Advertisement

ಸಕ್ಕರೆ ಗೊಂಬೆ 150 ರೂ. ವರೆಗೆ ಮಾರಾಟ

11:17 AM Nov 19, 2021 | Team Udayavani |

ಮಾನ್ವಿ: ಪ್ರತಿ ವರ್ಷ ಗೌರಿ ಹುಣ್ಣಿಮೆಯಲ್ಲಿ ಸಕ್ಕರೆ ಗೊಂಬೆಗಳ ತಯಾರಿ ಮತ್ತು ಮಾರಾಟ ಜೋರಾಗಿರುತ್ತೆ. ಅದೇ ರೀತಿ ಪಟ್ಟಣದ 1ನೇ ವಾರ್ಡ್‌ನ ಶಿವಪ್ಪ ಜಾಕ ಕುಟುಂಬದವರು ಕಳೆದ 20 ವರ್ಷಗಳಿಂದ ಸಕ್ಕರೆ ಗೊಂಬೆಗಳ ತಯಾರಿಯಲ್ಲಿ ತೊಡಗಿದ್ದಾರೆ. ಸಕ್ಕರೆಯನ್ನು ಕಾಯಿಸಿ ಪಾಕವನ್ನು ಸಿದ್ದ ಮಾಡಿ ವಿವಿಧ ಬಣ್ಣಗಳ ವಿಭಿನ್ನ ಆಕೃತಿ, ಗಾತ್ರಗಳ ಅಚ್ಚುಗಳಿಗೆ ಹಾಕಿ ಸಕ್ಕರೆ ಗೊಂಬೆ ತಯಾರಿಸುತ್ತಾರೆ.

Advertisement

ನಂದಿ, ಗೋಪುರ, ಆರತಿ ತಟ್ಟೆ, ಶಿವಲಿಂಗ, ನವಿಲು, ಆನೆಯ ರೂಪದಲ್ಲಿ ಗೊಂಬೆ ತಯಾರಿಸುತ್ತಾರೆ. ನಂತರ ಮಾರುಕಟ್ಟೆಯಲ್ಲಿ ತಳ್ಳುಗಾಡಿಗಳಲ್ಲಿ ಮಾರಾಟ ಮಾಡುತ್ತಾರೆ. ಇತರೆ ವ್ಯಾಪಾರಸ್ಥರು ಹಾಗೂ ಗ್ರಾಮೀಣ ಭಾಗದ ಅಂಗಡಿಯವರು ಸಕ್ಕರೆ ಗೊಂಬೆಗಳನ್ನು ಖರೀದಿಸಿ ಮಾರಾಟ ಮಾಡುತ್ತಾರೆ.

ಪ್ರತಿ ವರ್ಷ 5ರಿಂದ 6 ಕ್ವಿಂಟಲ್‌ ಸಕ್ಕರೆ ಗೊಂಬೆಗಳನ್ನು ಮಾರಾಟ ಮಾಡುತ್ತಾರೆ. ಸಕ್ಕರೆ ಗೊಂಬೆಗಳ ತಯಾರಕ ಶಿವಪ್ಪ ಜಾಕ ಮಾತನಾಡಿ, ಬೆಲೆ ಏರಿಕೆಯ ಬಿಸಿ ಸಕ್ಕರೆ ಆರತಿ ತಯಾರಕರಿಗೂ ತಟ್ಟಿದ್ದು ಕಳೆದ ಬಾರಿ 35 ರೂ. ಇದ್ದ ಸಕ್ಕರೆ ಬೆಲೆ ಇಂದು 45 ರೂ. ಗೆ ಏರಿಕೆಯಾಗಿದೆ.

ಅಡುಗೆ ಅನಿಲದ ಬೆಲೆಯೂ ಹೆಚ್ಚಳವಾಗಿರುವುದರಿಂದ ಸಕ್ಕರೆ ಆರತಿ ತಯಾರಿಕೆ ವೆಚ್ಚ ಅ ಧಿಕವಾಗಿದೆ. ಈ ವರ್ಷ ಮಾರುಕಟ್ಟೆಯಲ್ಲಿ ಒಂದು ಕೆಜಿ ಸಕ್ಕರೆ ಆರತಿ ಗೊಂಬೆಗಳಿಗೆ 130ರಿಂದ 150 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next