Advertisement
ತಾಲೂಕು ರಚನೆಗಾಗಿ ಕಾಪು ಶಾಸಕ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಹೋರಾಟ ಸಮಿತಿ ರಚನೆಯಾದಾಗ ಬೆಂಬಲಿಸಿದ್ದ ವಿಪಕ್ಷದಮಂದಿ ಮುಂದೆ ಹೋರಾಟ ತೀವ್ರಗೊಂಡಾಗ ರಾಜಕೀಯ ಕಾರಣಗಳಿಂದ ದೂರ ಉಳಿದಿದ್ದರು. ಇದೀಗ ಕಾಪು ತಾಲೂಕು ಘೋಷಣೆಯಾಗಿರುವುದು ವಿರೋಧ ಪಕ್ಷದವರ ಬಾಯಿ ಮುಚ್ಚಿಸಿದೆ ಎಂದು ಡಾ| ಶೆಟ್ಟಿ ಹೇಳಿದರು.
ಜನತೆಯ ಮೂಲ ಆಶಯದತೆ ಐತಿಹಾಸಿಕ ಕಾಪು ಪಟ್ಟಣ ಐಎಸ್‌ಪಿಆರ್‌ಎಲ್, ಯುಪಿಸಿ ಎಲ್, ಸುಜ್ಲಾನ್‌ನಂತಹ ಬೃಹತ್ ಕೈಗಾರಿಕೆಗಳಿಂದ, ಕಾಪು ದ್ವೀಪಸ್ತಂಭ, ಪಡುಬಿದ್ರಿ ಬೀಚ್ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಂದ ಪ್ರವಾಸೋದ್ಯಮ ನಿಟ್ಟಿನಲ್ಲಿಯೂ ಮಂಗಳೂರು ವಿ.ವಿ. ವಿಜ್ಞಾನ ಕೇಂದ್ರ ಸ್ಥಾಪನೆ, ಐಟಿಐ ಸ್ಥಾಪನೆಯಿಂದ ಶೈಕ್ಷಣಿಕ ಕೇಂದ್ರವಾಗಿಯೂ ಮಾರ್ಪಟಾಗಿದ್ದು, ಈಗಾಗಲೇ ಕೇಂದ್ರ ಸ್ಥಾನವಾಗಿ ಗುರುತಿಸಲ್ಪಟ್ಟಿದೆ. ತಾನು ಶಾಸಕನಾಗಿ ಆಯ್ಕೆಯಾದ ಬಳಿಕದ ಪ್ರಥಮ ಸಭೆಯಲ್ಲೇ ಕಾಪುವನ್ನು ಪುರಸಭೆ, ಕಾಪು ತಾಲೂಕು ಕೇಂದ್ರವನ್ನಾಗಿಸುವ ಪಣತೊಟ್ಟ ಸೊರಕೆ ಅವರು ನುಡಿದಂತೆ ನಡೆದು ತೋರಿಸಿದ ಧೀಮಂತ ರಾಜಕಾರಣಿ ಎಂದೂ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.