Advertisement
ಸದಸ್ಯರಾಗಿ ಆಯ್ಕೆಯಾದಾಗಿನಿಂದ ಏನು ಸಾಧನೆ ಮಾಡಲು ಆಗಲಿಲ್ಲ. ಉಳಿದ ಒಂದೂವರೆ ವರ್ಷದ ಅವಧಿ ಯಲ್ಲಿ ನಮ್ಮ ಗುರಿ ಸಾಧನೆಗೆ ಅವಕಾಶ ಮಾಡಿಕೊಡಬೇಕು. ಜಿಲ್ಲಾ ಪಂಚಾಯಿತಿ ಪರಿಸ್ಥಿತಿ ಇಷ್ಟು ದಿನ ಹೇಗಿತ್ತು ಎಂಬುದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಗ್ರಾಮಗಳಲ್ಲಿ ಏನೇ ಸಮಸ್ಯೆ ಎದುರಾದರೂ ಜನ ಜನಪ್ರತಿನಿ ಗಳನ್ನು ಕೇಳುತ್ತಾರೆ.
Related Articles
Advertisement
ಸಮಸ್ಯೆ ಪರಿಹಾರಕ್ಕೆ ವಿಳಂಬ ಬೇಡ: ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ತಾಲೂಕಿನ ಕೆಲ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಯುತ್ತಿರುವುದರಿಂದ ಕೊಳವೆಬಾವಿಗಳ ಅಂತರ್ಜಲಮಟ್ಟ ವೃದ್ಧಿಯಾಗಿದೆ. ಬೇರೆ ಗ್ರಾಮಗಳಲ್ಲಿ ಸಮಸ್ಯೆ ಕಾಣುತ್ತಿದ್ದು, ಅಧಿ ಕಾರಿಗಳು ವಿಳಂಬ ಮಾಡದೆ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ತಾಕೀತು ಮಾಡಿದರು.
ನರಸಾಪುರ ಪಿಡಿಒ ಮಹೇಶ್ ಕುಮಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಬತ್ತಿ ಹೋಗಿರುವ ಕೊಳವೆ ಬಾವಿಗಳಿಗೆಲ್ಲ ಬೆಸ್ಕಾಂನವರು ಬಿಲ್ ಹಾಕುತ್ತಿದ್ದಾರೆ. ಬಿಲ್ ಪಾವತಿ ಮಾಡುವುದು ಒಂದು ದಿನ ತಡವಾದರೆ ಬಡ್ಡಿ ಹಾಕುತ್ತಿದ್ದಾರೆ. ಹೀಗೆ ಮಾಡುತ್ತಿರುವುದರಿಂದ ಶೇ.50ರಷ್ಟು ಅನುದಾನ ಇವರಿಗೆ ಕಟ್ಟಲು ಸರಿ ಹೋಗುತ್ತದೆ.
ಕೂಡಲೇ ಅವರೊಂದಿಗೆ ಚರ್ಚಿಸಿ ಚಾಲ್ತಿಯಲ್ಲಿರುವ ಕೊಳವೆಬಾವಿಗಳಿಗೆ ಮಾತ್ರ ಬಿಲ್ ಹಾಕಲು ಸೂಚಿಸಬೇಕು ಎಂದು ಕೋರಿದರು. ನರಸಾಪುರ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ವಾಸವಿರುವುದರಿಂದ ತ್ಯಜ್ಯ ಉತ್ಪತ್ತಿಯಾಗುತ್ತಿದೆ. ಘನ, ದ್ರವ ತ್ಯಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಕೇಳಿದ್ದರೂ ಇದುವರೆಗೂ ಮಂಜೂರಾಗಿಲ್ಲ ಎಂದು ತಿಳಿಸಿದರು.
ಶುದ್ಧ ನೀರಿನ ಘಟಕ ದುರಸ್ತಿಗೆ ತಾಕೀತಿಗೆ ಒತ್ತಾಯ: ಬೆಳ್ಳೂರು ಪಿಡಿಒ ಸಂಪರಾಜ್ ಮಾತನಾಡಿ, ಗ್ರಾಮಗಳಲ್ಲಿ ಯಾವುದೋ ಏಜೆನ್ಸಿಯವರು ಶುದ್ಧ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದ್ದು, 3 ರಿಂದ 5 ವರ್ಷ ನಿರ್ವಹಣೆ ಜವಾಬ್ದಾರಿ ಅವರದೇ ಇರುತ್ತದೆ. ಕೆಟ್ಟು ಹೋಗಿದ್ದರೂ ಸರಿಪಡಿಸುವುದಿಲ್ಲ. ಜನ ನಮ್ಮನ್ನು ಕೇಳಿದಾಗ ಯಾರನ್ನು ಸಂಪರ್ಕಿಸಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಮಧ್ಯ ಪ್ರವೇಶ ಮಾಡಿದ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಈ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ, ಏಜೆನ್ಸಿಯವರ ಸಭೆ ಕರೆದು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಮರ್ಪಕವಾಗಿ ತೆರಿಗೆ ವಸೂಲಿ ಮಾಡಬೇಕು.
ಭಾರತ್ ಸ್ಕೌಟ್ಸ್ ಮತ್ತು ಗೆ„ಡ್ಸ್ ಸಂಸ್ಥೆಗೆ ಸ್ಥಳೀಯ ಸಂಸ್ಥೆಗಳಿಂದ ಕನಿಷ್ಠ ಅನುದಾನ ಮೀಸಲಿಡಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದರಕ್ಕೆ ಪ್ರತಿ ಪಂಚಾಯಿತಿಯಿಂದಲೂ 5 ಸಾವಿರ ಮಂಜೂರು ಮಾಡಬೇಕು ಎಂದು ಹೇಳಿದರು. ಜಿ.ಪಂ ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ರೂಪಶ್ರೀ, ಉಷಾ, ಮುನಿಲಕ್ಷ್ಮಮ್ಮ, ತಾಪಂ ಅಧ್ಯಕ್ಷ ಎಂ.ಆಂಜಿನಪ್ಪ, ಕಾರ್ಯನಿರ್ವಹಣಾಧಿ ಕಾರಿ ಬಾಬು ಹಾಜರಿದ್ದರು.