Advertisement

ಕಾಯ್ದೆ ತಿರಸ್ಕರಿಸುವ ಅಧಿಕಾರ ಸುಪ್ರೀಂಗೆ ಇಲ್ಲ

04:07 PM Jan 14, 2021 | Adarsha |

ಶಿವಮೊಗ್ಗ: ಕೃಷಿ ತಿದ್ದುಪಡಿ ಕಾಯ್ದೆ ಕುರಿತಾಗಿ ಸುಪ್ರಿಂ ಕೋರ್ಟ್‌ ತೀರ್ಪನ್ನು ಗೌರವಿಸುತ್ತೇವೆ. ಎಲ್ಲರಿಗೂ ಸಂವಿಧಾನವೇ ಸುಪ್ರೀಂ. ಕಾಯ್ದೆ ಜಾರಿ ಮಾಡುವ ಅಧಿಕಾರವನ್ನು ಸಂವಿಧಾನವೇ ಕೊಟ್ಟಿದೆ. ಸುಧಾರಣೆ ಪರವಾಗಿರುವ ಕಾಯ್ದೆ ತಿರಸ್ಕರಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಹಾಗೂ ಕೃಷಿ ಕ್ಷೇತ್ರದ ಸಮಸ್ಯೆ ಬಗೆಹರಿಸಲು ತಜ್ಞರ ಜತೆ ಚರ್ಚಿಸಿಯೇ ಜಾರಿಗೊಳಿಸಿತ್ತು. ಆದರೆ ಕೆಲವರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಸ್ವಾಮಿನಾಥನ್‌ ವರದಿಯಂತೆ ಹೆಚ್ಚಿನ ಬೆಲೆ ದೊರಕಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾಯ್ದೆಗಳನ್ನು ಜಾರಿಗೊಳಿಸಿದೆ. ಪ್ರಧಾನಿ ಮೋದಿ ರೈತ ವಿರೋಧಿ  ಎಂದು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಗೆ ತಂದಿದ್ದು ಯಾರು? ಬೇವು ಲೇಪಿತ ರಸಗೊಬ್ಬರ ವಿತರಣೆ ಹಾಗೂ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು ಯಾರು? ಇವೆಲ್ಲಾ ಯೋಜನೆ ಜಾರಿಗೊಳಿಸಿದ ಮೋದಿ ಹೇಗೆ ರೈತ ವಿರೋಧಿಯಾಗ್ತಾರೆ ಎಂದು ಪ್ರಶ್ನಿಸಿದರು.

ಪೂರ್ವಾಗ್ರಹದಿಂದ ರೈತರ ಸುಧಾರಣಾ ಕಾಯ್ದೆ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲರಿಗೂ ಸಂವಿಧಾನವೇ ಸುಪ್ರೀಂ. ಕಾಯ್ದೆ ತರುವ ಅಧಿಕಾರವನ್ನು ಸಂವಿಧಾನವೇ ಕೊಟ್ಟಿದೆ. ಸುಧಾರಣಾ ಪರವಾಗಿರುವ ಕಾಯ್ದೆ ತಿರಸ್ಕರಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ. ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ಪರಮಾಧಿಕಾರ. ಬಹಳ ಜನ ಅನುಭವಿಗಳು, ಯೋಗ್ಯತೆ ಇರುವವರು, ಹಿರಿಯರು, ಉತ್ಸಾಹಿಗಳು ಸಚಿವರಾಗುವವರು ಇದ್ದಾರೆ. ಈಗ ಯೋಗ ಇರುವವರಿಗೆ ಸಚಿವ ಸ್ಥಾನ ಸಿಗುತ್ತಿದೆ. ಯೋಗ್ಯತೆ ಇರುವವರು ಕೂಡ ಹಲವರಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next