾತ ಮುಕ್ತ ವಲಯಗಳಾಗಿವೆ.
-ಡಾ| ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ
ಠಾಣಾ ವ್ಯಾಪ್ತಿ | ಬ್ಲ್ಯಾಕ್ ಸ್ಪಾಟ್ |
Advertisement ಪಡುಬಿದ್ರಿ
|
|
ಕಾಪು |
Related Articles |
Advertisement ಉಡುಪಿ ಸಂಚಾರ
|
5 |
ಬ್ರಹ್ಮಾವರ | 3 |
ಕೋಟ | 2 |
ಕುಂದಾಪುರ ಸಂಚಾರ | 3 |
ಬೈಂದೂರು | 2 |