Advertisement
ಮೂಲತಃ ವಿಜಯಪುರದ, ಕಳೆದ ಮೂರು ವರ್ಷಗಳಿಂದ ಮಹಿಳಾ ನಿಲಯದಲ್ಲಿರುವ ಕವಿತಾಬಾಯಿ ಮತ್ತು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಾರ್ಸಿಯ ರಾಮಕೃಷ್ಣ ಹೆಗಡೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ಷಣಕ್ಕೆ ಗಣ್ಯರು ಸಾಕ್ಷಿಯಾದರು.
ಅದರಂತೆ ಮದುವೆ ಆಗಿರುವುದು ಖುಷಿ ಆಗಿದೆ. ಕವಿತಾಬಾಯಿ ಈವರೆಗೆ ಸಾಕಷ್ಟು ಕಷ್ಟ- ಸಮಸ್ಯೆ ಅನುಭವಿಸಿದ್ದಾರೆ. ಚೆನ್ನಾಗಿ ನೋಡಿಕೊಳ್ಳುವ ಮೂಲಕ ಕಷ್ಟ-ಸಮಸ್ಯೆ ಪರಿಹರಿಸುತ್ತೇನೆ ಎಂದರು.
Related Articles
ಅನುಭವಿಸಿದ್ದೇನೆ. ಇನ್ನು ಮುಂದೆ ಆ ಎಲ್ಲ ಕಷ್ಟ ಮರೆತು, ಚೆನ್ನಾಗಿ ಹೊಸ ಜೀವನ ನಡೆಸುತ್ತೇನೆ ಎನ್ನುತ್ತಲೇ ಗದ್ಗದಿತರಾದರು.
Advertisement
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ತಮಗೆ ತಂದೆ-ತಾಯಿ ಯಾರೂ ಇಲ್ಲ. ನಾವು ಅನಾಥರು ಅಂದುಕೊಂಡವರಿಗೆ ಹೊಸ ಬಾಳನ್ನು ಕೊಡುವುದು ಬಹಳ ಸಂತೋಷದ ವಿಚಾರ. ಮಹಿಳಾ ನಿಲಯದಲ್ಲಿ ಈವರೆಗೆ ಇದೇ ರೀತಿ 30 ಮದುವೆಗಳು ನಡೆದಿವೆ. ಅವರೆಲ್ಲರೂ ಚೆನ್ನಾಗಿ ಇದ್ದಾರೆ. ಇನ್ನೂ ನಾಲ್ವರ ಮದುವೆ ನಡೆಯಲಿದೆ ಎಂದು ತಿಳಿಸಿದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್, ಅಶ್ವತಿ, ಮಹಿಳಾ ನಿಲಯದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವ ಮುನ್ನ ವರನ ಬಗ್ಗೆ ಕೂಲಂಕುಷವಾಗಿ ತಿಳಿದು, ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದ ನಂತರವೇಮದುವೆ ಮಾಡಿಕೊಡಲಾಗುವುದು. ಈವರೆಗೆ ಮದುವೆಯಾದ ಎಲ್ಲರೂ ಚೆನ್ನಾಗಿರುವುದು ಸಂತೋಷದ ವಿಚಾರ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್. ಜಯಶೀಲ, ಉಪಾಧ್ಯಕ್ಷೆ ಟಿ. ರಶ್ಮಿ ರಾಜಪ್ಪ, ಸದಸ್ಯ ಡಿ. ಸಿದ್ದಪ್ಪ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ, ಮುಖ್ಯ ಯೋಜನಾಧಿಕಾರಿ ಪಿ. ಬಸವನಗೌಡ, ಸಹಾಯಕ ಯೋಜನಾಧಿಕಾರಿ ಶಶಿಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯ್ ಕುಮಾರ್, ಮಹಿಳಾ ನಿಲಯದ ಅಧೀಕ್ಷಕಿ ಪ್ರಪುಲ್ಲಾ ಡಿ. ರಾವ್, ಶ್ರುತಿ ಇತರರು ಈ ಆದರ್ಶ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ನವ ವಧುವಿಗೆ ಉತ್ತರ ಕನ್ನಡದಲ್ಲಿ ಆಗುವ ಮಳೆಯ ಪರಿಚಯ ಮಾಡಿಕೊಡುವಂತೆ ಏನೋ ಮದುವೆ, ಆರತಕ್ಷತೆ ಮುಗಿಯುವ ವೇಳೆಗೆ ಧಾರಾಕಾರ ಮಳೆ ಸುರಿಯಿತು. ಉತ್ತರ ಕನ್ನಡದವರು ಕಾಲಿಟ್ಟ ಪ್ರಭಾವ… ಎಂಬ ಹಾಸ್ಯದ ಮಾತು ಕೇಳಿ ಬಂದವು.