Advertisement

ಅಕ್ರಮ- ಸಕ್ರಮ ಇಂದು ಸುಪ್ರೀಂ ತೀರ್ಪು ಸಾಧ್ಯತೆ

12:38 PM Mar 21, 2018 | Team Udayavani |

ಬೆಂಗಳೂರು: ನಗರದ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನಿಯಮ ಉಲ್ಲಂ ಸಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸುವ ರಾಜ್ಯ ಸರ್ಕಾರದ ಯೋಜನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ನಡೆಯಲಿದ್ದು, ಅಂತಿಮ ಆದೇಶ ಹೊರಬೀಳುವ ಸಾಧ್ಯತೆಯಿದೆ. ಬಿಬಿಎಂಪಿ ಸೇರಿದಂತೆ ರಾಜ್ಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನಿಯಮ ಉಲ್ಲಂ ಸಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸುವ ಯೋಜನೆ ಘೋಷಿಸಿ 2014ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

Advertisement

ಇಂದು ಅಂತಿಮ ಆದೇಶ: ನಮ್ಮ ಬೆಂಗಳೂರು ಫೌಂಡೇಷನ್‌ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಸರ್ಕಾರ ಆದೇಶವನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್‌ ತೀರ್ಪು ಸರ್ಕಾರದ ಪರವಾಗಿ ಬಂದ ಹಿನ್ನೆಲೆಯಲ್ಲಿ ಸಂಸ್ಥೆಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ಬುಧವಾರ ಅಂತಿಮ ಆದೇಶ ಬರುವ ನಿರೀಕ್ಷೆಯಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ಸುಮಾರು 2 ಲಕ್ಷಕ್ಕೂ ಹೆಚ್ಚು ಕಟ್ಟಡಗಳು ಬೈಲಾ ಉಲ್ಲಂ ಸಿ ನಿರ್ಮಾಣವಾಗಿವೆ. ಅಷ್ಟು ದೊಡ್ಡ ಪ್ರಮಾಣದ ಕಟ್ಟಡಗಳನ್ನು ತೆರವುಗೊಳಿಸುವುದರಿಂದ ಹೆಚ್ಚಿನ ಜನರಿಗೆ ತೊಂದರೆಯಾಗಲಿದೆ. ಹೀಗಾಗಿ, ಒಂದು ಬಾರಿಗೆ ಸಕ್ರಮಗೊಳಿಸುವುದರಿಂದ ಅವರಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ವಾದ ಮಂಡಿಸಿದೆ.

ಅಕ್ರಮ ಕಟ್ಟಡಗಳಿಗೆ ಶೀಘ್ರ ಕಡಿವಾಣ ಹಾಕದಿದ್ದರೆ ಅಕ್ರಮ ಕಟ್ಟಡಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂಬ ಅಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. 

600 ಕೋಟಿ ರೂ. ಆದಾಯ ನಿರೀಕ್ಷೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಮ ಉಲ್ಲಂ ಸಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ಸಕ್ರಮ ಮಾಡುವುದರಿಂದ ಪಾಲಿಕೆಗೆ ನೂರಾರು ಕೋಟಿ ರೂ. ಆದಾಯ ಬರಲಿದೆ ಎಂದು ಪಾಲಿಕೆಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಕಟ್ಟಡಗಳು ನಿಯಮ ಬಾಹಿರವಾಗಿ ನಿರ್ಮಾಣವಾಗಿದ್ದು, ಅವುಗಳನ್ನು ಸಕ್ರಮದ ವ್ಯಾಪ್ತಿಗೆ ತರುವುದರಿಂದ ಪಾಲಿಕೆಗೆ 500-600 ಕೋಟಿ ರೂ. ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ. 

Advertisement

ಅಕ್ರಮ ಪ್ರಮಾಣ ಎಷ್ಟು?: ಸರ್ಕಾರ ಅಧಿಸೂಚನೆಯಂತೆ ವಸತಿ ಕಟ್ಟಡಗಳ ಶೇ.50 ರಷ್ಟು ಹಾಗೂವಾಣಿಜ್ಯ ಕಟ್ಟಡಗಳ ಶೇ.25ರಷ್ಟ ಹೆಚ್ಚುವರಿ ನಿರ್ಮಾಣ ಸಕ್ರಮಗೊಳಿಸಲು ಸಾಧ್ಯವಿದೆ. ಅದಕ್ಕೂ ಮೀರಿ ನಿರ್ಮಿಸಿದ್ದರೆ ಅಂತಹ ಪ್ರಕರಣಗಳಲ್ಲಿ ಮಾಲೀಕರು ತಮ್ಮ ಕಟ್ಟಡ ಸ್ವಯಂ ತೆರೆವುಗೊಳಿಸಿ ಶೇ.50 ಹಾಗೂ ಶೇ.25 ರಷ್ಟು ವ್ಯಾಪ್ತಿಗೆ ತಂದು ಸಕ್ರಮ ಮಾಡಿಕೊಳ್ಳಲು ಅವಕಾಶವಿದೆ. 

ಎರಡು ರೀತಿಯ ನಿಯಮ ಉಲ್ಲಂಘನೆ: ವಸತಿ ಮತ್ತು ವಸತಿಯೇತರ ಕಟ್ಟಡಗಳಲ್ಲಿ ಸೆಟ್‌ಬ್ಯಾಕ್‌ ಮತ್ತು ಅಂತಸ್ತು ವಿಸ್ತೀರ್ಣ ಅನುಪಾತ (ಎಫ್ಎಆರ್‌) ಎಂಬ 2 ಪ್ರಕಾರದ ನಿಯಮ ಉಲ್ಲಂಘನೆ ಗುರುತಿಸಲಾಗಿದೆ. ಪ್ರತಿ ನಿವೇಶನದ ಸುತ್ತ ಇಂತಿಷ್ಟು ಅಳತೆಯ ಜಾಗ (ಸೆಟ್‌ಬ್ಯಾಕ್‌) ಬಿಡಬೇಕೆಂಬ ನಿಯಮವಿದೆ. ಜಾಗ ಬಿಡದಿದ್ದಾಗ ಅದು ಸೆಟ್‌ಬ್ಯಾಕ್‌ ನಿಯಮ ಉಲ್ಲಂಘನೆಯಾಗುತ್ತದೆ. ಕಟ್ಟಡಗಳ ಅಂತಸ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿಗಿಂತಲೂ ಹೆಚ್ಚು ಮಹಡಿ ನಿರ್ಮಿಸುವುದು ಎಫ್ಎಆರ್‌ ಉಲ್ಲಂಘನೆಯಾಗುತ್ತದೆ. 

ಅಕ್ರಮ-ಸಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾದ ವಾದವನ್ನು ಸಮರ್ಥವಾಗಿ ಮಂಡಿಸಲಾಗಿದೆ. ಬುಧವಾರ ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆಯಿದ್ದು, ಸುಪ್ರೀಂ ಕೋರ್ಟ್‌ ತೀರ್ಪು ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಕಟ್ಟಡ ವಿಧಾನ – ವಸತಿ
ಸೆಟ್‌ಬ್ಯಾಕ್‌

– ಶೇ.25ರವರೆಗಿನ ಉಲ್ಲಂಘನೆಗೆ ಮಾರ್ಗಸೂಚಿ ದರದ ಶೇ.6ರಷ್ಟು ದಂಡ
– ಶೇ.25 ರಿಂದ ಶೇ.50ರವರೆಗೆ ಶೇ.50ವರೆಗೆ ಶೇ.8ರಷ್ಟು

ಎಫ್ಎಆರ್‌
– ಶೇ.25ರವರೆಗಿನ ಉಲ್ಲಂಘನೆ ಶೇ.6ರಷ್ಟು
– ಶೇ.25 ರಿಂದ 50ರವರೆಗಿನ ಉಲ್ಲಂಘನೆಗೆ ಶೇ.8ರಷ್ಟು

ಕಟ್ಟಡ ವಿಧಾನ – ವಾಣಿಜ್ಯ
ಸೆಟ್‌ಬ್ಯಾಕ್‌

– ಶೇ.12.5ರಷ್ಟು ಉಲ್ಲಂಘನೆಗೆ ಶೇ.20ರಷ್ಟು ದಂಡ
– ಶೇ.12.5 ರಿಂದ ಶೇ.25ರವರೆಗೆ ಶೇ.35ರಷ್ಟು ದಂಡ

ಎಫ್ಎಆರ್‌
– ಶೇ.12.5ರವರೆಗೆ ಶೇ.20ರಷ್ಟು ದಂಡ
– ಶೇ.12.5 ರಿಂದ ಶೇ.25ರವರೆಗೆ ಶೇ.35ರಷ್ಟು ದಂಡ

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next