Advertisement

LMV ಲೈಸನ್ಸ್‌ ಇದ್ದರೆ ಸರಕು ವಾಹನ ಚಲಾಯಿಸಿ… 7.5 ಟನ್‌ವರೆಗಿನ ವಾಹನ ಓಡಿಸಲು ಅನುಮತಿ

08:49 AM Nov 07, 2024 | Team Udayavani |

ಹೊಸದಿಲ್ಲಿ: ಲಘು ಮೋಟಾರು ವಾಹ ನದ ಚಾಲನಾ ಪರವಾನಿಗೆ (ಎಲ್‌ಎಂವಿ) ಹೊಂದಿರುವವರು 7.5 ಟನ್‌ಗಿಂತ ಕಡಿಮೆ ತೂಕ ಹೊಂದಿರುವ ಸಾರಿಗೆ ವಾಹನಗಳನ್ನು ಓಡಿಸಬಹುದು ಎಂದು ಸುಪ್ರೀಂಕೋರ್ಟ್‌ ಬುಧವಾರ ಹೇಳಿದೆ. ಈ ತೀರ್ಪಿನಿಂದಾಗಿ ವಿಮೆಗೆ ಸಂಬಂಧಿಸಿದಂತೆ ತೊಂದರೆ ಅನು ಭವಿಸುತ್ತಿದ್ದ ಬಹುತೇಕ ಚಾಲಕರು ನಿರಾಳವಾದಂತಾಗಿದೆ.

Advertisement

ಸಿಜೆಐ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಪಂಚ ಸದಸ್ಯ ಪೀಠ ಈ ತೀರ್ಪು ನೀಡಿದೆ. ಇದರಿಂ ದಾಗಿ ನಿರ್ದಿಷ್ಟ ತೂಕದ ಸಾರಿಗೆ ವಾಹ ನಗಳು ಅಪಘಾತಗಳು ಸಂಭವಿಸಿದಲ್ಲಿ ಮತ್ತು ಕಾನೂನು ಷರತ್ತುಗಳ ಪ್ರಕಾರ ಅವುಗಳನ್ನು ಓಡಿಸಲು ಚಾಲಕರಿಗೆ ಅನುಮತಿ ಇಲ್ಲದಿದ್ದರೆ ಕ್ಲೇಮುಗಳನ್ನು ತಿರಸ್ಕರಿಸುತ್ತಿದ್ದ ವಿಮಾ ಕಂಪೆನಿಗಳಿಗೆ ಇದರಿಂದ ಆಘಾತವಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಕೇಂದ್ರ ಸರಕಾರ ಕಾನೂನು ರಚನೆ ಮಾಡುವ ಸಾಧ್ಯತೆ ಇದೆ.

ಚಾಲಕರಿಗೆ ಭಾರೀ ಅನುಕೂಲ:ಎಲ್‌ಎಂವಿ ಪರವಾನಿಗೆ ಹೊಂದಿರುವ ಚಾಲಕರು 7.5 ಟನ್‌ ತೂಕ ಮೀರದ ಹಳದಿ ಬಣ್ಣದ ಬೋರ್ಡ್‌ ಹೊಂದಿ ರುವ ವಾಹನಗಳನ್ನು ಓಡಿಸಲು ಇನ್ನು ಮುಂದೆ ಅವಕಾಶ ಸಿಗುತ್ತದೆ.

ಇದನ್ನೂ ಓದಿ: Jammu and Kashmir Assembly: ಕಾಶ್ಮೀರ ವಿಶೇಷ ಸ್ಥಾನಮಾನ ಕೋರಿ ಅಸೆಂಬ್ಲಿಯಲ್ಲಿ ಗಲಾಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next