Advertisement

ಅಟ್ಟಾರಿಯಲ್ಲಿ ಅತಿ ಎತ್ತರದ ತ್ರಿವರ್ಣ ಧ್ವಜ

07:36 PM Aug 06, 2023 | Team Udayavani |

ಸ್ವಾತಂತ್ರ್ಯ ದಿನ ಸಮೀಪಿಸುತ್ತಿರುವಂತೆಯೇ ಭಾರತ-ಪಾಕ್‌ ಅಂತಾರಾಷ್ಟ್ರೀಯ ಗಡಿ ಸಮೀಪದ ಅಟ್ಟಾರಿಯಲ್ಲಿ ಬರೋಬ್ಬರಿ 418 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ರಾರಾಜಿಸಲಿದೆ. ಇದು ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜ ಎಂಬ ಹೆಗ್ಗಳಿಕೆಯನ್ನೂ ಗಳಿಸಲಿದೆ.

Advertisement

ಎಷ್ಟು ಎತ್ತರದಲ್ಲಿ ಹಾರಾಟ? – 418 ಅಡಿ

ಧ್ವಜದ ಅಳತೆ- 120*80 ಅಡಿ

ಒಟ್ಟು ವೆಚ್ಚ- 4 ಕೋಟಿ ರೂ.

ಪಾಕ್‌ನೊಂದಿಗೆ ಪೈಪೋಟಿಯೇ?

Advertisement

ಅಟ್ಟಾರಿಯಲ್ಲಿ ಹಾರಿಸಲಾಗುವ ಧ್ವಜವು ಪಾಕಿಸ್ತಾನದ ಪರ್ಚಾಮ್‌-ಎ-ಸಿತಾರಾ-ಓ-ಹಿಲಾಲ್‌(ನಕ್ಷತ್ರ ಮತ್ತು ಅರ್ಧ ಚಂದ್ರಾಕೃತಿಯ ಧ್ವಜ) ಗಿಂತಲೂ 18 ಅಡಿ ಎತ್ತರದಲ್ಲಿರಲಿದೆ. ಇದು ಪಾಕ್‌ನೊಂದಿಗೆ “ಧ್ವಜ ಸಮರ”ಕ್ಕೂ ನಾಂದಿ ಹಾಡಬಹುದು ಎಂದು ವಿಶ್ಲೇಷಿಸಲಾಗಿದೆ. ಏಕೆಂದರೆ, ಪಾಕ್‌ ಸರ್ಕಾರವು ಆ.14ರಂದು(ಪಾಕ್‌ ಸ್ವಾತಂತ್ರ್ಯ ದಿನ) ಲಾಹೋರ್‌ನಲ್ಲಿ 500 ಅಡಿ ಎತ್ತರದಲ್ಲಿ ರಾಷ್ಟ್ರ ಧ್ವಜ ಹಾರಿಸಲು ನಿರ್ಧರಿಸಿದೆ. ಇದಕ್ಕೆಂದೇ 40 ಕೋಟಿ ರೂ. ವೆಚ್ಚವನ್ನೂ ಮಾಡಲಾಗುತ್ತಿದೆ.

ಈಗಿರುವ ಗರಿಷ್ಠ ಎತ್ತರ 360 ಅಡಿ

ಪ್ರಸ್ತುತ ದೇಶದಲ್ಲಿ ಅತಿ ಎತ್ತರದ ಧ್ವಜವನ್ನು ಅಳವಡಿಸಿರುವುದು ಅಮೃತ್‌ಸರ ಇಂಪ್ರೂವ್‌ಮೆಂಟ್‌ ಟ್ರಸ್ಟ್‌. 2017ರಲ್ಲಿ 360 ಅಡಿ ಎತ್ತರದಲ್ಲಿ ಈ ಟ್ರಸ್ಟ್‌ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಅದೇ ವರ್ಷ, ಪಾಕಿಸ್ತಾನವು ತನ್ನ ದೇಶದಲ್ಲಿ 400 ಅಡಿ ಎತ್ತರದಲ್ಲಿ ಧ್ವಜ ಹಾರಿಸಿತ್ತು.

ಹಂತ ಹಂತವಾಗಿ ಜಾರಿ

ಕೋಲ್ಕತ್ತಾ ಮೂಲದ ಕಂಪನಿಗೆ ಈ ತ್ರಿವರ್ಣ ಧ್ವಜದ ಆಧಾರ ಸ್ತಂಭ ನಿರ್ಮಾಣದ ಹೊಣೆಯನ್ನು ವಹಿಸಲಾಗಿದೆ. ಈಗಾಗಲೇ ಧ್ವಜ ಸ್ತಂಭವನ್ನು ಸ್ಥಾಪಿಸಲಾಗಿದ್ದು, ಹಂತ ಹಂತವಾಗಿ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಗಾಳಿಯ ವೇಗ, ಧ್ವಜದ ಭಾರ ಸೇರಿದಂತೆ ತಾಂತ್ರಿಕ ಆಯಾಮಗಳನ್ನು ಪರೀಕ್ಷಿಸುವ ಕೆಲಸವನ್ನು  ಐಐಟಿ ಮದ್ರಾಸ್‌ ಮಾಡಿದೆ. ಆ.15ರಂದೇ ಈ ಧ್ವಜಾರೋಹಣ ನಡೆಯುವ ಸಾಧ್ಯತೆಯಿದೆ.

ಇತರ ಅತ್ಯಂತ  ಎತ್ತರದ ಧ್ವಜಸ್ತಂಭಗಳು

ಅಡಿ                              ಇರುವ ಸ್ಥಳ

361                                ಬೆಳಗಾವಿ

360                                ಅಟ್ಟಾರಿ, ಪಂಜಾಬ್‌

293                                 ರಾಂಚಿ, ಜಾರ್ಖಂಡ್‌

291                                 ಹೈದರಾಬಾದ್‌, ತೆಲಂಗಾಣ

269                                  ರಾಯು³ರ, ಛತ್ತೀಸ್‌ಗಢ

250                                  ಫ‌ರೀದಾಬಾದ್‌, ಹರ್ಯಾಣ

237                                  ಪುಣೆ, ಮಹಾರಾಷ್ಟ್ರ

170                                  ಆನಂದ ಪಾರ್ಕ್‌, ಅಮೃತಸರ

 

 

Advertisement

Udayavani is now on Telegram. Click here to join our channel and stay updated with the latest news.

Next