ಲಾಲ್‌ಬಾಗ್: ಮಹಾನಗರ ಪಾಲಿಕೆಯ ಮಂಗಳ ಈಜುಕೊಳ ಅಭಿ ವೃದ್ಧಿಯಾಗುತ್ತಿದೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮುಂದಿನ ತಿಂಗಳ ಮೊದಲ ವಾರದಲ್ಲಿ ಸಾರ್ವಜನಿಕ ಪ್ರವೇ ಶಕ್ಕೆ ಅನುವು ಮಾಡಿಕೊಡಲು ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. ಈಜುಕೊಳದಲ್ಲಿ ನೀರು ಸೋರಿಕೆ ತಡೆಯುವ ಕಾಮಗಾರಿ, ಈಜುಕೊಳಕ್ಕೆ ಇಂಟರ್ ಲಾಕ್ ಅಳವಡಿಸುವ ಕಾಮಗಾರಿ ಸಹಿತ ಕೆಲವೊಂದು ಅಭಿವೃದ್ಧಿ ಕೆಲಸ ತುರ್ತಾಗಿ ನಡೆಯಬೇಕಿತ್ತು. ಈ ನಿಟ್ಟಿನಲ್ಲಿ ಕೆಲವು ದಿನಗಳಿಂದ ಈಜುಕೊಳಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಸದ್ಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.
ನೀರಿನಿಂದ ಮೇಲೆ ಹತ್ತುವ ಮೆಟ್ಟಿಲು ಕೂಡ ದುರಸ್ತಿ ಕಾರ್ಯ ನಡೆದಿದೆ. ಈಜುಕೊಳದ ಮುಖ್ಯದ್ವಾರದಲ್ಲಿ ಸಿಮೆಂಟ್ ಅಳವಡಿಸುವ ಕಾಮಗಾರಿ ಕೊನೆಯ ಹಂತದಲ್ಲಿದೆ. 50 ಮೀ. ಉದ್ದ, 15 ಮೀ. ಅಗಲವಿರುವ ಲೇಡಿಹಿಲ್‌ನ ಮಂಗಳ ಈಜುಕೊಳದ ಆಳವು 4 ಅಡಿಯಿಂದ ಆರಂಭಗೊಂಡು ಕೆಳಮುಖವಾಗಿ ಸಾಗಿ 16 ಅಡಿಯಲ್ಲಿ ಕೊನೆಗೊಳ್ಳುತ್ತದೆ.
ನಾಲ್ಕು ಅಡಿಯಿಂದ ಐದೂವರೆ ಅಡಿ ತನಕ ಆಳವಿರುವ ಪ್ರದೇಶ ಮಾತ್ರ ಈಜು ಕಲಿಯಲು ಸೂಕ್ತವಾಗಿದ್ದು, ನಂತರದ ಪ್ರದೇಶ ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಈಜು ಕೊಳದ ಉದ್ದದ ಶೇ.35 ಅಥವಾ 50 ಭಾಗ ನಾಲ್ಕರಿಂದ ಐದು ಅಡಿಯಷ್ಟು ಮಾತ್ರ ಆಳ ಉಳಿಸಿಕೊಳ್ಳಬೇಕು ಎನ್ನುವ ಬೇಡಿಕೆ ಇಲ್ಲಿ ಮಕ್ಕಳಿಗೆ ಈಜು ಕಲಿಸುವ ತರಬೇತುದಾರರಿಂದ ಆರಂಭದಿಂದಲೂ ಇದೆ. ಒಟ್ಟು ಉದ್ದದ ಶೇ.50 ಭಾಗದಲ್ಲಷ್ಟೇ ಡೈವ್ (ಜಿಗಿತ) ಮಾಡಲು ಬಳಸಿಕೊಳ್ಳಬಹುದಾಗಿದೆ.
ವರ್ಷಾಂತ್ಯದೊಳಗೆ ಎಮ್ಮೆಕೆರೆ ಈಜುಕೊಳ ಉದ್ಘಾಟನೆ ಮಂಗಳೂರಿನಲ್ಲಿ ಒಲಿಂಪಿಕ್ಸ್ ದರ್ಜೆಯ ಈಜು ಕ್ರೀಡಾಕೂಟ ಆಯೋಜಿಸಲು ಅನುವುಗೊಳಿಸುವ ನಿಟ್ಟಿನಲ್ಲಿ ಎಮ್ಮೆಕೆರೆಯಲ್ಲಿ ಅತ್ಯಾಧುನಿಕ ಮಟ್ಟದ ಈಜುಕೊಳ ಸಂಕೀರ್ಣ ನಿರ್ಮಾಣವಾಗುತ್ತಿದ್ದು ಈ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿದೆ.
ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈಜುಕೊಳ ಸಂಕೀರ್ಣದಲ್ಲಿ ಒಟ್ಟು ಮೂರು ಈಜು ಕೊಳ ಇರಲಿದೆ. ಮುಖ್ಯ ಈಜುಕೊಳ 50 ಮೀ. ಉದ್ದ ಮತ್ತು 25 ಮೀ. ಅಗಲ, ಅಭ್ಯಾಸದ ದೃಷ್ಟಿಯಿಂದ ಉಪಯೋಗಿಸುವ ಈಜುಕೊಳ 25 ಮೀ. ಉದ್ದ, 10 ಮೀ. ಅಗಲ ಹೊಂದಿದೆ. ಮಕ್ಕಳ ಈಜುಕೊಳ 13.8 ಮೀ. ಉದ್ದ ಮತ್ತು 6 ಮೀ. ಅಗಲ ಹೊಂದಿರಲಿದೆ. ಈ ಈಜುಕೊಳದ ಕಾಮಗಾರಿ ಪೂರ್ಣಗೊಂಡ ಬಳಿಕ ಮಂಗಳ ಈಜುಕೊಳದ ಮುಂದುವರಿ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ.
ಈಜುಕೊಳ ಅಭಿವೃದ್ದಿ ಮಂಗಳಾ ಈಜುಕೊಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಸಾರ್ವಜನಿಕರಿಗೆ ಮುಕ್ತಗೊಳ್ಳುವ ಸಾಧ್ಯತೆ ಇದೆ. ಮತ್ತೂಂದೆಡೆ ಎಮ್ಮೆಕೆರೆಯಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಅಭಿವೃದ್ಧಿಯಾಗುತ್ತಿದೆ. ಇದಾದ ಬಳಿಕ ಮಂಗಳಾ ಈಜುಕೊಳದ ಮತ್ತೂಂದು ಹಂತದ ಅಭಿವೃದ್ಧಿ ನಡೆಸಲಾಗುತ್ತದೆ.
–ಡಿ. ವೇದವ್ಯಾಸ ಕಾಮತ್, ಶಾಸಕರು