Advertisement

ವೆಬ್‌ ಸೀರಿಸ್‌ನಲ್ಲಿ ವೀರಪ್ಪನ್‌ ಕಥೆ; ಅಟ್ಟಹಾಸ ನಿರ್ದೇಶಕರ ಮತ್ತೂಂದು ಪ್ರಯತ್ನ

08:39 AM Jul 24, 2020 | mahesh |

ವೀರಪ್ಪನ್‌ ಕಥೆಯಾವತ್ತಿಗೂ ರೋಚಕ. ಕೆದಕಿದಷ್ಟೂ ಕುತೂಹಲ ಹೆಚ್ಚಿಸುತ್ತಲೇ ಹೋಗುತ್ತದೆ. ಅದೇ ಕಾರಣದಿಂದ ಸಿನಿಮಾ ಮಂದಿ ವೀರಪ್ಪನ್‌ ಕಥೆಗಳಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈಗಾಗಲೇ ವೀರಪ್ಪನ್‌ ಕುರಿತು ಹಲವು ಸಿನಿಮಾಗಳು ಬಂದಿವೆ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲೂ ತೆರೆಮೇಲೆ ವೀರಪ್ಪನ್‌ ಕಥೆಗಳು ಅಬ್ಬರಿಸುವೆ.

Advertisement

ಕನ್ನಡದಲ್ಲಿ ಎ.ಎಂ.ಆರ್‌.ರಮೇಶ್‌ ಅಟ್ಟಹಾಸ ಎಂಬ ಸಿನಿಮಾ ಮಾಡಿ, ಆ ಮೂಲಕ ವೀರಪ್ಪನ್‌ ಕಥೆ ಹೇಳಿದ್ದು ನಿಮಗೆ ಗೊತ್ತೇ ಇದೆ. ಈಗ ರಮೇಶ್‌ ಅವರು ಮತ್ತೆ ವೀರಪ್ಪನ್‌
ಕಥೆಯೊಂದಿಗೆ ಬರಲು ಸಿದ್ಧರಾಗಿದ್ದಾರೆ. ಈ ಬಾರಿ ದೊಡ್ಡ ಪರದೆ ಮೇಲೆ ಅಲ್ಲ, ಬದಲಾಗಿ ವೆಬ್‌ ಸೀರೀಸ್‌. ಹೌದು, ರಮೇಶ್‌ ಅವರು ವೀರಪ್ಪನ್‌ ಕುರಿತಾಗಿ ವೆಬ್‌ ಸೀರಿಸ್‌ ಮಾಡಲು ಮುಂದಾಗಿದ್ದಾರೆ. ಈ ವೆಬ್‌ ಸೀರಿಸ್‌ನಲ್ಲಿ ಕಿಶೋರ್‌ ಹಾಗೂ ಅರ್ಜುನ್‌ ಸರ್ಜಾ ಪ್ರಮುಖ ಪಾತ್ರ ಮಾಡಲಿದ್ದಾರಂತೆ.

ಒಮ್ಮೆ ವೀರಪ್ಪನ್‌ ಕುರಿತು ಸಿನಿಮಾ ಮಾಡಿರುವ ರಮೇಶ್‌ ಈಗ ಮತ್ತೆ ವೆಬ್‌ ಸೀರಿಸ್‌ ಮಾಡಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ರಮೇಶ್‌ ಬಳಿ ಇರುವ ಮತ್ತಷ್ಟು ಮಾಹಿತಿಗಳು. ಅಟ್ಟಹಾಸದಲ್ಲಿ ಕರ್ನಾಟಕ ಪೊಲೀಸರ ಸಾಹಸದ  ಕುರಿತಾಗಿ ಹೆಚ್ಚು ಹೇಳಲು ಅವರಿಗೆ ಸಾಧ್ಯವಾಗಿರಲಿಲ್ಲವಂತೆ. ಈಗ ವೆಬ್‌ ಸೀರಿಸ್‌ನಲ್ಲಿ ಎಲ್ಲವನ್ನೂ ಹೇಳಲು
ಮುಂದಾಗಿದ್ದಾರಂತೆ. ಈಗಾಗಲೇ ವೆಬ್‌ ಸೀರಿಸ್‌ ತಯಾರಿಯಲ್ಲಿ ರಮೇಶ್‌ ತೊಡಗಿದ್ದು, ಅವರ ಬಳಿ ಒಂದೂವರೆ ಗಂಟೆ ತಯಾರಿದೆಯಂತೆ. ಒಟ್ಟು ಹತ್ತು ಗಂಟೆಗಳಲ್ಲಿ ಈ ವೆಬ್‌ ಸೀರಿಸ್‌ ಮಾಡಲಿದ್ದು, 45 ನಿಮಿಷಗಳ 12 ಅಥವಾ 14ಎಪಿಸೋಡ್‌ಗಳನ್ನು ಮಾಡುವ ಉದ್ದೇಶ ಅವರಿಗಿದೆಯಂತೆ. ಆಗಸ್ಟ್‌ನಿಂದ ಈ ವೆಬ್‌ ಸೀರಿಸ್‌ನ ಚಿತ್ರೀಕರಣ ಕೂಡಾ ಆರಂಭವಾಗಲಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next