Advertisement

ಭಾಷೆಯ ಉಳಿವು ನಮ್ಮಿಂದಲೇ: ವಂ|ಜಾರ್ಜ್‌ ಡಿ’ಸೋಜಾ

11:40 PM Feb 22, 2020 | mahesh |

ಕಾರ್ಕಳ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಎಸ್‌ವಿಟಿ ವಿದ್ಯಾಸಂಸ್ಥೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಚಾಲನೆ ನೀಡಿದರು. ಅತ್ತೂರು ಬಸಿಲಿಕಾದ ಧರ್ಮಗುರು ವಂ| ಜಾರ್ಜ್‌ ಡಿ’ಸೋಜಾ ಆಶೀರ್ವಚನ ನೀಡಿ, ಕೊಂಕಣಿ ನಮ್ಮ ಭಾಷೆ, ಕೊಂಕಣಿ ನಮ್ಮ ಸಂಸ್ಕೃತಿ. ಅದರ ಉಳಿವು ನಮ್ಮಿಂದಲೇ ಆಗಬೇಕಾಗಿದೆ. ಇಲ್ಲವಾದಲ್ಲಿ ಅದರ ಅವನತಿಗೆ ನಾವೇ ಕಾರಣರಾಗುತ್ತೇವೆ ಎಂದರು. ಭಾಷೆ ಎಂದರೆ ಜಾತಿ ಅಲ್ಲ. ಒಂದು ಸಮುದಾಯದ ಸಂಕೇತ ಸೂಚಕವಾಗಿದೆ. ನಾವು ಒಂದಾದರೆ ಮಾತ್ರ ನಮ್ಮ ಭಾಷೆ ಅಮರವಾಗಿರುವುದು ಎಂದವರು ತಿಳಿಸಿದರು.

Advertisement

ಮಾತೃ ಭಾಷೆಯಲ್ಲಿ ಭಾವನೆ
ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಾಮತ್‌ ಮಾತನಾಡಿ, ಸಂವಹನಕ್ಕೆ ಭಾಷೆ ಅಗತ್ಯ. ಭಾಷೆಯೊಂದಿಗೆ ಸಂಸ್ಕಾರದ ಅಭಿವ್ಯಕ್ತವಾಗುವುದು. ಮಾತೃ ಭಾಷೆಯಲ್ಲಿ ಸಂಸ್ಕಾರ, ಸಂಸ್ಕೃತಿಯ ಗುಣವಿದೆ. ಅದೇ ಕಾರಣದಿಂದಾಗಿ ಅಲ್ಲಿ ಭಾವನೆಗಳು ವ್ಯಕ್ತಗೊಳ್ಳುವುದು ಎಂದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ವಿ. ಸುನಿಲ್‌ ಕುಮಾರ್‌, ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷೆ ತರಂಗ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ, ಮಂಗಳೂರು ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಕುಮಾರ ಬಾಬು ಬೆಕ್ಕೇರಿ ಹಾಗೂ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಧಕರಿಗೆ ಸಮ್ಮಾನ
ವಿಜೇತಾ ಭಂಡಾರಿ ಕುಮಟಾ (ಭರತನಾಟ್ಯ), ಡಾ| ಸಂಪದಾ ಭಟ್‌ ಬೆಂಗಳೂರು (ಸಂಗೀತ), ಲಕ್ಷ್ಮಣ ಭಂಡಾರಿ ಹೊಸಂಗಡಿ (ಯಕ್ಷಗಾನ), ಸಾಲಿಗ್ರಾಮ ಗಣೇಶ್‌ ಶೆಣೈ (ಸಾಹಿತ್ಯ, ಸಮಾಜ ಸೇವೆ), ಪ್ರಶಾಂತ್‌ ಶೇಟ್‌ ಮಂಗಳೂರು (ಸಾಹಿತ್ಯ, ಸಮಾಜ ಸೇವೆ), ರಾಮದಾಸ್‌ ದತ್ತಾತ್ರೇಯ ಭಟ್‌ ಗುಲ್ವಾಡಿ ಮಂಗಳೂರು (ಸಾಹಿತ್ಯ), ಎಸ್‌. ಸಂಜೀವ ಪಾಟೀಲ್‌ ಮಣಿಪಾಲ (ಸಾಹಿತ್ಯ, ಸಮಾಜಸೇವೆ), ನಾರಾಯಣ ನಾಯಕ್‌ ಗವಳ್ಕರ್‌ ಕಾರ್ಕಳ (ಸಾಹಿತ್ಯ), ಕುಮುದಾ ಪ್ರೇಮಾನಂದ ಗಡಕರ್‌ ಕಾರವಾರ (ನಾಟಕ, ಜಾನಪದ), ನಾಗೇಶ್‌ ಅಣೆÌàಕರ್‌ ಕಾರವಾರ (ಯಕ್ಷಗಾನ), ಸಂತೋಷ್‌ ಗಜಾನನ ಮಹಾಲೆ ಧಾರವಾಡ (ರಂಗಕಲೆ), ಗೋಪಾಲಕೃಷ್ಣ ಶಾನಭಾಗ ಹುಬ್ಬಳ್ಳಿ (ಕಥೆ ರಚನೆ), ಸುರೇಶ್‌ ಎನ್‌. ಕಿಣಿ ಹುಬ್ಬಳ್ಳಿ (ಸಮಾಜಸೇವೆ, ಕಲೆ), ಸುರೇಶ್‌ ಗೋವಿಂದ ಪಾವುಸ್ಕರ ಬೆಳಗವಿ (ಸಮಾಜಸೇವೆ), ಮಾಲತಿ ಕಾಮತ್‌ ಮಂಗಳೂರು (ಸಂಸ್ಕೃತಿ), ಸುಧಾಕರ ಭಟ್‌ ಮಂಗಳೂರು (ಸಾಹಿತ್ಯ), ಬಿ. ಮಾಧವ ಖಾರ್ವಿ ಬ್ರಹ್ಮಾವರ (ಸಮಾಜಸೇವೆ), ಚಂದ್ರನಾಯ್ಕ ಮಂದರ್ತಿ (ಜಾನಪದ), ಪ್ರಕಾಶ್‌ ಶೆಣೈ ಮಂಗಳೂರು (ನಾಟಕ), ಹನುಮಂತ ಕಾಮತ್‌ ಮಂಗಳೂರು (ಸಮಾಜಸೇವೆ), ಪ್ರಮೋದ್‌ ಆರ್‌. ಕಾಮತ್‌ ಬೆಂಗಳೂರು (ಸಮಾಜಸೇವೆ), ಮೇಧಾ ಕಾಮತ್‌ ಮಂಗಳೂರು (ಸಂಶೋಧನೆ), ರಾಬರ್ಟ್‌ ಮಿನೇಜಸ್‌ ಮಿಂಜೂರು ಕಾರ್ಕಳ (ಶಿಕ್ಷಣ), ರಘುವೀರ್‌ ಶೆಣೈ ಮೂಡುಬಿದಿರೆ (ಸಮಾಜ ಸೇವೆ), ಪಾವ್‌É ಮೊರಾಸ್‌ ಮಂಗಳೂರು (ಸಾಹಿತ್ಯ) ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಯೋಗೀಶ್‌ ಕಿಣಿ ನಾಡಗೀತೆ ಹಾಡಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಕೆ. ಜಗದೀಶ್‌ ಪೈ ಸ್ವಾಗತಿಸಿದರು. ಶಿಕ್ಷಕ ಕೆ. ರಾಜೇಂದ್ರ ಭಟ್‌ ನಿರೂಪಿಸಿ, ಬೆಳ್ಳಿಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಶೆಣೈ ವಂದಿಸಿದರು.

ನಶಿಸುವ ಭಾಷೆಯಲ್ಲ
ಸಮ್ಮೇಳನಾಧ್ಯಕ್ಷ, ಕೊಂಕಣಿ ಸಾಹಿತಿ ಗೋಕುಲದಾಸ ಪ್ರಭು ಮಾತನಾಡಿ, ಕೊಂಕಣಿ ಭಾಷೆ ನಶಿಸುವ ಭಾಷೆ ಅಲ್ಲ. ಕೊಂಕಣಿ ಭಾಷೆ ಇರುವಲ್ಲಿ ದೃಷ್ಟಿ ಹಾಯಿಸುವ ಕಾರ್ಯವಾಗಬೇಕು. ಪ್ರದೇಶಕ್ಕೆ ಅನುಗುಣವಾಗಿ ಭಾಷೆಯ ಭಿನ್ನತೆ ಕಂಡುಬಂದರೂ, ಕೊಂಕಣಿ ಭಾಷೆಕರೆಲ್ಲರೂ ಒಂದೇ ಆಗಿದ್ದಾರೆ ಎಂದರು.

Advertisement

ವೈಭವದ ಮೆರವಣಿಗೆ
ಸಭಾಕಾರ್ಯಕ್ರಮ ಮುನ್ನ ಸಮ್ಮೇಳನಾಧ್ಯಕ್ಷ ಸಾಹಿತಿ ಗೋಕುಲದಾಸ್‌ಪ್ರಭು ಅವರನ್ನು ನಗರದ ಗಾಂಧಿಮೈದಾನದಿಂದ ವೈಭವದ ಮೆರವಣಿಗೆಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ತರಲಾಯಿತು. ಚೆಂಡೆ ನಾದನ, ಡೊಳ್ಳು ಕುಣಿತ, ಕೋಲಾಟ, ನಾಸಿಕ್‌ ಬ್ಯಾಂಡ್‌, ಯಕ್ಷಗಾನ ವೇಷಧಾರಿಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು.

ಊಟೋಪಚಾರ
ಬೆಳಗ್ಗೆ ಉಪಾಹಾರಕ್ಕೆ ಬಟಾಟೆ ಅಂಬಡೆ, ಉಪ್ಪಿಟ್ಟು, ಶಿರಾ, ಮಧ್ಯಾಹ್ನದ ಊಟಕ್ಕೆ ಬಟಾಟೆ ವಾಗು, ಕಡ್ಲೆ-ಗುಜ್ಜೆ ಗಸಿ, ಅಲಸಂಡೆ-ಕಡ್ಲೆ ಪಲ್ಯ, ಅನ್ನ ಸಾರು, ದಾಲಿತೋವೆ, ಪಾಯಸವಿತ್ತು. ಸಂಜೆ ಬನ್ಸ್‌, ಕಾರ್ಕಳ ಕೇಕ್‌, ಉಪಾ¾ ಸವಿಯಿತ್ತು.

Advertisement

Udayavani is now on Telegram. Click here to join our channel and stay updated with the latest news.

Next