Advertisement
ನಗರದ ಮೆಕ್ಕೆ ವೃತ್ತದಲ್ಲಿರುವ ತಾಲೂಕು ಕಚೇರಿಗೆ ಶುಕ್ರವಾರ ಮಧ್ಯಾಹ್ನ ೪ ಗಂಟೆ ಸುಮಾರಿಗೆ ತನ್ನ ಕಚೇರಿ ಸಿಬ್ಬಂದಿ ಜೊತೆ ದ್ವಿಚಕ್ರ ವಾಹನದಲ್ಲಿ ಖುದ್ದು ಸಾಮಾನ್ಯಳಂತೆ ಆಗಮಿಸಿದ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮರಿಗೂ ಜನರ ಕಷ್ಟ ಅರಿವಾಯಿತು. ಸಾರ್ವಜನಿಕರು ತಾಲೂಕು ಕಚೇರಿಯಿಂದ ಕೆಲಸ ಕಾರ್ಯ ಮಾಡಿಸಿಕೊಳ್ಳಲು, ಅಗತ್ಯದಾಖಲೆಗಳನ್ನು ಪಡೆದುಕೊಳ್ಳಲು ಹೇಗೆಲ್ಲಾ ಪರದಾಟ ನಡೆಸುತ್ತಾರೆ, ಏನೆಲ್ಲಾ ಪಡಿಪಾಟಲು ಬೀಳಬೇಕಾಗುತ್ತದೆಯೆಂಬುದನ್ನು ಸ್ವತಹ ತಾವೇ ಅನುಭವಿಸಿದರು.
Related Articles
Advertisement
ತಲೆ ತಗ್ಗಿಸಿಕೊಂಡು ನಿಲ್ಲುವ ಮೂಲಕ ತಹಶೀಲ್ದಾರ್ ನಾಗರಾಜ್ ಮತ್ತವರ ಸಿಬ್ಬಂದಿ ಕಚೇರಿಯ ಅವ್ಯವಸ್ಥೆಗಳಿಗೆ ಮೌನ ಸಮ್ಮತಿಯನ್ನೊತ್ತಿದರು. ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಲೋಪವೆಸಗಿರುವ ಅಧಿಕಾರಿ, ಸಿಬ್ಬಂದಿಗೆ ಶೋಕಾಸ್ ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ ಅಲ್ಲಿಂದ ತೆರಳಿದರು.
ಕೋಲಾರ ತಾಲೂಕು ಕಚೇರಿಯ ಅವ್ಯವಸ್ಥೆಗಳ ಕುರಿತಂತೆ ಅದರಲ್ಲೂ ದಾಖಲೆ ವಿಭಾಗದಲ್ಲಿನ ಅಕ್ರಮಗಳ ಕುರಿತಂತೆ ಸಾರ್ವಜನಿಕರು ಸಾಕಷ್ಟು ಆರೋಪಗಳನ್ನು ಮಾಡುತ್ತಲೇ ಇದ್ದರು. ಆದರೂ, ಕಚೇರಿಯ ಕಾರ್ಯಕಲಾಪಗಳಲ್ಲಿ ಯಾವುದೇ ಜನಸ್ನೇಹಿ ಬದಲಾವಣೆಗಳಾಗಿರಲಿಲ್ಲ. ಇದೀಗ ಉಪ ವಿಭಾಗಾಧಿಕಾರಿ ವೆಂಕಟಕ್ಷ್ಮಮ್ಮನವರೇ ಸಾಮಾನ್ಯರಂತೆ ಬಂದು ಸಾರ್ವಜನಿಕರ ಕಷ್ಟಗಳನ್ನು ಖುದ್ದು ಅನುಭವಿಸಿ, ಸಂಬಂಧಪಟ್ಟವರನ್ನು ತರಾಟೆಗೂ ತೆಗೆದುಕೊಂಡಿದ್ದಾರೆ. ಇನ್ನಾದರೂ ಕೋಲಾರ ತಾಲೂಕು ಕಚೇರಿ ಅವ್ಯವಸ್ಥೆ ಬದಲಾದೀತೇ ಎಂದು ಸಾರ್ವಜನಿಕರು ಆಶಿಸುತ್ತಿದ್ದಾರೆ
ಕೆ.ಎಸ್.ಗಣೇಶ್