Advertisement

ಶಾಸನಗಳ ಅಧ್ಯಯನಕ್ಕಿಂತ ಮೊದಲು ನಡೆಯಲಿ ಸಮೀಕ್ಷೆ

04:42 PM Jul 13, 2018 | Team Udayavani |

ಧಾರವಾಡ: ರಾಜ್ಯದಲ್ಲಿ ಶಾಸನಗಳ ಕಾರ್ಯಕರ್ತರನ್ನು ಸಮಾಧಾನಪಡಿಸಿ ಸಭೆ ಮುಕ್ತಾಯಗೊಳಿಸಿದರು. ಅಧ್ಯಯನಕ್ಕಿಂತಲೂ ಮೊದಲು ಎಲ್ಲ ಭಾಗಗಳ ಶಾಸನಗಳನ್ನು ಸಮೀಕ್ಷೆ ಮಾಡಬೇಕು. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ದೊರೆತ ಶಾಸನಗಳನ್ನು ರಕ್ಷಣೆ ಮಾಡುವ ಕಾರ್ಯವೂ ಆಗಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಿ.ವಿ. ಶಿರೂರ ಹೇಳಿದರು. ನಗರದ ಕವಿಸಂನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್‌ ಉದ್ಘಾಟನೆ ಹಾಗೂ ಶಾಸನ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮೊದಲು ಶಾಸನಗಳ ಅಧ್ಯಯನ ಎಂದರೆ ಅರಸರ ಹಾಗೂ ಅವರ ಮನೆತನಗಳ ಬಗೆಗಿನ ಅಧ್ಯಯನ ಎಂದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಭಾವನೆ ಇತಿಹಾಸ ತಜ್ಞರಿಂದ ದೂರವಾಗಿದೆ. ಶಾಸನಗಳಲ್ಲಿ ಋಷಿ-ಮುನಿಗಳು ಹಲವು ಕಾರ್ಯಗಳನ್ನು ಮಾಡಿದ್ದಾರೆ. ಅವುಗಳ ಅಧ್ಯಯನದಲ್ಲಿ ತಜ್ಞರು ತೊಡಗಬೇಕು. ದೇವಾಲಯ, ಶಿಲ್ಪಗಳ ಬಗ್ಗೆ ಹೆಚ್ಚಾಗಿ ಅಧ್ಯಯನ ನಡೆಯಬೇಕು. ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗಗಳಲ್ಲಿ ದೊರೆತ ಶಾಸನಗಳ ಬಗ್ಗೆ ಹಂಪಿ ವಿಶ್ವವಿದ್ಯಾಲಯವು ಪ್ರಕಟಣೆಗೆ ಮುಂದಾಗಬೇಕು ಎಂದರು.

ಸಾಹಿತ್ಯಾಸಕ್ತರು ಹಾಗೂ ಇತಿಹಾಸ ತಜ್ಞರು ಜೊತೆ ಸೇರಿ ಅಧ್ಯಯನ ಮಾಡಿದಾಗ ಶಾಸನ ಕ್ಷೇತ್ರದ ಮಹತ್ವ ಹೆಚ್ಚುತ್ತದೆ. ಶಾಸನಗಳ ಸಂಪತ್ತು ಇರುವ ಪ್ರದೇಶಗಳಲ್ಲಿ ಶಾಸನ ಸಾಹಿತ್ಯ ಪರಿಷತ್‌ ದತ್ತಿ ಉಪನ್ಯಾಸ ಹಾಗೂ ಉಪನ್ಯಾಸಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಶಾಸನ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ| ಲಕ್ಷ್ಮಣ ತೆಲಗಾವಿ ಅಧ್ಯಕ್ಷತೆ ವಹಿಸಿದ್ದರು.ಪರಿಷತ್‌ ಅಧ್ಯಕ್ಷೆ ಹನುಮಾಕ್ಷಿ ಗೋಗಿ, ಕಾರ್ಯದರ್ಶಿ ಡಾ| ಎಸ್‌.ಕೆ. ಮೇಲಕಾರ, ಕೋಶಾಧ್ಯಕ್ಷೆ ಡಾ| ಮಹಾದೇವಿ ಹಿರೇಮಠ, ಬೆಳಗಾವಿ ರಾಣಿ ಚನ್ನಮ್ಮ ವಿವಿ ಮೌಲ್ಯಮಾಪನ ಕುಲಸಚಿವ ಡಾ| ರಂಗರಾಜ ವನದುರ್ಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next