ಕರಾವಳಿ ಸಮೂಹ ಕಾಲೇಜುಗಳ ಪದವಿ ಪ್ರದಾನ
ಮಂಗಳೂರು: ಧನಾತ್ಮಕ ಚಿಂತನೆಯೊಂದಿಗೆ ಕಾರ್ಯ ಸಾಧನೆಗೆ ಇಳಿದಲ್ಲಿ ಯಶಸ್ಸು ನಿಶ್ಚಿತ. ವಿದ್ಯಾರ್ಥಿ ಗಳು ಪೂರಕ ಮನಃಸ್ಥಿತಿ ಬೆಳೆಸಿ ಬದುಕು ರೂಪಿಸಬೇಕು ಎಂದು ಜಿ.ಆರ್. ಎಜುಕೇಶನ್ ಟ್ರಸ್ಟ್‌ನ ಸ್ಥಾಪಕ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಎಸ್. ಗಣೇಶ್ ರಾವ್ ಅಭಿಪ್ರಾಯಪಟ್ಟರು.
ನೀರುಮಾರ್ಗದಲ್ಲಿರುವ ಕರಾವಳಿ ತಾಂತ್ರಿಕ ಕಾಲೇಜಿನಲ್ಲಿ ಜರಗಿದ ಕರಾವಳಿ ಸಮೂಹ ಕಾಲೇಜುಗಳ ಪದವಿ ಪ್ರದಾನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಶನಿವಾರ ಉದ್ಘಾಟಿಸಿದರು.
ಮನುಷ್ಯನ ಯೋಚನಾ ಲಹರಿ ಯಾವಾಗಲೂ ಧನಾತ್ಮಕ ಹಾದಿಯತ್ತ ಸಾಗುತ್ತಿರಬೇಕು. ಇದರಿಂದ ಬದುಕಿ ನಲ್ಲಿ ಸಂತಸದೊಂದಿಗೆ ನೆಮ್ಮದಿಯೂ ದೊರಕುತ್ತದೆ. ವಿದ್ಯಾರ್ಥಿ ಜೀವನದಲ್ಲಿರುವಾಗಲೇ ಇಂತಹ ಅಂಶಗಳನ್ನು ಮೈಗೂಡಿಸಿಕೊಂಡರೆ ಭವಿಷ್ಯದಲ್ಲಿ ಉನ್ನತಿ ಹೊಂದಲು ಸಾಧ್ಯವಿದೆ. ಭಾರತೀಯತೆಯನ್ನು ಅನುಸರಿಸುವು ದರೊಂದಿಗೆ ಜೀವನದ ಯಶಸ್ಸಿನತ್ತ ವಿದ್ಯಾರ್ಥಿಗಳು ಸಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕರಾವಳಿ ಸಮೂಹ ಕಾಲೇಜಿನ ನಿರ್ದೇಶಕಿ ಲತಾ ಜಿ. ರಾವ್ ಗೌರವ ಅತಿಥಿಯಾಗಿದ್ದರು. ಕರಾವಳಿ ಸಮೂಹದ ವಿವಿಧ ಕಾಲೇಜುಗಳ ಪ್ರಾಂಶು ಪಾಲರಾದ ನಾರಾಯಣ ಸ್ವಾಮಿ, ಮೋಲಿ ಸಲ್ದಾನ, ಪ್ರೊ| ಮೋಹನ್ ನಾೖಕ್, ರಾಮಕೃಷ್ಣ ಭಟ್, ಅಕಾಡೆಮಿಕ್ ಡೀನ್ ಡಾ| ಅಮರನಾಥ ಶೆಟ್ಟಿ, ಡಾ| ದಶರಥಿ ಉಪಸ್ಥಿತರಿದ್ದರು.
ಸುಮಾರು 700 ಮಂದಿ ವಿದ್ಯಾರ್ಥಿ ಗಳು ಪದವಿ ಸ್ವೀಕರಿಸಿದರು. ಮಂಗಳೂರು ವಿ.ವಿ. ಮಟ್ಟದಲ್ಲಿ ಬಿಎಸ್ಸಿ ಫ್ಯಾಶನ್ ಡಿಸೈನಿಂಗ್‌ನಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ವಿಶಾಲಾಕ್ಷಿ ಜೆ. ಅಮ್ಮಲ್, ದ್ವಿತೀಯ ರ್‍ಯಾಂಕ್ ಪಡೆದ ಲಿಜಿ ಕೆ. ಹಾಗೂ ಬಿಎಚ್‌ಎಂನಲ್ಲಿ ದ್ವಿತೀಯ ರ್‍ಯಾಂಕ್ ಪಡೆದ ಮಹೇಶ್ ಬಾಲಕೃಷ್ಣನ್ ಅವರನ್ನು ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೋಹನ್ ಫೆರ್ನಾಂಡಿಸ್ ಸ್ವಾಗತಿಸಿ ದರು. ಲಾವೆಂಡರ್ ನಿರ್ವಹಿಸಿದರು.