Advertisement

ಕಷ್ಟದ ಸವಾಲನ್ನು ಸಾಧ್ಯವಾಗಿಸುವುದೇ ಪ್ರತಿಭೆ

07:42 PM Dec 09, 2019 | Team Udayavani |

ಹುಣಸೂರು: ಕಷ್ಟ ಸಾಧ್ಯವಾದುದನ್ನು ಬಹಳ ಸುಲಭವಾಗಿ ಮಾಡುವುದೇ ಪ್ರತಿಭೆ ಎನಿಸಿದ್ದು, ಎಲ್ಲಾ ಮಕ್ಕಳಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಇದನ್ನು ಶಿಕ್ಷಕರು ಹೆಕ್ಕಿ ತೆಗೆದು ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್‌ ತಿಳಿಸಿದರು.

Advertisement

ನಗರದ ಸಂತಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ್‌ ಕುಮಾರ್‌ ಮಾತನಾಡಿ, ಮಕ್ಕಳಿಗೆ 54 ವಿವಿಧ ಸ್ಪರ್ಧೆಗಳಿದ್ದು, ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಇಲ್ಲಿ ವಿಜೇತರಾದವರು ಡಿ.15ರಂದು ಮೈಸೂರಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆಂದರು.

ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸ್ವಾಮಿ, ಉಪಾಧ್ಯಕ್ಷ ಚಿನ್ನವೀರಪ್ಪ, ಜಿಲ್ಲಾ ಉಪಾಧ್ಯಕ್ಷೆ ಮೀನಾ ಕುಮಾರಿ, ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳಾದ ಮಹದೇವಯ್ಯ, ರಾಮಕೃಷ್ಣ, ನರಸಿಂಹ, ಗಿರೀಶ್‌, ಹರೀಶ್‌, ಲೋಕೇಶ್‌,ಗೀತಾ, ಕರಿಯಪ್ಪ, ರಾಮಕೃಷ್ಣ, ಕೇಶವ್‌, ಮುಖ್ಯಶಿಕ್ಷಕಿಯರಾದ ಅನಿತಾ, ಫಿಲೋಮಿನಾನರೋನ್ಹಾ ಸೇರಿದಂತೆ ಸಿಆರ್‌ಪಿ ಹಾಗೂ ಬಿಆರ್‌ಪಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next