Advertisement
ಇಫಿ ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಸೆಣಸುತ್ತಿರುವ ಅನಂತ್ ನಾರಾಯಣ್ ಮಹಾದೇವನ್ ಅವರ ’ದಿ ಸ್ಟೋರಿ ಟೆಲ್ಲರ್’ ಚಿತ್ರದ ಪ್ರಧಾನ ಪಾತ್ರ ನಿರ್ವಹಿಸಿರುವ ಅದಿಲ್ ಹುಸೇನ್ ಹೇಳಿದ ಮಾತಿದು.
Related Articles
Advertisement
ಒಂದು ಕಲೆಯ ಮುಖ್ಯ ಉದ್ದೇಶವೇ ನಮ್ಮನ್ನು ನಮ್ಮ ಅಸ್ತಿತ್ವದ ಕುರಿತೇ ಪ್ರಶ್ನೆಗಳನ್ನು ಕೇಳುವಂತೆ ಸಶಕ್ತಗೊಳಿಸುವುದು. ಸಿನಿಮಾ ಎಂದರೆ ಬರೀ ದುಡ್ಡು ಮಾಡುವುದಲ್ಲ; ಜಾಗೃತಿ ಮೂಡಿಸುವುದೂ ಸಹ ಅದರ ಹೊಣೆಗಾರಿಕೆ ಎಂಬುದು ಅದಿಲ್ ಹುಸೇನ್ ಅಭಿಪ್ರಾಯ.
ಈ ಚಿತ್ರ ಕೃತಿಚೌರ್ಯದ ಕುರಿತು ಪ್ರಬಲವಾದ ಸಂದೇಶವನ್ನು ನೀಡುತ್ತದೆ. ಮೂರು ವರ್ಷಗಳ ಸುದೀರ್ಘ ಹಾಗೂ ಸವಾಲಿನ ಪಯಣದ ಬಳಿಕವೂ ಸಂತೋಷ ಸಿಕ್ಕಿದೆ ಎಂದವರು ಚಿತ್ರದ ನಿರ್ಮಾಪಕ ಸುಚ್ಚಂದಾ ಚಟರ್ಜಿ.
ಅನಂತ್ ನಾರಾಯಣ್ ಮಹಾದೇವನ್ ಚಿತ್ರ ನಿರ್ದೆಶಿಸಿದ್ದರೆ, ಕಿರೀಟ್ ಖುರಾನಾ ಚಿತ್ರಕಥೆ ಬರೆದಿದ್ದಾರೆ. ಅಲ್ಫೋನ್ಸ್ ರಾಯ್ ಸಿನೆ ಛಾಯಾಗ್ರಹಣ, ಗೌರವ್ ಗೋಪಾಲ್ ಝಾರ ಸಂಕಲನವಿದೆ. ಪಾತ್ರವರ್ಗದಲ್ಲಿ ಪರೇಶ್ ರಾವಲ್, ಅದಿಲ್ ಹುಸೇನ್, ರೇವತಿ, ತನಿಶ್ತಾ ಚಟರ್ಜಿ, ಜಯೇಶ್ ಮತ್ತಿತರರು ಇದ್ದಾರೆ.
ತರಿಣಿ ರಂಜನ್ ಬಂಡೋಪಾಧ್ಯಾಯ ಒಬ್ಬ ಕಥೆ ಹೇಳುವವ. ಒಂದು ಉದ್ಯೋಗಕ್ಕೆ ಅಂಟಿಕೊಳ್ಳದೇ 32 ಉದ್ಯೋಗಗಳನ್ನು ಬದಲಾಯಿಸಿರುವವ. ಈಗ 60 ಆಗಿದೆ. ನಿವೃತ್ತಿ ತೆಗೆದುಕೊಂಡಿದ್ದಾನೆ. ಕೋಲ್ಕತ್ತಾವಾಸಿ. ಆದರೆ ಅವನನ್ನು ಬಲವಾಗಿ ಕಾಡುತ್ತಿರುವ ಒಂದೇ ಒಂದು ಸಂಗತಿಯೆಂದರೆ ’ತನ್ನ ಪತ್ನಿಗೆ ಸಾಕಷ್ಟು ಸಮಯ ನೀಡದಿರುವುದು. ಈಗ ಅವನು ಎಲ್ಲದರಿಂದ ಮುಕ್ತಿ, ಸ್ವತಂತ್ರ, ಸಾಕಷ್ಟು ಸಮಯವಿದೆ. ಆದರೆ ಉಳಿದವರಾರೂ ಅವನ ಬಳಿಇಲ್ಲ ಎಂಬುದೇ ವಿರೋಧಾಭಾಸ.